ಸುದ್ದಿಗಳು

ನ್ಯಾಯಮಂಡಳಿ ಹುದ್ದೆಗಳ ಭರ್ತಿ ವಿಚಾರವನ್ನು ಅಧಿಕಾರಶಾಹಿ ಲಘುವಾಗಿ ಪರಿಗಣಿಸಿದೆ: ಸುಪ್ರೀಂ ಕೋರ್ಟ್ ಅಸಮಾಧಾನ

Bar & Bench

ದೇಶದ ನ್ಯಾಯಮಂಡಳಿಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದನ್ನು ಕೇಂದ್ರ ಸರ್ಕಾರವು ತಕ್ಷಣದ ಯಾಂತ್ರಿಕ ಪ್ರತಿಕ್ರಿಯೆಯಾಗಿ ಪರಿಗಣಿಸಿರುವುದಕ್ಕೆ ಸುಪ್ರೀಂಕೋರ್ಟ್‌ ಬುಧವಾರ ಅಸಮಾಧಾನ ವ್ಯಕ್ತಪಡಿಸಿದೆ.

ಅಧಿಕಾರಶಾಹಿ ಈ ಸಮಸ್ಯೆಯನ್ನು ಲಘುವಾಗಿ ತೆಗೆದುಕೊಳ್ಳುತ್ತಿದೆ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ನೇತೃತ್ವದ ಪೀಠ ಹೇಳಿತು.

ರಾಷ್ಟ್ರೀಯ ಕಂಪೆನಿ ಕಾನೂನು ನ್ಯಾಯಮಂಡಳಿ- ಎನ್‌ಸಿಎಲ್‌ಟಿಯಂತಹ ಪ್ರಕರಣಗಳಲ್ಲಿ ಗಡುವು ವಿಸ್ತರಣೆಗಾಗಿ ನಮಗೆ ವಿನಂತಿಗಳು ಬರುತ್ತಿವೆ. ಕೆಲವು ತಕ್ಷಣದ ಯಾಂತ್ರಿಕ ನೇಮಕಾತಿಗಳು ನಡೆದಿದ್ದು ಬಿಟ್ಟರೆ ಆ ಬಳಿಕ ಏನೂ ಆಗಿಲ್ಲ. (ನ್ಯಾಯಮಂಡಳಿ) ಸದಸ್ಯರ ಭವಿಷ್ಯ ನಮಗೆ ತಿಳಿದಿಲ್ಲ. ಅನೇಕರು ನಿವೃತ್ತರಾಗುತ್ತಿದ್ದಾರೆ. ಅಧಿಕಾರಶಾಹಿ ಇದನ್ನು ಲಘುವಾಗಿ ತೆಗೆದುಕೊಳ್ಳುತ್ತಿದೆ." ಎಂದು ಸಿಜೆಐ ಹೇಳಿದ್ದಾರೆ.

ಭಾರತದ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಅವರು ಖಾಲಿ ಇರುವ ಹುದ್ದೆಗಳ ಪಟ್ಟಿಯನ್ನು ತೋರಿಸಲು ಮುಂದಾದಾಗ, ನ್ಯಾ ರಮಣ “ಇಲ್ಲ, ಇಲ್ಲ, ಈಗ ಅದನ್ನು ಆಲಿಸಿದರೆ ಆದೇಶ ನೀಡಬೇಕಾಗುತ್ತದೆ” ಎಂದಿತು. ಎರಡು ವಾರಗಳ ಬಳಿಕ ಪ್ರಕರಣವನ್ನು ಪಟ್ಟಿ ಮಾಡಲು ನ್ಯಾಯಾಲಯ ಇದೇ ವೇಳೆ ಸೂಚಿಸಿತು.