ಸುದ್ದಿಗಳು

ಸಿಜೆಐ ರಮಣ ನಿವೃತ್ತಿಗೂ ಮೊದಲು ಕಲಾಪಗಳ ನೇರ ಪ್ರಸಾರಕ್ಕೆ ಸುಪ್ರೀಂ ಕೋರ್ಟ್ ಚಿಂತನೆ [ಚುಟುಕು]

Bar & Bench

ಈ ವರ್ಷದ ಆಗಸ್ಟ್‌ 26 ರಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್‌ ವಿ ರಮಣ ನಿವೃತ್ತರಾಗಲಿದ್ದು ಅದಕ್ಕೂ ಮುನ್ನ ಸರ್ವೋಚ್ಚ ನ್ಯಾಯಾಲಯದ ಕಲಾಪಗಳನ್ನು ನೇರ ಪ್ರಸಾರ ಮಾಡುವ ಯೋಜನೆ ಜಾರಿಗೆ ತರಲು ಸುಪ್ರೀಂ ಕೋರ್ಟ್‌ ಚಿಂತನೆ ನಡೆಸಿದೆ.

ವಿಚಾರಣೆಗಳ ನೇರ ಪ್ರಸಾರ ಆರಂಭಿಸಲು ಸ್ವತಂತ್ರ ವೇದಿಕೆಯೊಂದನ್ನು ಸುಪ್ರೀಂ ಕೋರ್ಟ್‌ ಇ ಸಮಿತಿ ಅಭಿವೃದ್ಧಿ ಪಡಿಸುತ್ತಿದೆ ಎಂದು ತಿಳಿದುಬಂದಿದ್ದು ಇದು ಹೈಕೋರ್ಟ್‌ ಹಾಗೂ ಜಿಲ್ಲಾ ನ್ಯಾಯಾಲಯಗಳ ಬಳಕೆಗೆ ಮುಕ್ತವಾಗಿರುತ್ತದೆ. ಮುಂದಿನ ಕೆಲ ತಿಂಗಳಲ್ಲಿ ನ್ಯಾಯಾಲಯದ ಪ್ರಕ್ರಿಯೆಗಳ ನೇರ ಪ್ರಸಾರ ಮಾಡಲು ಸುಪ್ರೀಂ ಕೋರ್ಟ್‌ ಕಾರ್ಯಪ್ರವೃತ್ತವಾಗಿದೆ ಎಂದು ಯೋಜನೆಯಲ್ಲಿ ಭಾಗಿಯಾಗಿರುವ ಮೂಲಗಳು ʼಬಾರ್‌ ಅಂಡ್‌ ಬೆಂಚ್‌ʼಗೆ ತಿಳಿಸಿವೆ.

ಹೆಚ್ಚಿನ ಮಾಹಿತಿಗೆ ಬಾರ್‌ ಅಂಡ್‌ ಬೆಂಚ್‌ ಇಂಗ್ಲಿಷ್‌ ಜಾಲತಾಣದ ʼಲಿಂಕ್‌ʼ ಗಮನಿಸಿ.