ದೆಹಲಿ ಗಲಭೆ ಪ್ರಕರಣದಲ್ಲಿ ಆರೋಪಿಯಾಗಿ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ ಅಡಿ ಬಂಧಿತರಾಗಿರುವ ಉಮರ್ ಖಾಲಿದ್ ಅವರಿಗೆ ಸಹೋದರಿಯ ಮದುವೆಯಲ್ಲಿ ಭಾಗಿಯಾಗಲು ದೆಹಲಿ ನ್ಯಾಯಾಲಯವು ಏಳು ದಿನಗಳ ಮಧ್ಯಂತರ ಜಾಮೀನು ಮಂಜೂರು ಮಾಡಿ ಸೋಮವಾರ ಆದೇಶಿಸಿದೆ.
ಡಿಸೆಂಬರ್ 7ರಂದು ಕಾಯ್ದಿರಿಸಿದ್ದ ಜಾಮೀನು ಆದೇಶವನ್ನು ನ್ಯಾಯಾಧೀಶರಾದ ಅಮಿತಾಭ್ ರಾವತ್ ಅವರು ಇಂದು ಪ್ರಕಟಿಸಿದರು. ಡಿಸೆಂಬರ್ 23ರಂದು ಖಾಲಿದ್ ಅವರನ್ನು ಜೈಲಿನಿಂದ ಬಿಡುಗಡೆ ಮಾಡಬೇಕು. ಡಿಸೆಂಬರ್ 30ರಂದು ಅವರು ಮತ್ತೆ ಜೈಲಿಗೆ ವಾಪಸಾಗಬೇಕುಎ ಎಂದು ನ್ಯಾಯಾಲಯ ಹೇಳಿದೆ.
2020ರ ಸೆಪ್ಟೆಂಬರ್ 13ರಂದು ಖಾಲಿದ್ ಬಂಧನವಾಗಿದ್ದು, ಎರಡು ವರ್ಷಗಳನ್ನು ಅವರು ಜೈಲಿನಲ್ಲಿ ಕಳೆದಿದ್ದಾರೆ. ಖಾಲಿದ್ ಅವರು ಸಹೋದರಿಯ ಮದುವೆಯಲ್ಲಿ ಭಾಗಿಯಾಗಲು 14 ದಿನಗಳ ಅನುಮತಿ ಕೋರಿದ್ದರು. ಮಧ್ಯಂತರ ಜಾಮೀನಿಗೆ ಸಂಬಂಧಿಸಿದ ಷರತ್ತುಗಳನ್ನು ಒಳಗೊಂಡ ವಿವರವಾದ ಆದೇಶವನ್ನು ನ್ಯಾಯಾಲಯವು ಇನ್ನಷ್ಟೇ ಪ್ರಕಟಿಸಬೇಕಿದೆ.