High Court of Karnataka
High Court of Karnataka 
ಸುದ್ದಿಗಳು

ವಕೀಲ ಕೆ ವಿ ಅರವಿಂದ್‌ ಹೆಸರನ್ನು ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಹುದ್ದೆಗೆ ಶಿಫಾರಸ್ಸು ಮಾಡಿದ ಸುಪ್ರೀಂ ಕೊಲಿಜಿಯಂ

Bar & Bench

ವಕೀಲ ಕುರುಬರಹಳ್ಳಿ ವೆಂಕಟರಾಮರೆಡ್ಡಿ ಅರವಿಂದ್‌ ಅವರನ್ನು ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿಯನ್ನಾಗಿ ಸುಪ್ರೀಂ ಕೋರ್ಟ್‌ ಕೊಲಿಜಿಯಂ ಮಂಗಳವಾರ ಶಿಫಾರಸ್ಸು ಮಾಡಿದೆ.

ಕಳೆದ ವರ್ಷದ ಆಗಸ್ಟ್‌ನಲ್ಲಿ ಅರವಿಂದ್‌ ಅವರ ಹೆಸರನ್ನು ಹೈಕೋರ್ಟ್‌ ಶಿಫಾರಸ್ಸು ಮಾಡಿತ್ತು. ಅರವಿಂದ್‌ ಅವರು 23 ವರ್ಷಗಳಿಂದ ವಕೀಲರಾಗಿದ್ದಾರೆ ಎಂದು ಕೊಲಿಜಿಯಂ ವಿವರಿಸಿದ್ದು, 567 ವರದಿಯಾಗಿರುವ ತೀರ್ಪುಗಳಲ್ಲಿ ವಾದಿಸಿದ್ದಾರೆ ಎಂದು ಹೇಳಲಾಗಿದೆ.

ಪ್ರಸಕ್ತ ವರ್ಷದ ಜನವರಿಯಲ್ಲಿ ಅರವಿಂದ್‌ ಅವರ ವಿಚಾರದಲ್ಲಿ ನಿರ್ಣಯವನ್ನು ಕೈಗೊಳ್ಳುವುದನ್ನು ಮುಂದೂಡಲಾಗಿತ್ತು ಅರವಿಂದ್‌ ಅವರು ಹುದ್ದೆಗೆ ಸೂಕ್ತ ಹಾಗೂ ಸಮರ್ಥರಾಗಿದ್ದಾರೆ ಎಂದು ಕೊಲಿಜಿಯಂ ಹೇಳಿದೆ.

ಪ್ರಕ್ರಿಯಾ ವಿಧಾನದ ಅನುಸಾರ ಸಂಬಂಧಿತ ಹೈಕೋರ್ಟ್‌ ವಿಚಾರಗಳಿಗೆ ಬಗ್ಗೆ ಮಾಹಿತಿ ಇರುವ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳನ್ನು ಆಯ್ಕೆ ವೇಳೆ ಸಂಪರ್ಕಿಸಲಾಗಿದೆ ಎಂದು ಕೊಲಿಜಿಯಂ ವಿವರಿಸಿದೆ. ಅಭ್ಯರ್ಥಿಯ ಅರ್ಹತೆಯ ಬಗ್ಗೆ ನ್ಯಾಯದಾನ ಇಲಾಖೆಯ ಸಲಹೆಗಳನ್ನೂ ಪರಿಗಣಿಸಲಾಯಿತು. ಈ ನೆಲೆಯಲ್ಲಿ ಅರವಿಂದ್‌ ಅವರ ಪ್ರಾಮಾಣಿಕತೆ ಅಥವಾ ನಡತೆಯ ಬಗ್ಗೆ ಯಾವುದೇ ವಿರೋಧ ಅಭಿಪ್ರಾಯ ಕೇಳಿಬಂದಿಲ್ಲ ಎಂದು ಅದು ವಿವರಿಸಿದೆ.

"ತೆರಿಗೆ ವಿಚಾರದಲ್ಲಿ ವಕೀಲ ಅರವಿಂದ್‌ ಅವರ ಅನುಭವನ್ನು ನಿರ್ಣಯದಲ್ಲಿ ಒತ್ತಿ ಹೇಳಲಾಗಿದ್ದು, ಕರ್ನಾಟಕ ಹೈಕೋರ್ಟ್‌ಗೆ ನಿರ್ದಿಷ್ಟ ಕ್ಷೇತ್ರದಲ್ಲಿ ತಜ್ಞತೆ ಇರುವವರ ಅಗತ್ಯವಿದೆ ಎಂದು ಹೇಳಲಾಗಿದೆ. “ಕರ್ನಾಟಕ ಹೈಕೋರ್ಟ್‌ನಲ್ಲಿ ತೆರಿಗೆ ಪ್ರಕರಣಗಳು ಹೆಚ್ಚು ದಾಖಲಾಗುತ್ತಿದ್ದು, ಈ ನಿಟ್ಟಿನಲ್ಲಿ ತಜ್ಞತೆ ಇರುವ ನ್ಯಾಯಮೂರ್ತಿಗಳ ಅಗತ್ಯವಿದೆ. ವಾಣಿಜ್ಯ, ಕಾರ್ಪೊರೇಟ್‌ ಮತ್ತು ವೈಯಕ್ತಿಕ ಕಾನೂನು ಸೇರಿದಂತೆ ಇತರೆ ಕಾನೂನು ಕ್ಷೇತ್ರಗಳ ಜೊತೆ ತೆರಿಗೆ ಕಾನೂನು ಅವಿಭಾಜ್ಯ ಸಂಬಂಧ ಹೊಂದಿದೆ. ಈ ಎಲ್ಲಾ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಮತ್ತು ಅವರ ಪದೋನ್ನತಿಯ ವಿಚಾರದ ಪ್ರಸ್ತಾವವನ್ನು ಪರಿಗಣಿಸಿ ಕೆ ವಿ ಅರವಿಂದ್‌ ಅವರು ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿ ನೇಮಕಗೊಳ್ಳಲು ಸೂಕ್ತ ಹಾಗೂ ಸಮರ್ಥರಾಗಿದ್ದಾರೆ ಎನ್ನುವುದು ಕೊಲಿಜಿಯಂನ ವಿವೇಚನಾಯುಕ್ತ ಅಭಿಪ್ರಾಯವಾಗಿದೆ” ಎಂದು ಈ ಕುರಿತಾದ ನಿರ್ಣಯದಲ್ಲಿ ಹೇಳಲಾಗಿದೆ.