A1
ಸುದ್ದಿಗಳು

ಲೆಕ್ಕಪರಿಶೋಧಕ ರಾಜೀನಾಮೆಯಿತ್ತರೂ ತಪ್ಪಿಸಿಕೊಳ್ಳಲಾಗದು: ಕಂಪೆನಿ ಕಾಯಿದೆ ಸೆ.140(5)ರ ಸಿಂಧುತ್ವ ಎತ್ತಿಹಿಡಿದ ಸುಪ್ರೀಂ

ಲೆಕ್ಕ ಪರಿಶೋಧಕ ರಾಜೀನಾಮೆ ನೀಡಿದರೆ ಆತನ ವಿರುದ್ಧ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯಲ್ಲಿ (ಎನ್‌ಸಿಎಲ್‌ಟಿ) ನಡೆಯುತ್ತಿರುವ ವಿಚಾರಣೆ ಕೊನೆಗೊಳ್ಳುತ್ತದೆ ಎಂಬ ಹೈಕೋರ್ಟ್ ಆದೇಶ ತಪ್ಪಿನಿಂದ ಕೂಡಿದೆ ಎಂದ ಪೀಠ.

Bar & Bench

ಮೂಲಸೌಕರ್ಯ ಗುತ್ತಿಗೆ ಮತ್ತು ಹಣಕಾಸು ಸೇವಾ ಸಂಸ್ಥೆ (ಐಎಲ್‌ಅಂಡ್‌ಎಫ್‌ಎಸ್‌) ಸಂಬಂಧಿಸಿದಂತೆ ಡೆಲಾಯ್ಟ್ ಹಸ್ಕಿನ್ಸ್ ಅಂಡ್‌ ಎಸಲ್ಸ್‌ ಮತ್ತು ಕೆಪಿಎಂಜಿ ಅಂಗಸಂಸ್ಥೆ ಬಿಎಸ್‌ಆರ್‌ ಅಂಡ್‌ ಅಸೋಸಿಯೇಟ್ಸ್‌ ವಿರುದ್ಧ ಗಂಭೀರ ವಂಚನೆ ತನಿಖಾ ಕಚೇರಿ (ಎಸ್‌ಎಫ್‌ಐಒ) ನೀಡಿದ್ದ ದೂರನ್ನು ರದ್ದುಗೊಳಿಸಿದ್ದ ಬಾಂಬೆ ಹೈಕೋರ್ಟ್‌ ಆದೇಶವನ್ನು ಸುಪ್ರೀಂ ಕೋರ್ಟ್‌ ಬುಧವಾರ ರದ್ದುಗೊಳಿಸಿದೆ (ಭಾರತ ಒಕ್ಕೂಟ ಮತ್ತು ಡೆಲಾಯ್ಟ್ ಹಸ್ಕಿನ್ಸ್ ನಡುವಣ ಪ್ರಕರಣ).

ಲೆಕ್ಕ ಪರಿಶೋಧಕ ರಾಜೀನಾಮೆ ನೀಡಿದರೆ ಸೆಕ್ಷನ್ 140(5) ಅಡಿಯಲ್ಲಿ ಆತನ ವಿರುದ್ಧ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯಲ್ಲಿ (ಎನ್‌ಸಿಎಲ್‌ಟಿ) ನಡೆಯುತ್ತಿರುವ ವಿಚಾರಣೆ ಕೊನೆಗೊಳ್ಳುತ್ತದೆ ಎಂದು ಬಾಂಬೆ ಹೈಕೋರ್ಟ್‌ ನೀಡಿರುವ ಆದೇಶ ತಪ್ಪಿನಿಂದ ಕೂಡಿದೆ ಎಂದು ನ್ಯಾಯಮೂರ್ತಿಗಳಾದ ಎಂ ಆರ್‌ ಶಾ ಮತ್ತು ಎಂ ಎಂ ಸುಂದ್ರೇಶ್‌ ಅವರಿದ್ದ ಪೀಠ ತಿಳಿಸಿದೆ.   

ಅಂತಹ ನಿಲುವು ತಳೆದರೆವ ವಿಚಾರಣೆ ಎದುರಿಸುವಾಗಲೆಲ್ಲಾ ಲೆಕ್ಕಪರಿಶೋಧಕರು ರಾಜೀನಾಮೆ ನೀಡುತ್ತಾರೆ ಇದು ಕಾಯಿದೆ ರೂಪಿಸಿದ ಶಾಸಕಾಂಗದ ಉದ್ದೇಶವಾಗಿರುವುದಿಲ್ಲ ಎಂದು ನ್ಯಾಯಾಲಯ ವಿವರಿಸಿದೆ.

ಅವರು ಶಾಮೀಲಾಗಿದ್ದಾರೆಯೇ ಇಲ್ಲವೇ ವಂಚಕರಂತೆ ವರ್ತಿಸಿದ್ದಾರೆಯೇ ಎಂಬುದನ್ನು ನಿರ್ಧರಿಸಲು ಅವರು ನೀಡಿದ ರಾಜೀನಾಮೆಯನ್ನೂ ಲೆಕ್ಕಿಸದೆ ನ್ಯಾಯಮಂಡಳಿ ಅಂತಿಮ ಆದೇಶ ನೀಡಬೇಕು ಎಂದು ನ್ಯಾಯಾಲಯ ನುಡಿದಿದೆ.

ಐಎಲ್‌ಅಂಡ್‌ಎಫ್‌ಎಸ್‌ ಮಾಜಿ ಲೆಕ್ಕಪರಿಶೋಧನಾ ಸಂಸ್ಥೆಗಳಾದ ಬಿಎಸ್‌ಆರ್‌ ಅಂಡ್‌ ಅಸೋಸಿಯೇಟ್ಸ್‌ ಮತ್ತು ಡೆಲಾಯ್ಟ್‌ ಹ್ಯಾಸ್ಕಿನ್ಸ್‌ ಅಂಡ್‌ ಸೆಲ್ಸ್‌ ವಿರುದ್ಧದ ಎಲ್ಲಾ ಕಾನೂನು ಕ್ರಮ ರದ್ದುಪಡಿಸಿದ್ದ ಬಾಂಬೆ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಕೇಂದ್ರ ಸರ್ಕಾರ ಮನವಿ ಸಲ್ಲಿಸಿತ್ತು.