ಭಾರತೀಯ ಚುನಾವಣಾ ಆಯೋಗ (ಇಸಿಐ) ನಡೆಸುತ್ತಿರುವ ಮತದಾರರ ಪಟ್ಟಿಗಳ ವಿಶೇಷ ಆಮೂಲಾಗ್ರ ಪರಿಷ್ಕರಣೆಯನ್ನು (ಎಸ್‌ಐಆರ್) ಪ್ರಶ್ನಿಸಲಾಗಿರುವ ತಮ್ಮ ಅರ್ಜಿಯ ಸಂಬಂಧ ವಾದಿಸಲು ಮಮತಾ ಬ್ಯಾನರ್ಜಿ ಇಂದು ಖುದ್ದು ಸುಪ್ರೀಂ ಕೋರ್ಟ್‌ಗೆ ಆಗಮಿಸಿದ್ದು, ವಾದಮಂಡನೆಗೆ ಅನುಮತಿ ಕೋರಲಿದ್ದಾರೆ.
ಎಸ್‌ಐಆರ್ ಕುರಿತು ತಮ್ಮ ಕಳವಳವನ್ನು ವ್ಯಕ್ತಪಡಿಸಲು ವೈಯಕ್ತಿಕವಾಗಿ ಹಾಜರಾಗಲು ಮತ್ತು ವಾದಿಸಲು ಅನುಮತಿ ಕೋರಿ ಮಮತಾ ಬ್ಯಾನರ್ಜಿ ಮಧ್ಯಂತರ ಅರ್ಜಿಯನ್ನು ಸಲ್ಲಿಸಿದ್ದರು. ತಮ್ಮ ವಕೀಲರೊಂದಿಗೆ ನ್ಯಾಯಾಲಯದ ಕೊಠಡಿ 1ರಲ್ಲಿ ಅವರು ಇಂದು ವೈಯಕ್ತಿಕವಾಗಿ ಹಾಜರಿದ್ದಾರೆ.
ಪ್ರಕರಣವನ್ನು ಸಿಜೆಐ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜೊಯಮಲ್ಯ ಬಾಗ್ಚಿ ಮತ್ತು ವಿಪುಲ್ ಪಾಂಚೋಲಿ ಅವರನ್ನೊಳಗೊಂಡ ಪೀಠ ವಿಚಾರಣೆ ನಡೆಸುತ್ತಿದೆ.
ವಿಚಾರಣೆಯ ವಿವರಗಳನ್ನು ಇಲ್ಲಿ ಗಮನಿಸಿ: