A1
ಸುದ್ದಿಗಳು

ಅಂತರರಾಷ್ಟ್ರೀಯ ನ್ಯಾಯಾಲಯ ಕಾರ್ಯಪ್ರವೃತ್ತವಾಗದಿದ್ದರೆ ಪುಟಿನ್ ಆಕ್ರಮಣಕ್ಕೆ ಇದೇ ಕೊನೆಯ ನಿದರ್ಶನವಾಗದು: ಯುಕ್ರೇನ್

ಯುಕ್ರೇನ್ ಮೇಲೆ ಆಕ್ರಮಣ ಮುಂದುವರೆಸಿರುವ ರಷ್ಯಾ ವಿಚಾರಣೆಯಲ್ಲಿ ಭಾಗವಹಿಸಲು ನಿರಾಕರಿಸಿತು.

Bar & Bench

ತನ್ನ ಪ್ರದೇಶದಲ್ಲಿ ನಡೆಸುತ್ತಿರುವ ಸೇನಾ ಕಾರ್ಯಾಚರಣೆ ತಡೆಯಲು ರಷ್ಯಾಗೆ ನಿರ್ದೇಶಿಸುವ ತತ್ಕಾಲೀನ ಕ್ರಮಗಳನ್ನು ಸೂಚಿಸುವಂತೆ ನೆದರ್‌ಲ್ಯಾಂಡ್‌ನ ದಿ ಹೇಗ್‌ನಲ್ಲಿರುವ ಅಂತರಾಷ್ಟ್ರೀಯ ನ್ಯಾಯಾಲಯವನ್ನು (ಐಸಿಜೆ) ಯುಕ್ರೇನ್‌ ಸರ್ಕಾರ ಸೋಮವಾರ ಒತ್ತಾಯಿಸಿತು.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನೆರೆಯ ರಾಷ್ಟ್ರದ ಮೇಲೆ ನಡೆಸಿರುವ ದಾಳಿಯಿಂದಾಗಿ ಯುಕ್ರೇನ್‌ನ ಪರಿಸ್ಥಿತಿ ಮತ್ತು ದೇಶಕ್ಕೆ ಹಾಗೂ ಅದರ ನಾಗರಿಕರಿಗೆ ಉಂಟಾಗಬಹುದಾದ ಸರಿಪಡಿಸಲಾಗದ ಹಾನಿಯ ಹಿನ್ನೆಲೆಯಲ್ಲಿ ತತ್ಕಾಲೀನ ಕ್ರಮಗಳನ್ನು ತುರ್ತಾಗಿ ಸೂಚಿಸುವಂತೆ ಅದು ಐಸಿಜೆಯನ್ನು ಕೋರಿತು.

ಯುಕ್ರೇನ್‌ ಪರವಾಗಿ ವಾದ ಮಂಡಿಸಿದ ಯೇಲ್ ಕಾನೂನು ವಿಶ್ವವಿದ್ಯಾಲಯದ ಅಂತರರಾಷ್ಟ್ರೀಯ ಕಾನೂನಿನ ಪ್ರಾಧ್ಯಾಪಕ ಹೆರಾಲ್ಡ್ ಹೊಂಗ್ಜು ಕೊಹ್ “ಕಣ್ಣೆದುರೇ ನಡೆಯುತ್ತಿರುವಂಥ ದಾಳಿಯ ವಿರುದ್ಧ ಬಲವಾಗಿ ಮತ್ತು ನಿರ್ಣಾಯಕವಾಗಿ ಕಾರ್ಯನಿರ್ವಹಿಸದಿದ್ದರೆ ವಿಶ್ವಸಂಸ್ಥೆಯ ಅಂಗಗಳಿದ್ದೂ ಪ್ರಯೋಜನವೇನು? ನ್ಯಾಯಾಲಯ ಈಗ ಕಾರ್ಯಪ್ರವೃತ್ತವಾಗದಿದ್ದರೆ (ಯುಕ್ರೇನ್‌ ಮೇಲೆ ನಡೆಸಿರುವ) ಈ ದಾಳಿಯೇ ಪುಟಿನ್‌ ಆಕ್ರಮಣದ ಕೊನೆಯ ನಿದರ್ಶನವಾಗದು” ಎಂದು ವಾದಿಸಿದರು.

"ನಿಮ್ಮ (ನ್ಯಾಯಾಲಯದ) ಆದೇಶ ಅಂತರಾಷ್ಟ್ರೀಯ ಸಂಸ್ಥೆಗಳು ಮಾನವನಿಗೆ ಸಂಬಂಧಿಸಿದ ಮತ್ತಷ್ಟುನೋವುಗಳನ್ನು ತಡೆಗಟ್ಟಲು ಬಳಸುವ ಅತ್ಯಗತ್ಯ ಶಕ್ತಿಯಾಗಲಿದೆ" ಎಂದು ಅವರು ವಾದಿಸಿದರು.

ಯುಕ್ರೇನ್‌ನ ಕೆಲ ಪ್ರಮುಖ ವಾದಗಳು

  • ನರಮೇಧ ವಿರೋಧಿ ಸಮಾವೇಶ IIIನೇ ವಿಧಿಯಲ್ಲಿ ವ್ಯಾಖ್ಯಾನಿಸಿದಂತೆ ಯುಕ್ರೇನ್‌ನ ಲುಹಾನ್ಸ್ಕ್ ಮತ್ತು ಡೊನೆಟ್ಸ್ಕ್ ಪ್ರಾಂತ್ಯಗಳಲ್ಲಿ ಹತ್ಯಾಕಾಂಡ ನಡೆದಿಲ್ಲ ಎಂಬ ರಷ್ಯಾ ಒಕ್ಕೂಟದ ವಾದಕ್ಕೆ ವಿರುದ್ಧವಾಗಿ ನಿರ್ಣಯ ಕೈಗೊಂಡು ಘೋಷಿಸಿ.

  • ರಷ್ಯಾದ ಒಕ್ಕೂಟದ ನರಮೇಧದ ಸುಳ್ಳು ಹೇಳಿಕೆಯ ಆಧಾರದ ಮೇಲೆ ತೆಗೆದುಕೊಂಡ ಯಾವುದೇ ಕ್ರಮಗಳ ಪರಿಣಾಮವಾಗಿ ರಷ್ಯಾದ ಒಕ್ಕೂಟದಿಂದ ಉಂಟಾದ ಎಲ್ಲಾ ಹಾನಿಗಳಿಗೆ ಸಂಪೂರ್ಣ ಪರಿಹಾರ ಒದಗಿಸುವಂತೆ ಆದೇಶಿಸಿ.

  • ರಷ್ಯಾ ಒಕ್ಕೂಟ 24 ಫೆಬ್ರವರಿ 2022ರಂದು ಆರಂಭಿಸಿದ ಸೇನಾ ಕಾರ್ಯಾಚರಣೆಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕು,