ಮದುವೆ
ಮದುವೆ  
ಸುದ್ದಿಗಳು

ಹಿಂದೂ ವಿವಾಹಿತ ಮಹಿಳೆ ಕುಂಕುಮ ಧರಿಸುವುದು ಆಕೆಯ ಧಾರ್ಮಿಕ ಕರ್ತವ್ಯ: ಮಧ್ಯಪ್ರದೇಶ ಕೌಟುಂಬಿಕ ನ್ಯಾಯಾಲಯ

Bar & Bench

ತನ್ನ ವೈವಾಹಿಕ ಸ್ಥಿತಿಯನ್ನು ಬಿಂಬಿಸುವ ಕಾರಣಕ್ಕೆ ಸಾಂಪ್ರದಾಯಿಕ ಸಿಂಧೂರ (ಕುಂಕುಮ) ಧರಿಸುವುದು ಹಿಂದೂ ಮಹಿಳೆಯ ಜವಾಬ್ದಾರಿ ಎಂದು ಮಧ್ಯಪ್ರದೇಶದ ಕೌಟುಂಬಿಕ ನ್ಯಾಯಾಲಯ ಈಚೆಗೆ ಹೇಳಿದೆ.

ಮಹಿಳೆ ಕೂಡಲೇ ಪತಿಯ ಮನೆಗೆ ಮರಳಬೇಕು ಎಂದು ನಿರ್ದೇಶನ ನೀಡಿದ ನ್ಯಾಯಾಧೀಶ ಎನ್‌ ಪಿ ಸಿಂಗ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.

ಹಿಂದೂ ವಿವಾಹ ಕಾಯಿದೆಯಡಿ ತನ್ನ ಹಕ್ಕುಗಳನ್ನು ಪುನಃಸ್ಥಾಪಿಸುವಂತೆ ಕೋರಿ ಪತಿಯೊಬ್ಬರು ಸಲ್ಲಿಸಿದ್ದ ಮನವಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಅವಲೋಕನ ಮಾಡಿದೆ.

ದಂಪತಿ 2017ರಲ್ಲಿ ವಿವಾಹವಾಗಿದ್ದರು. ಅವರಿಗೆ ಐದು ವರ್ಷದ ಪುತ್ರನಿದ್ದಾನೆ. ವಿಚ್ಛೇದನಕ್ಕೆ ಮುಂದಾಗಿದ್ದ ಅವರ ಪತ್ನಿ ಕಳೆದ ಐದು ವರ್ಷಗಳಿಂದ ಗಂಡನಿಂದ ಬೇರೆಯಾಗಿ ವಾಸ ಮಾಡುತ್ತಿದ್ದರು.

ತನ್ನ ಪತಿ ವರದಕ್ಷಿಣೆಗಾಗಿ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ವಿಚಾರಣೆ ವೇಳೆ ಆಕೆ ಆರೋಪಿಸಿದ್ದರು. ಆದರೆ ಈ ಆರೋಪವನ್ನು ಸಾಬೀತುಪಡಿಸುವಂತಹ ಪೊಲೀಸ್‌ ದೂರಾಗಲೀ ಅಥವಾ ವರದಿಯಾಗಲೀ ಇಲ್ಲ ಎಂಬುದನ್ನು ನ್ಯಾಯಾಲಯ ತಿಳಿಸಿತು.

ಮಹಿಳೆಯನ್ನು ಆಕೆಯ ಪತಿ ತೊರೆದಿಲ್ಲ, ಬದಲಾಗಿ ಆಕೆಯೇ ಆತನನ್ನು ತೊರೆಯಲು ನಿರ್ಧರಿಸಿದ್ದಳು ಎಂದು ನ್ಯಾಯಾಲಯ ವಿವರಿಸಿತು.

ಹೀಗಾಗಿ ತನ್ನ ವೈವಾಹಿಕ ಮನೆಗೆ ತೆರಳುವಂತೆ ನಿರ್ದೇಶಿಸಿದ ನ್ಯಾಯಾಲಯ ಅವಳು ತನ್ನ ಪತಿಯಿಂದ ಸ್ವಯಂಪ್ರೇರಿತವಾಗಿ ದೂರವಾಗಿದ್ದಾಳೆ. ಆಕೆ ಸಿಂಧೂರ ಧರಿಸಿಲ್ಲ ಎಂದು ತನ್ನ ಆದೇಶದಲ್ಲಿ ಅವಲೋಕಿಸಿತು.