Maharashtra CM Eknath Shinde
Maharashtra CM Eknath Shinde 
ಸುದ್ದಿಗಳು

ʼಹೆಲೋʼ ಬದಲಿಗೆ ʼವಂದೇ ಮಾತರಂʼ ಬಳಸಿ: ಮಹಾರಾಷ್ಟ್ರದ ಸರ್ಕಾರಿ ನೌಕರರಿಗೆ ಆದೇಶ

Bar & Bench

ಎಲ್ಲಾ ಸರ್ಕಾರಿ ನೌಕರರು ಮತ್ತು ಸರ್ಕಾರಿ ಅನುದಾನಿತ ಸಂಸ್ಥೆಗಳಲ್ಲಿ ಕೆಲಸ ಮಾಡುವವರು ಕಡ್ಡಾಯವಾಗಿ 'ಹೆಲೋ' ಬದಲಿಗೆ 'ವಂದೇ ಮಾತರಂ' ಎಂದು ಹೇಳುವ ಮೂಲಕ ವ್ಯಕ್ತಿಗಳು ಮತ್ತು ಅಥವಾ ಅಧೀನ ಅಧಿಕಾರಿಗಳು, ಸಿಬ್ಬಂದಿಯೊಂದಿಗೆ ಯಾವುದೇ ದೂರವಾಣಿ ಸಂಭಾಷಣೆ ಪ್ರಾರಂಭಿಸಬೇಕು ಎಂದು ಮಹಾರಾಷ್ಟ್ರ ಸರ್ಕಾರ  ಶನಿವಾರ ಸರ್ಕಾರಿ ನಿರ್ಣಯವೊಂದನ್ನು (ಜಿಆರ್‌) ಹೊರಡಿಸಿದೆ.

ಎಲ್ಲಾ ಸರ್ಕಾರಿ ನೌಕರರು ವೈಯಕ್ತಿಕ ದೂರವಾಣಿ ಸಂಭಾಷಣೆಗಳಲ್ಲಿ 'ವಂದೇ ಮಾತರಂ' ಬಳಸಲು ಮುಂದಾಗಿ ಸುತ್ತಲಿನ ಇತರರನ್ನು ಅದೇ ರೀತಿ ಮಾಡಲು ಉತ್ತೇಜಿಸಬೇಕು ಎಂದು ನಿರ್ಣಯದಲ್ಲಿ ವಿವರಿಸಲಾಗಿದೆ. ವಂದೇ ಮಾತರಂ ಬಳಕೆ ಎಲ್ಲರಿಗೂ ಕಡ್ಡಾಯವಲ್ಲದಿದ್ದರೂ 'ಹೆಲೋ' ಬದಲಿಗೆ ಇದನ್ನು ಪ್ರಚಾರ ಮಾಡಲು ತನ್ನ ಉದ್ಯೋಗಿಗಳಿಗೆ ಸರ್ಕಾರ ಮನವಿ ಮಾಡಿದೆ.

ಭಾರತದ ಸ್ವಾತಂತ್ರ್ಯಗೊಂಡ 75ನೇ ವರ್ಷದ ನಿಮಿತ್ತ ಆಜಾದಿ ಕಾ ಅಮೃತ್‌ ಮಹೋತ್ಸವ್‌ ಆಚರಿಸಲಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಏಕನಾಥ್ ಶಿಂಧೆ ನೇತೃತ್ವದ ಸರ್ಕಾರ ನಿರ್ಣಯ ಹೊರಡಿಸಿದೆ.

ದೂರವಾಣಿ ಅಥವಾ ವೈಯಕ್ತಿಕ ಸಭೆಗಳಂತಹ  ಅಧಿಕೃತ ಸಂವಹನದ ವೇಳೆ 'ಹೆಲೋ' ಬದಲಿಗೆ 'ವಂದೇ ಮಾತರಂ' ಅನ್ನು ಶುಭಾಶಯವಾಗಿ ಬಳಸಬೇಕೆಂದು ನಿರ್ಣಯ ತಿಳಿಸಿದೆ.

ಸಂವಹನಕ್ಕಾಗಿ ಯಾವ ಪದಗಳನ್ನು ಬಳಸಬೇಕು ಎಂಬುದರ ಕುರಿತು ಯಾವುದೇ ಅಧಿಕೃತ ಮಾರ್ಗಸೂಚಿಗಳಿಲ್ಲ ಎಂದು ಅದು ಸ್ಪಷ್ಟಪಡಿಸಿದ್ದು 'ಹೆಲೋ' ಪದಕ್ಕೆ ಯಾವುದೇ ನಿರ್ದಿಷ್ಟ ಅರ್ಥ  ಇಲ್ಲ . ಅದು ಸಮಷ್ಟಿಯ ಭಾವನೆ ಮೂಡಿಸುವುದಿಲ್ಲ ಎಂದು  ವಿವರಿಸಿದೆ.

‘ವಂದೇ ಮಾತರಂ’ ಪದದ ಬಳಕೆ (ನಾಗರಿಕರಲ್ಲಿ) ಆತ್ಮೀಯತೆಯ ಭಾವವನ್ನು ಮೂಡಿಸುವುದಲ್ಲದೆ, ಸಂಭಾಷಣೆಗೆ ಸಕಾರಾತ್ಮಕ ನಿರ್ದೇಶನ ನೀಡುತ್ತದೆ ಮತ್ತು ನವ ಚೈತನ್ಯ ತುಂಬುತ್ತದೆ ಎಂದು ತಿಳಿಸಲಾಗಿದೆ. ಇದರಿಂದ 'ಹೆಲೋ'ದಂತಹ ಅರ್ಥಹೀನ ಪದದ  ಬಳಕೆ ಕಡಿಮೆ ಮಾಡಿ ದೇಶದ ಇತರೆ ರಾಜ್ಯಗಳು ಸಂವಹನಕ್ಕಾಗಿ ಏಕರೂಪದ ಪದ ಬಳಸುವುದನ್ನು ಪ್ರೋತ್ಸಾಹಿಸುತ್ತದೆ ಎಂದು ನಿರ್ಣಯ ಹೇಳಿದೆ.

[ನಿರ್ಣಯದ ಪ್ರತಿಯನ್ನು ಇಲ್ಲಿ ಓದಿ]

Maharashtra_GR_dated_October_1.pdf
Preview