Death Penalty 
ಸುದ್ದಿಗಳು

ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠದಿಂದ 40 ಗಲ್ಲು ಶಿಕ್ಷೆ ಪ್ರಕರಣಗಳ ವಿಚಾರಣೆ ಸೆ. 7ರಿಂದ ಆರಂಭ

ಸದರಿ ನಲವತ್ತು ಮನವಿಗಳ ಪೈಕಿ ಮೂವತ್ತೇಳು ಪ್ರಕರಣಗಳಲ್ಲಿ ಅಪರಾಧಿಗಳು ಮೇಲ್ಮನವಿ ಸಲ್ಲಿಸಿದ್ದು, ಮೂರು ಪ್ರಕರಣಗಳಲ್ಲಿ ಸರ್ಕಾರ ಮೇಲ್ಮನವಿ ಸಲ್ಲಿಸಿದೆ.

Bar & Bench

ಗಲ್ಲು ಶಿಕ್ಷೆಗೆ ಗುರಿಯಾಗಿರುವವರು ಸಲ್ಲಿಸಿರುವ ನಲವತ್ತು ಮೇಲ್ಮನವಿಗಳ ವಿಚಾರಣೆಯನ್ನು ಸೆಪ್ಟೆಂಬರ್‌ 7ರಿಂದ ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠವು ನಡೆಸಲಿದೆ. ಈ ಸಂಬಂಧ ಸೆಪ್ಟೆಂಬರ್‌ 1ರಂದು ಸರ್ವೋಚ್ಚ ನ್ಯಾಯಾಲಯವು ಅಧಿಸೂಚನೆ ಹೊರಡಿಸಿದೆ.

“ಕೆಳಗೆ ಉಲ್ಲೇಖಿಸಲಾಗಿರುವ ಮರಣ ದಂಡನೆ ವಿಧಿಸಲ್ಪಟ್ಟಿರುವ ಪ್ರಕರಣಗಳ ವಿಚಾರಣೆಯನ್ನು ತ್ರಿಸದಸ್ಯ ಪೀಠವು ಸೆಪ್ಟೆಂಬರ್‌ 7ರಿಂದ ಅಂದರೆ ಮಂಗಳವಾರದಿಂದ ನಡೆಸಲಿದೆ” ಎಂದು ಅಧಿಸೂಚನೆಯಲ್ಲಿ ವಿವರಿಸಲಾಗಿದೆ. ನಲವತ್ತು ಪ್ರಕರಣಗ ಪೈಕಿ ಮೂವತ್ತೇಳು ಪ್ರಕರಣಗಳಲ್ಲಿ ಅಪರಾಧಿಗಳು ಮೇಲ್ಮನವಿ ಸಲ್ಲಿಸಿದ್ದು, ಉಳಿದ ಮೂರು ಪ್ರಕರಣಗಳಲ್ಲಿ ರಾಜ್ಯ ಸರ್ಕಾರಗಳು ಮೇಲ್ಮನವಿ ಸಲ್ಲಿಸಿವೆ.

Notification_on_Death_Penalty_cases.pdf
Preview