CLAT NLAT live 
ಸುದ್ದಿಗಳು

{ಲೈವ್ ಅಪ್‌ಡೇಟ್‌} ಎನ್‌ಎಲ್‌ಎಸ್ಐಯುನ ಎನ್‌ಎಲ್‌ಎಟಿ ಪ್ರಶ್ನಿಸಿರುವ ಅರ್ಜಿ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್‌

ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಆರ್ ಸುಭಾಷ್ ರೆಡ್ಡಿ ಮತ್ತು ಎಂ ಆರ್ ಷಾ ನೇತೃತ್ವದ ಪೀಠದಿಂದ ಅರ್ಜಿ ವಿಚಾರಣೆ.

Bar & Bench

ಬೆಂಗಳೂರಿನ ಭಾರತೀಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ನಡೆಸಲು ಉದ್ದೇಶಿಸಿರುವ ರಾಷ್ಟ್ರೀಯ ಕಾನೂನು ಪ್ರವೃತ್ತಿ ಪರೀಕ್ಷೆ (ಎನ್‌ಎಲ್‌ಎಟಿ) ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಇಂದು ಬೆಳಿಗ್ಗೆ ಜಾರ್ಖಂಡ್ ಹೈಕೋರ್ಟ್ ವಜಾ ಮಾಡಿತ್ತು. ಮಧ್ಯಪ್ರದೇಶದಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಅಲ್ಲಿನ ಹೈಕೋರ್ಟ್ ಹಿಂಪಡೆಯುವಂತೆ ಅರ್ಜಿದಾರರಿಗೆ ಸೂಚಿಸಿತ್ತು.

R Subhash Reddy, Ashok bhushan, MR shah

ಅರ್ಜಿಗಳು ತಮ್ಮ ನ್ಯಾಯಾಂಗ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಮನವಿ ವಿಚಾರಣೆಗೆ ನಿರಾಕರಿಸಿದ ಮಧ್ಯಪ್ರದೇಶ ಮತ್ತು ಜಾರ್ಖಂಡ್ ಹೈಕೋರ್ಟ್‌ಗಳು.

ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ನ್ಯಾಯಮೂರ್ತಿಗಳಾದ ಆರ್ ಸುಭಾಷ್ ರೆಡ್ಡಿ ಮತ್ತು ಎಂ ಆರ್ ಷಾ ಅವರನ್ನೊಳಗೊಂಡ ಪೀಠದಿಂದ ಅರ್ಜಿ ವಿಚಾರಣೆ.

ಪ್ರತ್ಯೇಕ ಪ್ರವೇಶ ಪರೀಕ್ಷೆ ನಡೆಸುತ್ತಿರುವ ಎನ್‌ಎಲ್‌ಎಸ್‌ಐಯು ನಿರ್ಧಾರದ ವಿರುದ್ಧ ಎನ್‌ಎಲ್ಎಸ್ಐಯು ಮಾಜಿ ಉಪಕುಲಪತಿ ಡಾ.ಆರ್‌. ವೆಂಕಟರಾವ್‌ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ಆರಂಭ.

《ಎನ್‌ಎಲ್‌ಎಟಿ ವಿಚಾರಣೆ 》 ಶಂಕರನಾರಾಯಣನ್‌: ಸಿಎಲ್‌ಎಟಿ ಪ್ರವೇಶ ಪರೀಕ್ಷೆ ಸಂಬಂಧ ಕಾಯಾಕಾರಿ ಸಮಿತಿ ನಿರ್ಧಾರ ಕೈಗೊಂಡಿದೆ. ಕೇವಲ 1/3ರಷ್ಟು ಮಂದಿ ಮಾತ್ರ ಎನ್‌ಎಲ್‌ಎಟಿ ಪರೀಕ್ಷೆಗೆ ನೊಂದಾಯಿಸಿಕೊಂಡಿದ್ದಾರೆ.

ನ್ಯಾ.ಭೂಷಣ್‌: ನಾವು ನೋಟಿಸ್ ನೀಡಲು ಸಿದ್ಧರಿದ್ದೇವೆ.

ಹಿರಿಯ ವಕೀಲ ದಾತಾರ್‌: ನಾಳೆಯೇ ಪರೀಕ್ಷೆ ಇದೆ, ಎಲ್ಲ ಸಿದ್ಧತೆ ಆಗಿದೆ

ಬ್ರೇಕಿಂಗ್‌: ಎನ್‌ಎಲ್ಎಸ್‌ಐಯುಗೆ ಪರೀಕ್ಷೆ ನಡೆಸಲು ಹಸಿರು ನಿಶಾನೆ ತೋರಿದ ಸುಪ್ರೀಂ ಕೋರ್ಟ್‌. ಫಲಿತಾಂಶ ವಿಚಾರಣೆ ಪೂರ್ಣಗೊಂಡ ಬಳಿಕ ಪ್ರಕಟವಾಗಲಿದೆ.

ನ್ಯಾ.ಅಶೋಕ್‌ ಭೂಷಣ್‌: ಎನ್‌ಎಲ್‌ಎಟಿ ನಾಳೆ ನಿಗದಿಯಾಗಿರುವಂತೆಯೇ ನಡೆಯಬಹುದು. ಅರ್ಜಿಯ ವಿಚಾರಣೆ ಮುಗಿಯುವವರೆಗೆ ಫಲಿತಾಂಶವನ್ನು ಪ್ರಕಟಿಸುವುದಾಗಲಿ, ದಾಖಲಾತಿ ಮಾಡಿಕೊಳ್ಳುವುದಾಗಲಿ ಮಾಡಲಾಗದು.

ಎಲ್ಲ ಪ್ರತಿವಾದಿಗಳಿಗೆ ಮುಂದಿನ 3 ದಿನದೊಳಗೆ ಪ್ರತಿಕ್ರಿಯೆ ಸಲ್ಲಿಸಲು ಹೇಳಿದ ಪೀಠ. ಸೆ.16ಕ್ಕೆ ಮುಂದಿನ ವಿಚಾರಣೆ.