ಹತ್ತು ಸಾವಿರ ಪ್ರಕರಣ ವಿಲೇವಾರಿ, 6 ಸಂವಿಧಾನ ಪೀಠಗಳ ರಚನೆ, ನಾನಿತ್ತ ಭರವಸೆಗಳಲ್ಲಿ ಬಹುಪಾಲು ಈಡೇರಿವೆ: ಸಿಜೆಐ ಲಲಿತ್‌

ಸುಪ್ರೀಂ ಕೋರ್ಟ್ ವಕೀಲರ ಸಂಘ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
CJI UU Lalit
CJI UU Lalit

ತಾವು ಇದೇ ಆಗಸ್ಟ್ 27 ರಂದು ಸಿಜೆಐ ಆಗಿ ಅಧಿಕಾರ ವಹಿಸಿಕೊಂಡಾಗ ನೀಡಿದ್ದ ಭರವಸೆಗಳಲ್ಲಿ ಬಹುಪಾಲು ಈಡೇರಿಸಿದ್ದೇನೆ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್‌ ತಮ್ಮ ಕರ್ತವ್ಯದ ಕೊನೆಯ ದಿನವಾದ ಸೋಮವಾರ ಹೇಳಿದರು.

Also Read
ಇಡಬ್ಲ್ಯೂಎಸ್‌ ಮೀಸಲಾತಿ ಎತ್ತಿ ಹಿಡಿದ ಸುಪ್ರೀಂ ಕೋರ್ಟ್: ಸಿಜೆಐ ಲಲಿತ್‌, ನ್ಯಾ. ಭಟ್‌ ವ್ಯತಿರಿಕ್ತ ತೀರ್ಪು

ಸುಪ್ರೀಂ ಕೋರ್ಟ್‌ ವಕೀಲರ ಸಂಘ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು. ಪ್ರಕರಣಗಳ ಪಟ್ಟಿ ಮಾಡುವುದನ್ನು ನಾನು ಸುವ್ಯವಸ್ಥಿತಗೊಳಿಸುವೆ  ಎಂದು ಹೇಳಿದ್ದೆ, ನಿಯಮಿತ ಪ್ರಕರಣಗಳನ್ನು ವಿಚಾರಣೆಗೆ ಪಟ್ಟಿ ಮಾಡಲಾಗುತ್ತಿದೆ. ಒಂದು ಸಂವಿಧಾನ ಪೀಠ ಅಸ್ತಿತ್ವದಲ್ಲಿರುವಂತೆ ನೋಡಿಕೊಳ್ಳಲಾಗಿದೆ. ಕೆಲಮಟ್ಟಿಗೆ ನಾನಿತ್ತ ಭರವಸೆಗಳು ಈಡೇರಿವೆ ಎಂದು ಅವರು ತಿಳಿಸಿದರು.

ತಮ್ಮ ಅವಧಿಯಲ್ಲಿ 10,000 ಪ್ರಕರಣಗಳನ್ನು ವಿಲೇವಾರಿ ಮಾಡಿರುವುದಾಗಿ ತಿಳಿಸಿದ ಅವರು, 6 ಸಂವಿಧಾನ ಪೀಠಗಳ ರಚನೆಯಾಗಿದೆ. ಸುಮಾರು 13,000 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ತಿಳಿಸಿದರು.

Related Stories

No stories found.
Kannada Bar & Bench
kannada.barandbench.com