Chhattisgarh High Court ramesh sogemane
ಸುದ್ದಿಗಳು

ಅವಿವಾಹಿತ ಮಗಳು ತನ್ನ ಮದುವೆ ವೆಚ್ಚವನ್ನು ಪೋಷಕರಿಂದ ಪಡೆಯಬಹುದು: ಛತ್ತೀಸ್‌ಗಢ ಹೈಕೋರ್ಟ್

ಹಿಂದೂ ದತ್ತಕ ಮತ್ತು ಜೀವನಾಂಶ ಕಾಯಿದೆಯ ಸೆಕ್ಷನ್ 3(ಬಿ)(ii) ನಿಸ್ಸಂದಿಗ್ಧವಾಗಿ, ಮದುವೆಗೆ ಸಂಬಂಧಿಸಿದ ವೆಚ್ಚಗಳನ್ನು ಒಳಗೊಂಡಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

Bar & Bench

ಹಿಂದೂ ದತ್ತು ಮತ್ತು ನಿರ್ವಹಣೆ ಕಾಯಿದೆ ಅಡಿಯಲ್ಲಿ ಮದುವೆಯಾಗದ ಮಗಳು ತನ್ನ ಪೋಷಕರಿಂದ ಮದುವೆಯ ವೆಚ್ಚವನ್ನು ಪಡೆಯಲು ಅರ್ಹಳು ಎಂದು ಛತ್ತೀಸ್‌ಗಢ ಹೈಕೋರ್ಟ್ ಕಳೆದ ವಾರ ಹೇಳಿದೆ [ರಾಜೇಶ್ವರಿ ಮತ್ತು ಭುನು ರಾಮ್ ನಡುವಣ ಪ್ರಕರಣ].

ಹಿಂದೂ ದತ್ತಕ ಮತ್ತು ಜೀವನಾಂಶ ಕಾಯಿದೆಯ ಸೆಕ್ಷನ್ 3(ಬಿ)(ii) ನಿಸ್ಸಂದಿಗ್ಧವಾಗಿ, ಮದುವೆಗೆ ಸಂಬಂಧಿಸಿದ ವೆಚ್ಚಗಳನ್ನು ಒಳಗೊಂಡಿದೆ ಎಂದು ನ್ಯಾಯಮೂರ್ತಿಗಳಾದ ಗೌತಮ್ ಭಾದುರಿ ಮತ್ತು ಸಂಜಯ್ ಎಸ್ ಅಗರವಾಲ್ ಅವರಿದ್ದ ವಿಭಾಗೀಯ ಪೀಠ ತಿಳಿಸಿದೆ.

"ಭಾರತೀಯ ಸಮಾಜದಲ್ಲಿ, ಸಾಮಾನ್ಯವಾಗಿ ಮದುವೆಗೆ ಮೊದಲು ಮತ್ತು ಮದುವೆಯ ಸಮಯದಲ್ಲಿ ವೆಚ್ಚ ಮಾಡಬೇಕಾಗುತ್ತದೆ," ಎಂದ ನ್ಯಾಯಾಲಯ ಈ ಕುರಿತ ಹಕ್ಕನ್ನು ಸೃಷಿಸಲಾಗಿದ್ದು ಅವಿವಾಹಿತ ಹೆಣ್ಣುಮಕ್ಕಳು ಇದನ್ನು ಕೇಳಿದಾಗ ನಿರಾಕರಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ.

ವಿವಾಹದ ಉದ್ದೇಶಕ್ಕಾಗಿ ಅವಿವಾಹಿತ ಹೆಣ್ಣುಮಗಳೊಬ್ಬಳು ತನ್ನ ತಂದೆಯಿಂದ ₹ 25 ಲಕ್ಷ ಮೊತ್ತ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕೌಟುಂಬಿಕ ನ್ಯಾಯಾಲಯ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಆಕೆ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಕೌಟುಂಬಿಕ ನ್ಯಾಯಾಲಯಕ್ಕೆ ಪ್ರಕರಣವನ್ನು ವಹಿಸಿದ ಸುಪ್ರೀಂಕೋರ್ಟ್‌ ಅರ್ಹತೆಯ ಆಧಾರದ ಮೇಲೆ ಅದು ತೀರ್ಪು ನೀಡಬೇಕು ಎಂದಿತು. ಇದೇ ವೇಳೆ ಅರ್ಜಿದಾರರು ಕೌಟುಂಬಿಕ ನ್ಯಾಯಾಲಯದ ಮುಂದೆ ಏಪ್ರಿಲ್ 25ರಂದು ಹಾಜರಾಗಬೇಕು ಎಂದು ಸೂಚಿಸಿತು.