ರಾಜ್ಯದಲ್ಲಿ 215 ಸರ್ಕಾರಿ ವಕೀಲರ ಕಾರ್ಯ ನಿರ್ವಹಣೆ; ಅಗತ್ಯವಿರುವಷ್ಟು ಹುದ್ದೆಗಳ ಭರ್ತಿ, ಯಾವುದೇ ಖಾಲಿ ಹುದ್ದೆ ಇಲ್ಲ

ಅಡ್ವೊಕೇಟ್‌ ಜನರಲ್‌ ಅವರ ಕಚೇರಿಯಲ್ಲಿ 83 ಸರ್ಕಾರಿ ವಕೀಲರು ಮತ್ತು ರಾಜ್ಯದಲ್ಲಿ 132 ಸರ್ಕಾರಿ ವಕೀಲರು ಸೇರಿ ಒಟ್ಟು 215 ಸರ್ಕಾರಿ ವಕೀಲರು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಮಾಹಿತಿ ಒದಗಿಸಿದ್ದಾರೆ.
Lawyers
Lawyers

ರಾಜ್ಯದಲ್ಲಿ ಒಟ್ಟು 215 ಸರ್ಕಾರಿ ವಕೀಲರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧುಸ್ವಾಮಿ ಅವರು ಈಚೆಗೆ ಸದನಕ್ಕೆ ವಿವರಣೆ ನೀಡಿದ್ದಾರೆ.

ಜೆಡಿಎಸ್‌ ಶಾಸಕ ಬಂಡೆಪ್ಪ ಖಾಶೆಂಪುರ್‌ ಅವರು ರಾಜ್ಯದಲ್ಲಿ ಸದ್ಯ ಎಷ್ಟು ಮಂದಿ ಸರ್ಕಾರಿ ವಕೀಲರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಚುಕ್ಕೆ ಗುರುತಿಲ್ಲ ಪ್ರಶ್ನೆ ಕೇಳಿದ್ದರು. ಇದಕ್ಕೆ ಸಚಿವರು ಅಡ್ವೊಕೇಟ್‌ ಜನರಲ್‌ ಅವರ ಕಚೇರಿಯಲ್ಲಿ 83 ಸರ್ಕಾರಿ ವಕೀಲರು ಮತ್ತು ರಾಜ್ಯದಲ್ಲಿ 132 ಸರ್ಕಾರಿ ವಕೀಲರು ಸೇರಿ ಒಟ್ಟು 215 ವಕೀಲರು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಮಾಹಿತಿ ಒದಗಿಸಿದ್ದಾರೆ.

ಖಾಶೆಂಪುರ್‌ ಅವರ ಅಗತ್ಯಕ್ಕೆ ಅನುಗುಣವಾಗಿ ಸರ್ಕಾರ ವಕೀಲರನ್ನು ನೇಮಕ ಮಾಡಿಕೊಳ್ಳಲಾಗಿದೆಯೇ ಎಂಬುದಕ್ಕೆ ಹೌದು ಎಂದು ಉತ್ತರಿಸಲಾಗಿದೆ. ಹಾಗಾಗಿ, ವಕೀಲರ ಖಾಲಿ ಹುದ್ದೆಗಳನ್ನು ಎಷ್ಟು ಕಾಲಮಿತಿಯಲ್ಲಿ ನೇಮಕ ಮಾಡಿಕೊಳ್ಳಲಾಗುತ್ತದೆ ಎಂಬ ಪೂರಕ ಪ್ರಶ್ನೆಗೆ ಉತ್ತರಿಸುವ ಅಗತ್ಯ ಉದ್ಭವಿಸುವುದಿಲ್ಲವಾದ ಕಾರಣ ಅನ್ವಯಿಸುವುದಿಲ್ಲ ಎಂದು ಉತ್ತರಿಸಲಾಗಿದೆ.

Related Stories

No stories found.
Kannada Bar & Bench
kannada.barandbench.com