ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿರುವವರ ಪೈಕಿ ಎಂಟು ಮಂದಿ 2022ರಲ್ಲಿ ನಿವೃತ್ತಿ ಹೊಂದಲಿದ್ದು, ಸುಪ್ರೀಂ ಕೋರ್ಟ್ ಸಮೀಕರಣವೂ ಬದಲಾವಣೆಯಾಗಲಿದೆ.
2022ರ ಆಗಸ್ಟ್‌ನಲ್ಲಿ ಹಾಲಿ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಅವರು ನಿವೃತ್ತರಾಗಲಿದ್ದು, ನ್ಯಾಯಮೂರ್ತಿ ಯು ಯು ಲಲಿತ್ ಹಾಗೂ ಅವರ ಬಳಿಕ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮುಖ್ಯ ನ್ಯಾಯಮೂರ್ತಿ ಹುದ್ದೆಗೇರಲಿದ್ದಾರೆ. ಇದರಿಂದಾಗಿ ಮುಂದಿನ ವರ್ಷದಲ್ಲಿ ಮಾಸ್ಟರ್ ಆಫ್ ರೋಸ್ಟರ್ ಅಧಿಕಾರವು ಮೂರು ಕೈಗಳಿಗೆ ಬದಲಾಗಲಿದೆ.
ನ್ಯಾಯಮೂರ್ತಿ ಆರ್ ಸುಭಾಷ್ ರೆಡ್ಡಿ – ಜನವರಿ 4
ನ್ಯಾಯಮೂರ್ತಿ ವಿನೀತ್ ಶರಣ್ – ಮೇ 10
ನ್ಯಾಯಮೂರ್ತಿ ಎಲ್ ನಾಗೇಶ್ವರ ರಾವ್ – ಜೂನ್ 7
ನ್ಯಾಯಮೂರ್ತಿ ಎ ಎಂ ಖಾನ್ವಿಲ್ಕರ್ – ಜುಲೈ 29
ಸಿಜೆಐ ಎನ್ ವಿ ರಮಣ – ಆಗಸ್ಟ್ 26
ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ – ಸೆಪ್ಟೆಂಬರ್ 23
ನ್ಯಾಯಮೂರ್ತಿ ಹೇಮಂತ್ ಗುಪ್ತಾ – ಅಕ್ಟೋಬರ್ 16
ನ್ಯಾಯಮೂರ್ತಿ ಯು ಯು ಲಲಿತ್ – ನವೆಂಬರ್ 8 (ಸಿಜೆಐ ಆಗಿ ನಿವೃತ್ತಿ)
ಸಿಜೆಐ ರಮಣ ಅವರು ಆಗಸ್ಟ್ 26ರಂದು ನಿವೃತ್ತರಾಗಲಿದ್ದು, ಬಳಿಕ ಯು ಯು ಲಲಿತ್ ಅವರು ಅಲ್ಪಕಾಲದವರೆಗೆ ಮುಖ್ಯ ನ್ಯಾಯಮೂರ್ತಿಯಾಗಿರಲಿದ್ದಾರೆ. ನವೆಂಬರ್ 8ಕ್ಕೆ ನ್ಯಾ. ಲಲಿತ್ ನಿವೃತ್ತಿ ಹೊಂದಲಿದ್ದು, ನ್ಯಾ. ಚಂದ್ರಚೂಡ್ ಸಿಜೆಐ ಆಗಿ ನೇಮಕವಾಗಲಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಸುದೀರ್ಘ ಅವಧಿಗೆ ಮುಖ್ಯ ನ್ಯಾಯಮೂರ್ತಿ ಹುದ್ದೆ ಅಲಂಕರಿಸಲಿರುವ ನ್ಯಾ. ಚಂದ್ರಚೂಡ್ ಅವರು ಎರಡು ವರ್ಷಗಳಿಗೂ ಹೆಚ್ಚು ಕಾಲ ಸಿಜೆಐ ಆಗಿರಲಿದ್ದು, 2024ರ ನವೆಂಬರ್ 10ರವರೆಗೆ ಅಧಿಕಾರದಲ್ಲಿ ಇರಲಿದ್ದಾರೆ.