Triple talaq
Triple talaq 
ಸುದ್ದಿಗಳು

ತ್ರಿವಳಿ ತಲಾಖ್ ಕುರಿತ ತೀರ್ಪು ಭವಿಷ್ಯಕ್ಕೂ ಅನ್ವಯವೆಂದು ಸುಪ್ರೀಂ ವಿಷದಪಡಿಸಿಲ್ಲ: ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್

Bar & Bench

ಶಾಯರಾ ಬಾನೊ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ 2017ರಲ್ಲಿ ತೀರ್ಪು ನೀಡಿದ್ದು ಇದಕ್ಕೂ ಹಿಂದಿನ ತ್ರಿವಳಿ ತಲಾಖ್‌ ಪ್ರಕರಣಗಳಿಗೂ ಈ ತೀರ್ಪು ಅನ್ವಯವಾಗಲಿದೆ ಎಂದು ಜಮ್ಮು- ಕಾಶ್ಮೀರ ಮತ್ತು ಲಡಾಖ್‌ ಹೈಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ.

ಅದಕ್ಕೂ ಮೂರು ವರ್ಷಗಳ ಹಿಂದೆ ಅಂದರೆ 2014ರಲ್ಲಿ ತ್ರಿವಳಿ ತಲಾಖ್‌ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದ ಮನವಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ಸಂಜೀವ್‌ ಕುಮಾರ್‌ ಅವರು ಸುಪ್ರೀಂಕೋರ್ಟ್‌ ತೀರ್ಪು ಭವಿಷ್ಯದಲ್ಲಿ ಕೂಡ ಅನ್ವಯವಾಗಲಿದೆ ಎಂಬುದನ್ನು ಸ್ಪಷ್ಟಪಡಿಸಿಲ್ಲ ಎಂದು ಹೇಳಿದರು.

“ಕಾನೂನಿನ ದೃಷ್ಟಿಯಲ್ಲಿ ತ್ರಿವಳಿ ತಲಾಖ್‌ ಅನ್ನು ಅನೂರ್ಜಿತ ಎಂದು ಘೋಷಿಸುವಾಗ ಗೌರವಾನ್ವಿತ ಸುಪ್ರೀಂಕೋರ್ಟ್‌ ಭವಿಷ್ಯದಲ್ಲೂ ತೀರ್ಪನ್ನು ಜಾರಿಗೆ ತರುವ ಕುರಿತಂತೆ ಸ್ಪಷ್ಟಪಡಿಸಿಲ್ಲ. ಶಾಯರಾ ಬಾನೊ ಪ್ರಕರಣದಲ್ಲಿ ಮಾನ್ಯ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಅದು ಜಾರಿಗೆ ಬರುವ ಹಿಂದಿನ 'ತ್ರಿವಳಿ ತಲಾಕ್' ಪ್ರಕರಣಗಳಿಗೂ ಸಮಾನವಾಗಿ ಅನ್ವಯಿಸುತ್ತದೆ” ಎಂದು ಆದೇಶ ತಿಳಿಸಿದೆ.

ಪ್ರಸ್ತುತ ಪ್ರಕರಣಕ್ಕೆ ಶಾಯರಾ ಬಾನೊ ಪ್ರಕರಣದಲ್ಲಿನ ತೀರ್ಪನ್ನು ಅನ್ವಯಿಸಿ 2019ರಲ್ಲಿ ಹೈಕೋರ್ಟ್‌ ನೀಡಿದ್ದ ತೀರ್ಪನ್ನು ಹಿಂಪಡೆಯಬೇಕು ಎಂದು ಕೋರಿ ಮಹಿಳೆಯೊಬ್ಬರ ಪತಿ ಸಲ್ಲಿಸಿದ ಮನವಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

ಶಾಯರಾ ಬಾನೊ ಪ್ರಕರಣಕ್ಕೆ ಸಂಬಂಧಿಸಿದಂತೆ 2017ರಲ್ಲಿ ತೀರ್ಪು ಬಂದಿದೆ. ಆದರೆ ತ್ರಿವಳಿ ತಲಾಖ್‌ಗೆ ಸಂಬಂಧಿಸಿದ ಪ್ರಸ್ತುತ ಪ್ರಕರಣ ನಡೆದಿರುವುದು 2014 ರಲ್ಲಿ. ಹಾಗಾಗಿ ಶಾಯರಾ ಬಾನೊ ಪ್ರಕರಣದ ತೀರ್ಪು ಇದಕ್ಕೆ ಅನ್ವಯಿಸದು. ಈ ಹಿನ್ನೆಲೆಯಲ್ಲಿ, ಸಂವಿಧಾನ ಪೀಠ 2014ರಲ್ಲಿ ನೀಡಿದ್ದ ತೀರ್ಪನ್ನು 'ತ್ರಿವಳಿ ತಲಾಖ್'ನ ಸಿಂಧುತ್ವ ಘೋಷಿಸಲು ಅನ್ವಯಿಸಲಾಗದು ಎಂದು ವಾದಿಸಲಾಯಿತು.

"ಶಾಯಾರಾ ಬಾನೊ ಪ್ರಕರಣದಲ್ಲಿ ನೀಡಲಾದ ತೀರ್ಪು ಭವಿಷ್ಯಕ್ಕೂ ನಿರ್ದಿಷ್ಟವಾಗಿ ಅನ್ವಯಿಸುವಂತೆ ಹೇಳಿಲ್ಲವೆಂದ ಮೇಲೆ ಅದನ್ನು ಈ ಹಿಂದಿನ ತೀರ್ಪುಗಳಿಗೂ ಹಾಗೂ ಬಾಕಿ ಇರುವ ಪ್ರಕರಣಗಳಿಗೂ ನಿರ್ದಿಷ್ಟವಾಗಿ ಅನ್ವಯಿಸಬೇಕು ಎಂದೇನೂ ಇಲ್ಲ ಎನ್ನುವ ವಾದವು ಸಮರ್ಥನೀಯವಲ್ಲ," ಎಂದು ನ್ಯಾಯಾಲಯವು ತಿಳಿಸಿತು.