A1
A1
ಸುದ್ದಿಗಳು

ರಾಮಸೇತು ರಾಷ್ಟ್ರೀಯ ಸ್ಮಾರಕ: ಜುಲೈ 26ರಂದು ವಿಚಾರಣೆ ನಡೆಸಲಿರುವ ಸುಪ್ರೀಂ ಕೋರ್ಟ್‌ [ಚುಟುಕು]

Bar & Bench

ತಮಿಳುನಾಡಿನ ಆಗ್ನೇಯ ಕರಾವಳಿಯಲ್ಲಿ ಸುಣ್ಣದ ಕಲ್ಲುಗಳ ಬೃಹತ್‌ ಸರಮಾಲೆಯಾಗಿರುವ ರಾಮಸೇತುವನ್ನು (ಆಡಮ್ಸ್ ಬ್ರಿಡ್ಜ್) ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸುವಂತೆ ನಿರ್ದೇಶಿಸಬೇಕು ಎಂದು ಬಿಜೆಪಿ ನಾಯಕ ಹಿರಿಯ ನ್ಯಾಯವಾದಿ ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿರುವ ಮನವಿಯನ್ನು ಜುಲೈ 26 ರಂದು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ ಸಮ್ಮತಿಸಿದೆ.

ಪ್ರಕರಣವನ್ನು ವಿಚಾರಣೆ ನಡೆಸುವಂತೆ ಸ್ವಾಮಿ ಅವರು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಅವರೆದುರು ಇಂದು ಕೋರಿದರು. ರಾಮಾಯಣದ ಪ್ರಕಾರ ರಾಮನ ಪತ್ನಿ ಸೀತಾದೇವಿಯನ್ನು ರಾವಣ ಅಪಹರಿಸಿದ ನಂತರ ಲಂಕೆಯನ್ನು ತಲುಪಲು ರಾಮ ಈ ಸೇತುವೆಯನ್ನು ನಿರ್ಮಿಸಿದ ಎಂಬ ಪ್ರತೀತಿ ಇದೆ.

ಹೆಚ್ಚಿನ ವಿವರಗಳಿಗಾಗಿ ʼಬಾರ್‌ ಅಂಡ್‌ ಬೆಂಚ್‌ʼ ಇಂಗ್ಲಿಷ್‌ ಜಾಲತಾಣದ ಲಿಂಕ್‌ ಗಮನಿಸಿ.