ಹಳೆಯದಾದ ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿಯ ಪ್ರಕರಣಗಳು ಮತ್ತು ಕ್ರಿಮಿನಲ್ ಮೇಲ್ಮನವಿಗಳನ್ನು ಆಲಿಸಲು ಸುಪ್ರೀಂ ಕೋರ್ಟ್ ವಿಶೇಷ ಪೀಠ ರಚಿಸಿದೆ.
ನ್ಯಾಯಮೂರ್ತಿಗಳಾದ ಕೆ ವಿನೋದ್ ಚಂದ್ರನ್ ಮತ್ತು ಎನ್ ವಿ ಅಂಜಾರಿಯಾ ಅವರನ್ನು ಒಳಗೊಂಡ ಪೀಠ ಪ್ರತಿ ಸೋಮವಾರ ಮತ್ತು ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ವಿಚಾರಣೆ ನಡೆಸಲಿದೆ. ಪೀಠ ರಚಿಸುವ ಕುರಿತು ಜುಲೈ 29ರಂದು ಸುಪ್ರೀಂ ಕೋರ್ಟ್ ಹೊರಡಿಸಿದ ನೋಟಿಸ್‌ನಲ್ಲಿ ತಿಳಿಸಲಾಗಿದೆ.
ಆಗಸ್ಟ್ 1, ಶುಕ್ರವಾರದಿಂದ ಪೀಠವು ಪ್ರಕರಣಗಳ ವಿಚಾರಣೆ ಪ್ರಾರಂಭಿಸಲಿದೆ.
ವಕೀಲ ವರ್ಗ ಕಕ್ಷಿದಾರರು ಹಾಗೂ ಸಂಬಂಧಪಟ್ಟವರು ಪ್ರಕರಣಗಳ ಮುಂದೂಡಿಕೆಗೆ ಯತ್ನಿಸದೆ ಸಹಕಾರ ನೀಡುವಂತೆ ನೋಟಿಸ್ ತಿಳಿಸಿದೆ.
[ನೋಟಿಸ್ ಪ್ರತಿ]