ರಾಮ ಮಂದಿರ ಉದ್ಘಾಟನೆಯಲ್ಲಿ ನಾಲ್ವರು ನಿವೃತ್ತ ಸಿಜೆಐಗಳ ಸಹಿತ ಸುಪ್ರೀಂ ಕೋರ್ಟ್‌ನ 13 ಮಾಜಿ ನ್ಯಾಯಮೂರ್ತಿಗಳು ಭಾಗಿ

ಅಯೋಧ್ಯೆ ಪೀಠದ ಭಾಗವಾಗಿದ್ದ ಮಾಜಿ ಸಿಜೆಐಗಳಾದ ರಂಜನ್ ಗೊಗೊಯ್, ಎಸ್ಎ ಬೊಬ್ಡೆ ಮತ್ತು ನ್ಯಾಯಮೂರ್ತಿ ಅಬ್ದುಲ್ ನಜೀರ್ ಅವರು ಪೂರ್ವನಿರ್ಧರಿತ ಅಧಿಕೃತ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ.
13 judges attend Ram mandir event
13 judges attend Ram mandir event

ಇಂದು (ಜ.22, 2024) ನಡೆದ ಅಯೋಧ್ಯೆಯ ರಾಮ ಮಂದಿರದ ಪ್ರತಿಷ್ಠಾಪನಾ ಸಮಾರಂಭದಲ್ಲಿ ಸುಪ್ರೀಂ ಕೋರ್ಟ್‌ನ ಹದಿಮೂರು ಮಾಜಿ ನ್ಯಾಯಮೂರ್ತಿಗಳು ಭಾಗವಹಿಸಿದ್ದರು.

ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರು ಅಧಿಕೃತ ಕರ್ತವ್ಯಗಳಿಂದಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗದಿದ್ದರೂ, ಭಾರತದ ಹಲವಾರು ನಿವೃತ್ತ ಮುಖ್ಯ ನ್ಯಾಯಮೂರ್ತಿಗಳು ಮತ್ತು ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅವರುಗಳೆಂದರೆ:

ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ

ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್

ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಜೆ ಎಸ್ ಖೇಹರ್

ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ವಿ ಎನ್ ಖರೆ

ನ್ಯಾಯಮೂರ್ತಿ (ನಿವೃತ್ತ) ಅಶೋಕ್ ಭೂಷಣ್ (ಪ್ರಸ್ತುತ ಎನ್‌ಸಿಎಲ್ಎಟಿ ಅಧ್ಯಕ್ಷ)

ನ್ಯಾಯಮೂರ್ತಿ (ನಿವೃತ್ತ) ಅರುಣ್ ಮಿಶ್ರಾ (ಪ್ರಸ್ತುತ ಎನ್ಎಚ್‌ಆರ್‌ಸಿ ಅಧ್ಯಕ್ಷ)

ನ್ಯಾಯಮೂರ್ತಿ (ನಿವೃತ್ತ) ಆದರ್ಶ್ ಗೋಯೆಲ್

ನ್ಯಾಯಮೂರ್ತಿ (ನಿವೃತ್ತ) ವಿ ರಾಮಸುಬ್ರಹ್ಮಣ್ಯಂ

ನ್ಯಾಯಮೂರ್ತಿ (ನಿವೃತ್ತ) ಅನಿಲ್ ದವೆ

ನ್ಯಾಯಮೂರ್ತಿ (ನಿವೃತ್ತ) ವಿನೀತ್ ಸರಣ್‌

ನ್ಯಾಯಮೂರ್ತಿ (ನಿವೃತ್ತ) ಕೃಷ್ಣ ಮುರಾರಿ

ನ್ಯಾಯಮೂರ್ತಿ (ನಿವೃತ್ತ) ಗ್ಯಾನ್ ಸುಧಾ ಮಿಶ್ರಾ

ನ್ಯಾಯಮೂರ್ತಿ (ನಿವೃತ್ತ) ಮುಕುಂದಕಮ್ ಶರ್ಮಾ 

ಅಯೋಧ್ಯೆ ಪ್ರಕರಣದಲ್ಲಿ ಹಿಂದೂ ಪಕ್ಷಗಳ ಪರವಾಗಿ ತೀರ್ಪು ನೀಡಿದ ಸುಪ್ರೀಂ ಕೋರ್ಟ್ ಪೀಠದ ಭಾಗವಾಗಿದ್ದ ಮಾಜಿ ಸಿಜೆಐಗಳಾದ ರಂಜನ್ ಗೊಗೊಯ್, ಎಸ್ಎ ಬೊಬ್ಡೆ ಮತ್ತು ನ್ಯಾಯಮೂರ್ತಿ ಅಬ್ದುಲ್ ನಜೀರ್ (ಈಗ ಆಂಧ್ರಪ್ರದೇಶದ ರಾಜ್ಯಪಾಲರು) ಅವರು ಪೂರ್ವ ನಿರ್ಧರಿತ ಅಧಿಕೃತ ಕಾರ್ಯಕ್ರಮಗಳಿಂದಾಗಿ ಸಮಾರಂಭದಲ್ಲಿ ಭಾಗವಹಿಸಿರಲಿಲ್ಲ.

ಸಾಲಿಸಿಟರ್ ಜನರಲ್ (ಎಸ್‌ಜಿ) ತುಷಾರ್ ಮೆಹ್ತಾ ಮತ್ತು ಭಾರತದ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರೂ ಕೂಡ ನ್ಯಾಯಾಲಯದ ಕಲಾಪದ ಹಿನ್ನೆಲೆಯಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗಿರಲಿಲ್ಲ.

Related Stories

No stories found.
Kannada Bar & Bench
kannada.barandbench.com