ಸ್ಪೈಸ್‌ಜೆಟ್ ಅನ್ನು ಮುಚ್ಚುವ ಕಂಪೆನಿ ಆದೇಶದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದ್ದ ಮದ್ರಾಸ್ ಹೈಕೋರ್ಟ್ ತೀರ್ಪಿನ ವಿರುದ್ಧ ವಿಮಾನಯಾನ ಸಂಸ್ಥೆಯು ಸುಪ್ರೀಂಕೋರ್ಟ್ ಕದ ತಟ್ಟಿದೆ. ಪ್ರಕರಣವನ್ನು ತುರ್ತು ಆದ್ಯತೆಯ ಮೇಲೆ ಆಲಿಸದಿದ್ದರೆ ಸ್ಪೈಸ್‌ಜೆಟ್ ಋಣವಿಮೋಚನೆ ಪ್ರಕ್ರಿಯೆಗೆ ಒಳಗಾಗಿ ಮುಚ್ಚಲ್ಪಡಲಿದೆ ಎಂದು ಹಿರಿಯ ವಕೀಲ ಮುಕುಲ್ ರೋಹಟ್ಗಿ ಅವರು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್ ವಿ ರಮಣ ಅವರ ಮುಂದೆ ಪ್ರಕರಣ ಪ್ರಸ್ತಾಪಿಸಿದರು. ಗುರುವಾರ ವಿಚಾರಣೆ ನಡೆಸುವಂತೆ ವಕೀಲರು ಮಾಡಿದ ಮನವಿಗೆ ನ್ಯಾಯಮೂರ್ತಿಗಳು ಪೂರಕವಾಗಿ ಸ್ಪಂದಿಸಿದರು.
ಹೆಚ್ಚಿನ ಮಾಹಿತಿಗೆ ʼಬಾರ್ ಅಂಡ್ ಬೆಂಚ್ʼ ಇಂಗ್ಲಿಷ್ ತಾಣದ ಲಿಂಕ್ ಗಮನಿಸಿ..