ಸುದ್ದಿಗಳು

ಸಕಾಲಕ್ಕೆ ತಲುಪದೆ ರದ್ದಾದ ಆಹಾರ ಪೂರೈಕೆ: ದಂಡದ ಜೊತೆ ಉಚಿತ ಊಟ ನೀಡುವಂತೆ ಜೊಮ್ಯಾಟೊಗೆ ಸೂಚಿಸಿದ ಗ್ರಾಹಕ ನ್ಯಾಯಾಲಯ

ಮೇಲ್ಮನವಿದಾರರು ಜೊಮ್ಯಾಟೊದಲ್ಲಿ ಆಹಾರಕ್ಕಾಗಿ ಆರ್ಡರ್ ಮಾಡಿದ್ದರು. ʼಸಕಾಲಕ್ಕೆ ಊಟ ರವಾನೆ ಇಲ್ಲವೇ ಉಚಿತʼ ಆಯ್ಕೆಯಡಿ ಹೆಚ್ಚುವರಿಯಾಗಿ ₹ 10 ಹಣ ಪಾವತಿಸಿದ್ದರು. ಆದರೆ ಆಹಾರ ಅರ್ಜಿದಾರರಿಗೆ ತಲುಪದೆ ಕಡೆಗೆ ರದ್ದಾಗಿತ್ತು.

Bar & Bench

ʼಸಕಾಲಕ್ಕೆ ಊಟ ರವಾನೆ ಇಲ್ಲವೇ ಉಚಿತʼ (ಆನ್‌ಟೈಮ್‌ ಆರ್‌ ಫ್ರೀ) ಆಯ್ಕೆಯಡಿ ಆಹಾರ ಪೂರೈಸದ ಕಾರಣಕ್ಕೆ ಗ್ರಾಹಕರೊಬ್ಬರಿಗೆ ಪರಿಹಾರ ರೂಪದಲ್ಲಿ ₹ 10,000 ದಂಡ ಮತ್ತು ಉಚಿತ ಊಟ ನೀಡುವಂತೆ ದೇಶದ ಪ್ರಮುಖ ಆನ್‌ಲೈನ್‌ ಆಹಾರ ವಿತರಣಾ ಕಂಪೆನಿ ಜೊಮ್ಯಾಟೊಗೆ ಚಂಡೀಗಢದ ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ (ಎಸ್‌ಸಿಡಿಆರ್‌ಸಿ) ಇತ್ತೀಚೆಗೆ ಆದೇಶಿಸಿದೆ [ಅಜಯ್‌ ಕುಮಾರ್‌ ಶರ್ಮಾ ಮತ್ತು ಜೊಮಾಟೊ ನಡುವಣ ಪ್ರಕರಣ].

ಜಾಹಿರಾತುಗಳಲ್ಲಿನ ಭರವಸೆ ಈಡೇರಿಸಲು ಸಾಧ್ಯವಾಗದಿದ್ದರೆ ಅಂತಹ ಜಾಹೀರಾತು ಅಥವಾ ಪ್ರಚಾರ ಪ್ರಕಟಣೆಗಳನ್ನು ನೀಡಬಾರದು ಎಂದು ಆಯೋಗದ ಅಧ್ಯಕ್ಷರಾದ ನ್ಯಾಯಮೂರ್ತಿ ರಾಜ್ ಶೇಖರ್ ಅತ್ರಿ ಮತ್ತು ಸದಸ್ಯ ನ್ಯಾಯಮೂರ್ತಿ ರಾಜೇಶ್ ಕೆ ಆರ್ಯ ಅವರು ಆದೇಶಿಸಿದರು.

ಸೇವೆ ಒದಗಿಸುವಲ್ಲಿನ ಕೊರತೆ ಮತ್ತು ಅನ್ಯಾಯದ ವ್ಯಾಪಾರ ಪ್ರಕ್ರಿಯೆಗಾಗಿ ಹಾಗೂ ಅರ್ಜಿದಾರರರು ಅಪಾರ ದೈಹಿಕ ಮತ್ತು ಮಾನಸಿಕ ಸಂಕಟ ಅನುಭವಿಸುವಂತೆ ಮಾಡಿದ್ದಕ್ಕಾಗಿ ಪ್ರತಿವಾದಿಗಳು ಪರಿಹಾರ ನೀಡಲು ಜವಾಬ್ದಾರರು ಎಂದು ಆಯೋಗ ಹೇಳಿತು. ಆಹಾರ ಪೂರೈಕೆ ಬರೀ ತಡವಾಗಿಲ್ಲ. ಬದಲಿಗೆ ಸಂಪೂರ್ಣ ರದ್ದಾಗಿದೆ ಎಂಬ ಅಂಶವನ್ನು ಆಯೋಗ ಪರಿಗಣಿಸಿತು.

ಮೇಲ್ಮನವಿದಾರರು ಜೊಮಾಟೊದಲ್ಲಿ ಆಹಾರಕ್ಕಾಗಿ ಆರ್ಡರ್‌ ಮಾಡಿದ್ದರು. ʼಸಕಾಲಕ್ಕೆ ಊಟ ರವಾನೆ ಇಲ್ಲವೇ ಉಚಿತʼ ಆಯ್ಕೆಯಡಿ ಹೆಚ್ಚುವರಿಯಾಗಿ ₹ 10 ಹಣ ಪಾವತಿಸಿದ್ದರು. ಆದರೆ ಆಹಾರ ಅರ್ಜಿದಾರರಿಗೆ ತಲುಪದೆ ಕಡೆಗೆ ರದ್ದಾಗಿತ್ತು.