SC Collegium under CJI BR Gavai 
ಸುದ್ದಿಗಳು

ಸಿಜೆಐ ಬಿ ಆರ್ ಗವಾಯಿ ನೇತೃತ್ವದ ಸುಪ್ರೀಂ ಕೋರ್ಟ್ ಕೊಲಿಜಿಯಂನ ಸದಸ್ಯರು ಇವರು

ಸಿಜೆಐ ಗವಾಯಿ ಅವರ ಆರು ತಿಂಗಳ ಅವಧಿಯಲ್ಲಿ, ಕೊಲಿಜಿಯಂನಲ್ಲಿ ಒಬ್ಬ ಸದಸ್ಯರು ಮಾತ್ರ ಬದಲಾಗಲಿದ್ದಾರೆ.

Bar & Bench

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ ಆರ್ ಗವಾಯಿ ಅವರ ಅಧಿಕಾರಾವಧಿ ಸುಮಾರು ಆರು ತಿಂಗಳು ಇರಲಿದೆ. ಮೇ 14 ರಂದು ಪ್ರಮಾಣ ವಚನ ಸ್ವೀಕರಿಸಿದ ಸಿಜೆಐ ಗವಾಯಿ ನೇತೃತ್ವದ ಕೊಲಿಜಿಯಂನಲ್ಲಿ ಹೆಚ್ಚಿನ ಬದಲಾವಣೆಗಳು ಇರುವುದಿಲ್ಲ.

ಸುಪ್ರೀಂ ಕೋರ್ಟ್‌ಗೆ ನ್ಯಾಯಮೂರ್ತಿಗಳನ್ನು ನೇಮಿಸುವ ಹೊಣೆಗಾರಿಕೆ ಜೊತೆಗೆ ಹೈಕೋರ್ಟ್ ನ್ಯಾಯಮೂರ್ತಿಗಳ ವರ್ಗಾವಣೆ ನಿರ್ಧರಿಸುವ ಜವಾಬ್ದಾರಿ ಸರ್ವೋಚ್ಚ ನ್ಯಾಯಾಲಯದ ಐವರು ಹಿರಿಯ ನ್ಯಾಯಮೂರ್ತಿಗಳನ್ನು ಒಳಗೊಂಡಿರುವ ಕೊಲಿಜಿಯಂನದ್ದಾಗಿದೆ. ಮೂವರು ಹಿರಿಯ ನ್ಯಾಯಮೂರ್ತಿಗಳು ಹೈಕೋರ್ಟ್‌ಗಳಿಗೆ ನ್ಯಾಯಮೂರ್ತಿಗಳ ನೇಮಕಾತಿಯ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ.

ಸಿಜೆಐ ಗವಾಯಿ ಅವರ ಅಧಿಕಾರಾವಧಿ ಆರಂಭದಲ್ಲಿ, ಕೊಲಿಜಿಯಂನಲ್ಲಿ ನ್ಯಾಯಮೂರ್ತಿಗಳಾದ  ಸೂರ್ಯ ಕಾಂತ್ ,  ಅಭಯ್ ಎಸ್ ಓಕಾ, ವಿಕ್ರಮ್ ನಾಥ್ ಮತ್ತು ಜೆ ಕೆ ಮಹೇಶ್ವರಿ ಇರಲಿದ್ದಾರೆ.

ನ್ಯಾಯಮೂರ್ತಿ ಓಕಾ ಅವರು ಮೇ 2025 ರಂದು ನಿವೃತ್ತರಾದ ನಂತರ, ದೇಶದ ಮೊದಲ ಮಹಿಳಾ ಸಿಜೆಐ ಆಗಲಿರುವ ನ್ಯಾಯಮೂರ್ತಿ  ಬಿ ವಿ ನಾಗರತ್ನ ಅವರು ಕೊಲಿಜಿಯಂ ಸದಸ್ಯರಾಗಲಿದ್ದಾರೆ.

ನವೆಂಬರ್ 23, 2025 ರಂದು ಸಿಜೆಐ ಗವಾಯಿ ನಿವೃತ್ತರಾದ ನಂತರ ನ್ಯಾಯಮೂರ್ತಿ  ಎಂ ಎಂ ಸುಂದರೇಶ್ ಅವರು  ಕೊಲಿಜಿಯಂಗೆ ಸೇರ್ಪಡೆಯಾಗಲಿದ್ದಾರೆ.