ಕರ್ನಾಟಕದಲ್ಲಿ ಪರ್ಯಾಯ ವಿವಾದ ಪರಿಹಾರವನ್ನು (ಎಡಿಆರ್) ಸುಧಾರಿಸುವ ಮತ್ತು ಬಲಪಡಿಸುವ ನಿಟ್ಟಿನಲ್ಲಿ ನ್ಯಾಯಮೂರ್ತಿಗಳು, ವಕೀಲರು ಮತ್ತು ಶೈಕ್ಷಣಿಕ ಸಮುದಾಯವನ್ನು ಒಂದೇ ವೇದಿಕೆಯಲ್ಲಿ ತರುವ ಬೆಂಗಳೂರು ಎಡಿಆರ್ ಸಪ್ತಾಹ ಆಗಸ್ಟ್ 24 ರಿಂದ 26ರವರೆಗೆ ನಡೆಯಲಿದೆ.
ಇಂದಿನ ಪರಿಸ್ಥಿತಿಯಲ್ಲಿ ಎಡಿಆರ್ ಪ್ರಸ್ತುತತೆಯ ಕುರಿತು ಅರಿಯಲು ಸಮಾರಂಭವು ವೇದಿಕೆ ಒದಗಿಸಲಿದೆ. ಬೆಂಗಳೂರಿನ ಮಧ್ಯಸ್ಥಿಕೆ ಮತ್ತು ಸಂಧಾನ ಕೇಂದ್ರ (ದೇಶೀಯ ಮತ್ತು ಅಂತಾರಾಷ್ಟ್ರೀಯ), ಕರ್ನಾಟಕ ನ್ಯಾಯಾಂಗ ಅಕಾಡೆಮಿ ಮತ್ತು ಬೆಂಗಳೂರು ವಕೀಲರ ಸಂಘ ಮತ್ತು ಬೆಂಗಳೂರು ಎಡಿಆರ್ ಸಪ್ತಾಹ ಸಮಿತಿ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದೆ.
ಭಾರತ ಮತ್ತು ಕರ್ನಾಟಕದಲ್ಲಿ ಎಡಿಆರ್ ಕುರಿತು ನಿರ್ದಿಷ್ಟವಾಗಿ ಸಮಕಾಲೀನ ಮತ್ತು ಸೂಕ್ಷ್ಮ ವಿಚಾರಗಳನ್ನು ಅರಿಯುವ ಗುರಿಯನ್ನು ಸಮಾರಂಭ ಹೊಂದಿದೆ. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳು ವಕೀಲ ಸಮುದಾಯದ ಹೆಸರಾಂತ ಪ್ರಮುಖರು ಚರ್ಚೆಯಲ್ಲಿ ಭಾಗವಹಿಸಲಿದ್ದಾರೆ.
ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳಾದ ಆರ್ ವಿ ರವೀಂದ್ರನ್ ಮತ್ತು ಎ ಎಸ್ ಬೋಪಣ್ಣ, ಹೈಕೋರ್ಟ್ ನ್ಯಾಯಮೂರ್ತಿಗಳಾದ ವಿ ಕಾಮೇಶ್ವರ್ ರಾವ್, ಶ್ರೀನಿವಾಸ್ ಹರೀಶ್ ಕುಮಾರ್, ಎಸ್ ಸುನಿಲ್ ದತ್ ಯಾದವ್, ಎಸ್ ಆರ್ ಕೃಷ್ಣ ಕುಮಾರ್, ಸೂರಜ್ ಗೋವಿಂದರಾಜ್, ಎಂ ಜಿ ಉಮಾ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಪ್ರಖ್ಯಾತ ಕಾನೂನು ವೃತ್ತಿಪರರು ಮತ್ತು ಹಿರಿಯ ವಕೀಲರು ಹಲವು ವಿಷಯ ಮತ್ತು ಪ್ರಾಕ್ಟೀಸ್ ಕ್ಷೇತ್ರಗಳ ಬಗ್ಗೆ ಬೆಳಕು ಚೆಲ್ಲುವುದರಿಂದ ಯುವ ವಕೀಲರು, ವಿದ್ಯಾರ್ಥಿಗಳಿಗೆ ಸಾಕಷ್ಟು ಲಾಭವಾಗಲಿದೆ.
ಪರ್ಯಾಯ ವಿವಾದ ಪರಿಹಾರಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಸಂವಾದದ ಗುಣಮಟ್ಟ ವೃದ್ಧಿಸುವ ನಿಟ್ಟಿನಲ್ಲಿ ಐಡಿಯಾಗಳು ಮತ್ತು ದೃಷ್ಟಿಕೋನ ಹಂಚಿಕೆ ಮಾಡಿಕೊಳ್ಳಲು ಕಾನೂನು ತಜ್ಞರು, ಪ್ರಾಕ್ಟೀಸ್ ಮಾಡುವವರು ಮತ್ತು ಎಡಿಆರ್ ಉತ್ಸಾಹಿಗಳಿಗೆ ಬೆಂಗಳೂರು ಎಡಿಆರ್ ಸಪ್ತಾಹ ತಳಹದಿಯಾಗಲಿದೆ.
ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ನೋಂದಣಿಗಾಗಿ Click Here; ಹೆಚ್ಚಿನ ಮಾಹಿತಿಗಾಗಿ https://www.bengaluruadrweek.in/ ಗೆ ಭೇಟಿ ನೀಡಬಹುದು. ತಜ್ಞರ ಸಮಿತಿ ಮತ್ತಿತರ ಮಾಹಿತಿಗೆ click here ಇಲ್ಲಿಗೆ ಭೇಟಿ ನೀಡಬಹುದು.