Supreme Court and NEET 
ಸುದ್ದಿಗಳು

ನೀಟ್-2020 ಪರೀಕ್ಷೆಗಳ ಮುಂದೂಡಿಕೆ ಸಂಬಂಧ‌ ಯಾವುದೇ ಹೊಸ ಅರ್ಜಿಗಳನ್ನು ಆಲಿಸದಿರಲು ನಿರ್ಧರಿಸಿದ ಸುಪ್ರೀಂ ಕೋರ್ಟ್

ಅರ್ಜಿ ವಜಾಗೊಳಿಸಿದ ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಸುಭಾಷ್ ರೆಡ್ಡಿ ಮತ್ತು ಎಂ ಆರ್ ಷಾ ನೇತೃತ್ವದ ತ್ರಿಸದಸ್ಯ ಪೀಠ. ವಿಚಾರಣೆಯ ಲೈವ್ ಟ್ವೀಟ್‌ ಮಾಹಿತಿ ಇಲ್ಲಿದೆ.

Bar & Bench

ನೀಟ್ 2020 ಪರೀಕ್ಷೆಗಳ ಮುಂದೂಡಿಕೆ ಸಂಬಂಧ‌ ಯಾವುದೇ ಹೊಸ ಅರ್ಜಿಗಳನ್ನು ಆಲಿಸದಿರಲು ನಿರ್ಧರಿಸಿದ ಪೀಠ.

ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ವಿವಿಧ ಮನವಿಗಳನ್ನು ಮಾಡಿದ ಆಲಂ. ಎಲ್ಲವನ್ನೂ ಸಂಬಂಧಪಟ್ಟ ಸಂಸ್ಥೆಗಳು ಮಾಡಲಿವೆ ಎಂದು ಹೇಳಿದ ಪೀಠ.

ನಿಯಮಾವಳಿಗಳ ಅನುಸಾರ ಕೋವಿಡ್‌ ಕಂಟೈನ್‌ ಮೆಂಟ್‌ ಪ್ರದೇಶದಲ್ಲಿರುವ ವಿದ್ಯಾರ್ಥಿಗಳಿಗೆ ನಂತರದಲ್ಲಿ ಪರೀಕ್ಷೆಯನ್ನು ತೆಗೆದುಕೊಲ್ಳುವ ಅವಕಾಶವಿದೆ ಎಂದು ನಿಯಮಾವಳಿಗಳನ್ನು ಪ್ರಸ್ತಾಪಿಸಿದ ವಕೀಲ ಆಲಂ.

ನ್ಯಾಯವಾದಿ ತುಳಸಿ ಅವರಿಂದ ವಿಪತ್ತು ನಿರ್ವಹಣಾ ಕಾಯಿದೆಯ ಬಗ್ಗೆ ಪ್ರಸ್ತಾಪ. ವಿದ್ಯಾರ್ಥಿಗಳು ವೈರಸ್‌ ಸೋಂಕಿತರಾಗುವ ಸಾಧ್ಯತೆ ಹೆಚ್ಚು ಎಂದು ಪೀಠಕ್ಕೆ ವಿವರಿಸಿದ ತುಳಸಿ. ಇದಕ್ಕೆ ಪೂರಕವಾಗಿ ವಕೀಲ ಶೋಹೆಬ್‌ ಆಲಂ ಅವರಿಂದ ವಾದ ಮಂಡನೆ. ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರದ ನಿಯಮಾವಳಿಗಳ ಬಗ್ಗೆ ಗಮನಸೆಳೆದ ಆಲಂ.

ಪರೀಕ್ಷೆ ಬರೆಯಲಾಗದ ವಿದ್ಯಾರ್ಥಿಗಳನ್ನು ಸೂಕ್ತ ರೀತಿಯಲ್ಲಿ ಪರಿಗಣಿಸಬೇಕು ಎಂದು ವಾದಿಸಿದ ತಳಸಿ. ವಿದ್ಯಾರ್ಥಿಗಳನ್ನು ಪರಿಗಣಿಸಬೇಕೆ ಬೇಡವೇ ಎಂದು ನಿರ್ಧರಿಸುವುದು ಸಂಬಂಧಪಟ್ಟ ಸಂಸ್ಥೆಯೇ ಹೊರತು ನ್ಯಾಯಾಲಯ ಈ ಬಗ್ಗೆ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದ ಪೀಠ.

ದಾತಾರ್ ಮನವಿಗೆ, ಇದಾಗಲೇ ಮರುಪರಿಶೀಲನಾ ಅರ್ಜಿಯನ್ನು ಕೂಡ ವಜಾ ಮಾಡಲಾಗಿದೆ ಎಂದು ಹೇಳಿದ ಪೀಠ. ಹಿರಿಯ ನ್ಯಾಯವಾದಿ ಕೆ ಟಿ ಎಸ್‌ ತುಳಸಿ ಅವರಿಂದ ಅರ್ಜಿದಾರರ ಪರವಾಗಿ ವಾದ ಮಂಡನೆ ಆರಂಭ. ಕೋವಿಡ್‌ ಪ್ರಕರಣಗಳ ಸಂಖ್ಯೆಯಲ್ಲಿ ಗಂಭೀರ ಹೆಚ್ಚಳವಾಗುತ್ತಿರುವ ಬಗ್ಗೆ ಪೀಠದ ಗಮನಸೆಳೆದ ತುಳಸಿ.

ಪರೀಕ್ಷೆ ನಡೆಸಲು ಇರುವ ತೊಂದರೆಗಳ ಬಗ್ಗೆ ಪೀಠಕ್ಕೆ ತಿಳಿಸಿದ ದಾತಾರ್‌, ಬಿಹಾರದಲ್ಲಿ ಕೇವಲ ಎರಡು ಪರೀಕ್ಷಾ ಕೇಂದ್ರಗಳಿವೆ ಎಂದು ಗಮನಸೆಳೆದರು. ಒಂದೊಂದು ರಾಜ್ಯಗಳಲ್ಲಿ ಒಂದೊಂದು ದಿನಾಂಕದಂದು ಪರೀಕ್ಷೆ ನಡೆಸಲು ಸಾಧ್ಯವಿಲ್ಲ ಎಂದ ಪೀಠ. ಮೂರು ವಾರ ಪರೀಕ್ಷೆ ಮುಂದೂಡುವಂತೆ ದಾತಾರ್‌ ಮನವಿ.

The Bench hearing the matter

ನೀಟ್‌-ಯುಜಿ ಪ್ರವೇಶ ಪರೀಕ್ಷೆಗಳನ್ನು ಮುಂದೂಡುವಂತೆ ಕೋರಿರುವ ಅರ್ಜಿಗಳ ವಿಚಾರಣೆಯನ್ನು ಇಂದು ನಡೆಸಲಿರುವ ಸುಪ್ರೀಂಕೋರ್ಟ್‌. ನ್ಯಾ. ಅಶೋಕ್‌ ಭೂಷಣ್‌ ಅವರ ನೇತೃತ್ವದ ಪೀಠ ಅರ್ಜಿಗಳ ವಿಚಾರಣೆ ನಡೆಸಲಿದೆ. ಸೆ.13ರಂದು ನೀಟ್‌ ಪರೀಕ್ಷೆಗಳು ನಡೆಯಲಿವೆ.