Land Grabbing Prohibition Special Court  
ಸುದ್ದಿಗಳು

ಒಂದು ಗುಂಟೆ ಒತ್ತುವರಿ ಮಾಡಿ ಮನೆ ನಿರ್ಮಾಣ: ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದ ವಿಶೇಷ ನ್ಯಾಯಾಲಯ

ಉತ್ತರ ಕನ್ನಡದ ಭಟ್ಕಳ ತಾಲ್ಲೂಕು ತಹಶೀಲ್ದಾರ್‌ ನೀಡಿದ್ದ ದೂರನ್ನು ವಿಶೇಷ ನ್ಯಾಯಾಲಯದ ಅಧ್ಯಕ್ಷರೂ ಆದ ನ್ಯಾಯಮೂರ್ತಿ ಬಿ ಎ ಪಾಟೀಲ್ ಮತ್ತು ಕಂದಾಯ ಸದಸ್ಯ ಎಸ್‌ ಪಾಲಯ್ಯ ಅವರಿದ್ದ ಪೀಠವು ವಿಚಾರಣೆ ನಡೆಸಿತು.

Bar & Bench

ಉತ್ತರ ಕನ್ನಡ ಜಿಲ್ಲೆ ಭಟ್ಕಳ ತಾಲ್ಲೂಕು ಸೂಸಗಡಿ ಹೋಬಳಿಯ ವೆಂಕಟಾಪುರದ ಸರ್ವೇ ನಂ.102ರಲ್ಲಿ ರಾಜ್ಯ ಸರ್ಕಾರಕ್ಕೆ ಸೇರಿದ ಒಂದು ಗುಂಟೆ ಜಮೀನನ್ನು ಒತ್ತುವರಿ ಮಾಡಿ ಮನೆ ನಿರ್ಮಿಸಿಕೊಂಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಉಲ್ಲಾಸ ಶಿವರಾಮ ನಾಯ್ಕ ಅವರಿಗೆ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯವು ಒಂದು ವರ್ಷ ಸಾಧಾರಣ ಜೈಲು ಶಿಕ್ಷೆ ಮತ್ತು ₹10 ಸಾವಿರ ದಂಡ ವಿಧಿಸಿದೆ.

ಉತ್ತರ ಕನ್ನಡದ ಭಟ್ಕಳ ತಾಲ್ಲೂಕು ತಹಶೀಲ್ದಾರ್‌ ನೀಡಿದ್ದ ದೂರನ್ನು ವಿಶೇಷ ನ್ಯಾಯಾಲಯದ ಅಧ್ಯಕ್ಷರೂ ಆದ ನ್ಯಾಯಮೂರ್ತಿ ಬಿ ಎ ಪಾಟೀಲ್ ಮತ್ತು ಕಂದಾಯ ಸದಸ್ಯ ಎಸ್‌ ಪಾಲಯ್ಯ ಅವರಿದ್ದ ಪೀಠವು ವಿಚಾರಣೆ ನಡೆಸಿತು.

ಆರೋಪಿ ಒತ್ತುವರಿ ಮಾಡಿಕೊಂಡಿರವ ಸರ್ಕಾರಿ ಜಮೀನನ್ನು ಕಾನೂನು ಪ್ರಕಾರ ಸಂರಕ್ಷಣೆ ಮಾಡಿ ವರದಿ ಸಲ್ಲಿಸುವಂತೆ ಭಟ್ಕಳ ತಹಶೀಲ್ದಾರ್‌ ಅವರಿಗೆ ನ್ಯಾಯಾಲಯವು ನಿರ್ದೇಶಿಸಿದೆ.