Justice S Ravindra Bhat and Justice Aravind Kumar
Justice S Ravindra Bhat and Justice Aravind Kumar 
ಸುದ್ದಿಗಳು

ಸಿವಿಲ್ ಪ್ರಕರಣಗಳ ತ್ವರಿತ ವಿಲೇವಾರಿಗೆ ಸುಪ್ರೀಂ ನಿರ್ದೇಶನ: ಪ್ರಕರಣ ಬಾಕಿ ಉಳಿದರೆ ಕ್ರಮಕ್ಕೆ ಇದು ಸಕಾಲ ಎಂದ ಪೀಠ

Bar & Bench

ದೇಶದೆಲ್ಲೆಡೆಯ ನ್ಯಾಯಾಲಯಗಳಲ್ಲಿನ ಸಿವಿಲ್ ಪ್ರಕರಣಗಳ ವಿಚಾರಣೆ ವಿಳಂಬವಾಗುವುದನ್ನು ತಪ್ಪಿಸುವುದಕ್ಕಾಗಿ ಮತ್ತು ಬಾಕಿ ಉಳಿದಿರುವ ಸಿವಿಲ್‌ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ತುರ್ತು ಸುಧಾರಣೆಗೆ ಸುಪ್ರೀಂ ಕೋರ್ಟ್‌ ಶುಕ್ರವಾರ ನಿರ್ದೇಶನ ನೀಡಿದೆ  [ಯಶಪಾಲ್ ಜೈನ್ ವಿರುದ್ಧ ಸುಶೀಲಾ ದೇವಿ ಇನ್ನಿತರರ ನಡುವಣ ಪ್ರಕರಣ].

ಆಲಸ್ಯ ಮತ್ತು ಅಧಿಕಾರಶಾಹಿ ಅದಕ್ಷತೆಯನ್ನು ತೊಡೆದುಹಾಕುವ ಅಗತ್ಯವಿದೆ ಎಂದು ನ್ಯಾಯಮೂರ್ತಿಗಳಾದ (ಶುಕ್ರವಾರ ನಿವೃತ್ತರಾದ) ಎಸ್.ರವೀಂದ್ರ ಭಟ್ ಮತ್ತು ಅರವಿಂದ್ ಕುಮಾರ್ ಅವರಿದ್ದ ಪೀಠ ನುಡಿಯಿತು. ಅಲ್ಲದೆ ನ್ಯಾಯಾಲಯಗಳಲ್ಲಿ ವಿಚಾರಣೆ ವಿಳಂಬ ಮತ್ತು ಪ್ರಕರಣಗಳ ಬಾಕಿ ವಿರುದ್ಧ ಕ್ರಮ ಕೈಗೊಳ್ಳುವ ಸಮಯ ಈಗ ಬಂದಿದೆ ಎಂದು ಅವರು ಹೇಳಿದರು.

“ಆಲಸ್ಯದ ಕಾಲ ಬಹಳ ಹಿಂದಿನಿಂದಲೂ ಇದ್ದು ನ್ಯಾಯವು ಅಧಿಕಾರಶಾಹಿಯ ಅಸಮರ್ಥತೆಗೆ ಬಲಿಯಾಗುವಂತಿಲ್ಲ. ನಾವೀಗ ಕಾರ್ಯೋನ್ಮುಖರಾಗಬೇಕಿದೆ. ತಡವಾಗಿಹೋಗಿದ್ದರೂ ನ್ಯಾಯದ ಕರೆ ಅಚಲವಾಗಿದೆ. ನ್ಯಾಯಯುತ ಮತ್ತು ಸಮಾನ ಸಮಾಜದ ಭರವಸೆಯಲ್ಲಿ ನಾವು ಕಾನೂನಿನ ರಕ್ಷಕರಾಗಿ ಜನರು ಇರಿಸಿದ ವಿಶ್ವಾಸವನ್ನು ಪುನಸ್ಥಾಪಿಸಬೇಕಿದೆ. ನ್ಯಾಯದ ಅಂಗಳದಲ್ಲಿ ವಿಳಂಬ ಮತ್ತು ಪೊರಕರಣ ಬಾಕಿ ಉಳಿದಿರುವ ಕೇಳದಿರಲಿ” ಎಂದು ನ್ಯಾಯಾಲಯ ನುಡಿದಿದೆ.

ನಾವು ತುರ್ತಾಗಿ ಕಾನೂನು ಸುಧಾರಣೆಯ ಯಾನ ಆನಬರಂಭಿಸಬೇಕು, ಏಕೆಂದರೆ ನಾವು ಬಿಟ್ಟುಹೋಗುವ ಪರಂಪರೆ ರಾಷ್ಟ್ರದ ಭವಿಷ್ಯ ರೂಪಿಸುತ್ತದೆ ಎಂದ ಪೀಠ ಸುಧಾರಣೆಗಾಗಿ ವಿವಿಧ ನಿರ್ದೇಶನಗಳನ್ನು ನೀಡಿತು.

[ನಿರ್ದೇಶನಗಳ ವಿವರಗಳಿಗಾಗಿ ತೀರ್ಪಿನ ಪ್ರತಿಯನ್ನು ಇಲ್ಲಿ ಓದಿ]

Yashpal_Jain_vs_Sushila_Devi_and_ors.pdf
Preview