A1
ಸುದ್ದಿಗಳು

ಶರದ್ ಪವಾರ್ ವಿರುದ್ಧ ಟ್ವೀಟ್: 2 ಎಫ್ಐಆರ್‌ಗಳಲ್ಲಿ ನಿಖಿಲ್ ಭಾಮ್ರೆಗೆ ಬಾಂಬೆ ಹೈಕೋರ್ಟ್ ಮಧ್ಯಂತರ ಜಾಮೀನು [ಚುಟುಕು]

Bar & Bench

ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್ ಅವರ ವಿರುದ್ಧ ಆಕ್ಷೇಪಾರ್ಹ ಟ್ವೀಟ್‌ ಮಾಡಿ ಬಂಧನದಲ್ಲಿರುವ 21 ವರ್ಷದ ವಿದ್ಯಾರ್ಥಿ ನಿಖಿಲ್ ಭಾಮ್ರೆಗೆ ಎರಡು ಎಫ್‌ಐಆರ್‌ಗಳಲ್ಲಿ ಬಾಂಬೆ ಹೈಕೋರ್ಟ್‌ನಿಂದ ಮಂಗಳವಾರ ಮಧ್ಯಂತರ ಜಾಮೀನು ದೊರೆತಿದೆ.

ಒಂದು ತಿಂಗಳಿಗಿಂತಲೂ ಹೆಚ್ಚು ಕಾಲ ವಿದ್ಯಾರ್ಥಿ ಜೈಲಿನಲ್ಲಿದ್ದಾನೆ. ಇನ್ನು ಇದಕ್ಕೆ ಅನುಮತಿಸಲಾಗದು. ಪ್ರಕರಣ ಸಾರ್ವಜನಿಕ ಹಿತಾಸಕ್ತಿಯ ಕೆಲ ಅಂಶಗಳನ್ನು ಒಳಗೊಂಡಿದೆ ಎಂದು ನ್ಯಾಯಮೂರ್ತಿಗಳಾದ ನಿತಿನ್ ಜಾಮ್‌ದಾರ್‌ ಮತ್ತು ಎನ್‌ ಆರ್ ಬೋರ್ಕರ್ ಅವರಿದ್ದ ಪೀಠ ಅಭಿಪ್ರಾಯಪಟ್ಟಿತು. ಮಹಾರಾಷ್ಟ್ರದ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಾಖಲಿಸಲಾಗಿದ್ದ ಆರು ಎಫ್ಐಆರ್‌ಗಳನ್ನು ಆಧರಿಸಿ ಭಾಮ್ರೆಯನ್ನು ಬಂಧಿಸಲಾಗಿತ್ತು. ಮೂರು ವಾರಗಳ ನಂತರ ಪ್ರಕರಣದ ಅಂತಿಮ ವಿಚಾರಣೆ ನಡೆಸಲು ನ್ಯಾಯಾಲಯ ನಿರ್ಧರಿಸಿದೆ.

ಹೆಚ್ಚಿನ ಮಾಹಿತಿಗೆ 'ಬಾರ್‌ ಅಂಡ್‌ ಬೆಂಚ್‌' ಇಂಗ್ಲಿಷ್‌ ಜಾಲತಾಣದ ಲಿಂಕ್‌ ಗಮನಿಸಿ.