ನ್ಯಾಯವಾದಿಯತಿನ್ ಓಝಾ ಅವರು ಗುಜರಾತ್ ಹೈಕೋರ್ಟ್ ವಕೀಲರ ಸಂಘದ ಅಧ್ಯಕ್ಷರಾಗಿ ಆಯ್ಕಯಾಗಿದ್ದಾರೆ.
ಓಝಾ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಾಬುಭಾಯಿ ಮಂಗುಕಿಯಾ ಅವರನ್ನು 247 ಮತಗಳ ಅಂತರದಿಂದ ಮಣಿಸಿದರು.
“ವಕೀಲರ ಸಮುದಾಯ ತನ್ನ ಕರ್ತವ್ಯ ನಿರ್ವಹಿಸಿದೆ. ಈಗ ಅದಕ್ಕೆ ಪ್ರತಿಫಲ ನೀಡುವುದು ನನ್ನ ಕರ್ತವ್ಯ. ನಾನು ನನ್ನ ವಕೀಲ ಸಮುದಾಯವನ್ನು ಎಂದಿಗೂ ನಿರಾಶೆಪಡಿಸುವುದಿಲ್ಲ,” ಎಂದು ಓಝಾ ಹೇಳಿದರು.
2020ರಲ್ಲಿ, ಹೈಕೋರ್ಟ್ ರಿಜಿಸ್ಟ್ರಿ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಮಾಡಿದ್ದ ಕಾರಣಕ್ಕಾಗಿ, ಹೈಕೋರ್ಟ್ ಓಝಾ ಅವರಿಂದ ಹಿರಿಯ ನ್ಯಾಯವಾದಿ ಪದನಾಮವನ್ನು ಹಿಂಪಡೆದಿತ್ತು.
ಅವರ ವಿರುದ್ಧ ಸ್ವಯಂಪ್ರೇರಿತ ಕ್ರಿಮಿನಲ್ ನ್ಯಾಯಾಂಗ ನಿಂದನೆ ಮೊಕದ್ದಮೆಯನ್ನೂ ಹೂಡಲಾಗಿತ್ತು.
ಅಕ್ಟೋಬರ್‌ನಲ್ಲಿ ಅವರು ತಪ್ಪಿತಸ್ಥರೆಂದು ತೀರ್ಪು ನೀಡಿ, ₹2,000 ದಂಡದೊಂದಿಗೆ ನ್ಯಾಯಾಲಯದ ಅವಧಿ ಮುಗಿಯುವವರೆಗೆ ಸಾದಾ ಜೈಲು ಶಿಕ್ಷೆ ಅನುಭವಿಸಬೇಕು ಎಂದು ಆದೇಶಿಸಿತ್ತು.
ಎರಡು ವರ್ಷಗಳ ನಂತರ, ಸುಪ್ರೀಂ ಕೋರ್ಟ್ ತೀರ್ಪಿನ ಪರಿಣಾಮ, ಅವರ ಹಿರಿಯ ವಕೀಲ ಪದನಾಮವನ್ನು ಎರಡು ವರ್ಷಗಳ ಅವಧಿಗೆ ಮರಳಿ ಒದಗಿಸಲಾಗಿತ್ತು. ಪ್ರಕರಣ ಈಗಲೂ ಮುಂದುವರೆದಿದೆ. ಕಳೆದ ಆಗಸ್ಟ್‌ನಲ್ಲಿ, ಹೈಕೋರ್ಟ್ ಹಾಗೂ ಅದರ ರಿಜಿಸ್ಟ್ರಿ ವಿರುದ್ಧ ತಾವು ಹೇಳಿಕೆ ನೀಡಿದ್ದಕ್ಕೆ ವಿಷಾದ ವ್ಯಕ್ತಪಡಿಸಿ ಅಫಿಡವಿಟ್ ಸಲ್ಲಿಸಲು ಸುಪ್ರೀಂ ಕೋರ್ಟ್ ಓಝಾ ಅವರಿಗೆ ಸೂಚಿಸಿತ್ತು.
ಓಝಾ ಮತ್ತು ಮಂಗುಕಿಯಾ ಅವರ ಜೊತೆಗೆ ಹಾಲಿ ಅಧ್ಯಕ್ಷರಾದ ಬ್ರಿಜೇಶ್ ತ್ರಿವೇದಿ, ದರ್ಶನ ಶಾ ಮತ್ತು ಚಿತ್ರಜಿತ್ ಉಪಾಧ್ಯಾಯ ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು.
ಉಪಾಧ್ಯಕ್ಷ ಸ್ಥಾನಕ್ಕಾಗಿ ಪೃಥ್ವಿರಾಜಸಿಂಹ್ ಜಡೇಜಾ, ಪುನಿತ್ ಜುನೇಜಾ, ಅಶೋಕ್ ಪಾರೆಖ್, ವಿರಾಟ್ ಪೋಪಟ್, ಅಭಿರಾಜ್ ತ್ರಿವೇದಿ ಮತ್ತು ನಿರವ್ ತ್ರಿವೇದಿ ಅವರು ಸ್ಪರ್ಧೆಯಲ್ಲಿ ಇದ್ದರು.
ಸಾಮಾನ್ಯ ಕಾರ್ಯದರ್ಶಿ ಹುದ್ದೆಗೆ ವಕೀಲರಾದ ಹಾರ್ದಿಕ್ ಬ್ರಹ್ಮಭಟ್ಟ್, ಮಹೇಶ್ ಬರಿಯಾ, ಭಾವಿಕ್ ಪಾಂಡ್ಯ, ದೇವೇಂದ್ರ ಪಾಂಡ್ಯ ಮತ್ತು ವಿಶಾಲ್ ಠಕ್ಕರ್ ಅವರು ಸ್ಪರ್ಧಿಸಿದ್ದರು.
ಡಿಸೆಂಬರ್ 2023ರಲ್ಲಿ, ವಕೀಲ ಬ್ರಿಜೇಶ್ ತ್ರಿವೇದಿ ಅವರು 1,060 ಮತಗಳನ್ನು ಪಡೆದು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದರು. ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಹಾಗೂ ಸಂಘದ ಮಾಜಿ ಅಧ್ಯಕ್ಷರಾದ ಪ್ರವೀಣ್ ಸಿಂಹ ಜಡೇಜಾ ಅವರನ್ನು ಸೋಲಿಸಿದ್ದರು. ಜಡೇಜಾ ಅವರು 580 ಮತಗಳನ್ನು ಪಡೆದಿದ್ದರು.