

ಸುಪ್ರೀಂ ಕೋರ್ಟ್‌ನ 33 ಹಾಲಿ ನ್ಯಾಯಮೂರ್ತಿಗಳಲ್ಲಿ 21 ನ್ಯಾಯಮೂರ್ತಿಗಳು ಸೋಮವಾರ ತಮ್ಮ ಆಸ್ತಿ ವಿವರಗಳನ್ನು ಬಹಿರಂಗಪಡಿಸಿದ್ದಾರೆ. ಅದರ ವಿವರಗಳನ್ನು ಸುಪ್ರೀಂ ಕೋರ್ಟ್ ಜಾಲತಾಣದಲ್ಲಿ ಪ್ರಕಟಿಸಲಾಗಿದೆ.
ನ್ಯಾಯಾಂಗಕ್ಕೆ ಸಂಬಂಧಿಸಿದಂತೆ ಕೇಳಿಬಂದ ಭ್ರಷ್ಟಾಚಾರ ಆರೋಪಗಳು ಅದರಲ್ಲಿಯೂ ನ್ಯಾ. ಯಶವಂತ್ ವರ್ಮಾ ವಿವಾದದ ಬಳಿಕ ಏಪ್ರಿಲ್ 1ರಂದು ಸುಪ್ರೀಂ ಕೋರ್ಟ್ ಪೂರ್ಣ ನ್ಯಾಯಾಲಯವು ನ್ಯಾಯಮೂರ್ತಿಗಳ ಆಸ್ತಿ ವಿವರಗಳನ್ನು ಜಾಲತಾಣದಲ್ಲಿ ಪ್ರಕಟಿಬೇಕೆಂದು ನಿರ್ಧರಿಸಿತ್ತು. ನ್ಯಾಯಮೂರ್ತಿಗಳು ತಮ್ಮ ಆಸ್ತಿಗಳನ್ನು ವಾರ್ಷಿಕವಾಗಿ ಬಹಿರಂಗಪಡಿಸಬೇಕೆ ಎಂಬುದನ್ನು ಸುಪ್ರೀಂ ಕೋರ್ಟ್‌ನ ನಿರ್ಧಾರ ಸ್ಪಷ್ಟಪಡಿಸಿಲ್ಲ.
ಒಟ್ಟು 33 ಹಾಲಿ ನ್ಯಾಯಮೂರ್ತಿಗಳಲ್ಲಿ 12 ನ್ಯಾಯಮೂರ್ತಿಗಳ ಹೇಳಿಕೆ ಇನ್ನಷ್ಟೇ ದೊರೆಯಬೇಕಿದ್ದು ಉಳಿದವರ ವಿವರ ಇಂತಿದೆ. ಈಗಿನ ವಿವರದ ಜೊತೆಗೆ ಉಳಿದ ನ್ಯಾಯಮೂರ್ತಿಗಳು ಸಲ್ಲಿಸುವ ವಿವರಗಳನ್ನು ಭವಿಷ್ಯದಲ್ಲಿ ಪ್ರಕಟಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ನ್ಯಾಯಮೂರ್ತಿಗಳ ಹೆಸರು ಹಾಗೂ ಅವರ ಆಸ್ತಿ ವಿವರ ಈ ಕೆಳಕಂಡಂತಿದೆ:
1. ನ್ಯಾ. ಸಂಜೀವ್ ಖನ್ನಾ, ಭಾರತದ ಮುಖ್ಯ ನ್ಯಾಯಮೂರ್ತಿ (ವಿವರಗಳು)
2. ನ್ಯಾ. ಭೂಷಣ್ ರಾಮಕೃಷ್ಣ ಗವಾಯಿ (ವಿವರಗಳು)
3. ನ್ಯಾ. ಸೂರ್ಯ ಕಾಂತ್ (ವಿವರಗಳು)
4. ನ್ಯಾ. ಅಭಯ್ ಎಸ್. ಓಕಾ (ವಿವರಗಳು)
5. ನ್ಯಾ. ವಿಕ್ರಮ್ ನಾಥ್ (ವಿವರಗಳು)
6. ನ್ಯಾ. ಜೆ.ಕೆ. ಮಹೇಶ್ವರಿ (ಇನ್ನಷ್ಟೇ ದೊರೆಯಬೇಕಿದೆ).
7. ನ್ಯಾ. ಬಿ.ವಿ. ನಾಗರತ್ನ (ಇನ್ನಷ್ಟೇ ದೊರೆಯಬೇಕಿದೆ).
8. ನ್ಯಾ. ಎಂ.ಎಂ. ಸುಂದರೇಶ್ (ವಿವರಗಳು)
9. ನ್ಯಾ. ಬೇಲಾ ಎಂ. ತ್ರಿವೇದಿ (ವಿವರಗಳು)
10. ನ್ಯಾ. ಪಮಿದಿಘಂಟಂ ಶ್ರೀ ನರಸಿಂಹ (ವಿವರಗಳು)
11. ನ್ಯಾ. ಸುಧಾಂಶು ಧುಲಿಯಾ (ವಿವರಗಳು)
12. ನ್ಯಾ. ಜಮ್ಶೆಡ್ ಬುರ್ಜೋರ್ ಪರ್ದಿವಾಲಾ (ವಿವರಗಳು)
13. ನ್ಯಾ. ದೀಪಂಕರ್ ದತ್ತ (ಇನ್ನಷ್ಟೇ ದೊರೆಯಬೇಕಿದೆ)
14. ನ್ಯಾ. ಪಂಕಜ್ ಮಿತ್ತಲ್ (ವಿವರಗಳು)
15. ನ್ಯಾ. ಸಂಜಯ್ ಕರೋಲ್ (ವಿವರಗಳು)
16. ನ್ಯಾ. ಸಂಜಯ್ ಕುಮಾರ್ (ವಿವರಗಳು)
17. ನ್ಯಾ. ಅಹ್ಸಾನುದ್ದೀನ್ ಅಮಾನುಲ್ಲಾ (ಇನ್ನಷ್ಟೇ ದೊರೆಯಬೇಕಿದೆ)
18. ನ್ಯಾ. ಮನೋಜ್ ಮಿಶ್ರಾ (ಇನ್ನಷ್ಟೇ ದೊರೆಯಬೇಕಿದೆ)
19. ನ್ಯಾ. ರಾಜೇಶ್ ಬಿಂದಾಲ್ (ವಿವರಗಳು)
20. ನ್ಯಾ. ಅರವಿಂದ್ ಕುಮಾರ್ (ಇನ್ನಷ್ಟೇ ದೊರೆಯಬೇಕಿದೆ)
21. ನ್ಯಾ. ಪ್ರಶಾಂತ್ ಕುಮಾರ್ ಮಿಶ್ರಾ (ಇನ್ನಷ್ಟೇ ದೊರೆಯಬೇಕಿದೆ)
22. ನ್ಯಾ. ಕೆ.ವಿ. ವಿಶ್ವನಾಥನ್ (ವಿವರಗಳು)
23. ನ್ಯಾ. ಉಜ್ಜಲ್ ಭುಯಾನ್ (ವಿವರಗಳು)
24. ನ್ಯಾ. ಎಸ್. ವೆಂಕಟನಾರಾಯಣ ಭಟ್ಟಿ (ವಿವರಗಳು)
25. ನ್ಯಾ. ಸತೀಶ್ ಚಂದ್ರ ಶರ್ಮಾ (ಇನ್ನಷ್ಟೇ ದೊರೆಯಬೇಕಿದೆ)
26. ನ್ಯಾ. ಆಗಸ್ಟೀನ್ ಜಾರ್ಜ್ ಮಸೀಹ್ (ವಿವರಗಳು)
27. ನ್ಯಾ. ಸಂದೀಪ್ ಮೆಹ್ತಾ (ವಿವರಗಳು)
28. ನ್ಯಾ. ಪ್ರಸನ್ನ ಬಾಲಚಂದ್ರ ವರಾಳೆ (ಇನ್ನಷ್ಟೇ ದೊರೆಯಬೇಕಿದೆ)
29. ನ್ಯಾ. ಎನ್ ಕೋಟೀಶ್ವರ್ ಸಿಂಗ್ (ಇನ್ನಷ್ಟೇ ದೊರೆಯಬೇಕಿದೆ)
30. ನ್ಯಾ. ಆರ್ ಮಹಾದೇವನ್ (ಇನ್ನಷ್ಟೇ ದೊರೆಯಬೇಕಿದೆ)
31. ನ್ಯಾ. ಮನಮೋಹನ್ (ವಿವರಗಳು)
32. ನ್ಯಾ. ಕೆ. ವಿನೋದ್ ಚಂದ್ರನ್ (ವಿವರಗಳು)
33. ನ್ಯಾ. ಜೋಯ್ಮಲ್ಯ ಬಾಗ್ಚಿ (ಇನ್ನಷ್ಟೇ ದೊರೆಯಬೇಕಿದೆ)
ಆಸ್ತಿ ಘೋಷಣೆ ಮಾಡಿದ ನ್ಯಾಯಮೂರ್ತಿಗಳ ಹೆಸರುಗಳನ್ನಷ್ಟೇ ಈ ಹಿಂದೆ ಜಾಲತಾಣದಲ್ಲಿ ಪ್ರಕಟಿಸಲಾಗುತ್ತಿತ್ತೇ ವಿನಾ ಆಸ್ತಿಯ ವಿವರವನ್ನಲ್ಲ.
2009 ರಲ್ಲಿಯೇ, ಸುಪ್ರೀಂ ಕೋರ್ಟ್‌ನ ಪೂರ್ಣ ನ್ಯಾಯಾಲಯ ನ್ಯಾಯಮೂರ್ತಿಗಳ ಆಸ್ತಿ ವಿವರ ಬಹಿರಂಗಪಡಿಸಲು ನಿರ್ಧರಿಸಿತ್ತು. ಆದರೆ, ಆಗ ಸ್ವಯಂಪ್ರೇರಣೆಯಿಂದ ಆಸ್ತಿ ಘೋಷಿಸಿಕೊಳ್ಳಬಹುದಿತ್ತು.