ವಿಶೇಷ ಸ್ವಚ್ಛತಾ ಅಭಿಯಾನ 2.0: ಸುಪ್ರೀಂ ಕೋರ್ಟ್‌ನಲ್ಲಿ 27,927 ಕಡತ ಪರಿಶೀಲನೆ; 2,500 ಚದರ ಅಡಿ ಜಾಗ ಮುಕ್ತ

ದಕ್ಷ ರೀತಿಯಲ್ಲಿ ಸ್ಥಳಾವಕಾಶ ನಿರ್ವಹಣೆ ಮತ್ತು ಕಚೇರಿಗಳಲ್ಲಿ ಕೆಲಸದ ಅನುಭವ ಹೆಚ್ಚಿಸುವ ಉದ್ದೇಶ ಈ ಅಭಿಯಾನದ್ದಾಗಿದೆ.
ವಿಶೇಷ ಸ್ವಚ್ಛತಾ ಅಭಿಯಾನ 2.0: ಸುಪ್ರೀಂ ಕೋರ್ಟ್‌ನಲ್ಲಿ 27,927 ಕಡತ ಪರಿಶೀಲನೆ; 2,500 ಚದರ ಅಡಿ ಜಾಗ ಮುಕ್ತ

ಸ್ವಚ್ಛತೆಗೆ ಉತ್ತೇಜನ ನೀಡುವ ದೃಷ್ಟಿಯಿಂದ ಕಾನೂನು ವ್ಯವಹಾರಗಳ ಇಲಾಖೆ, ಕಾನೂನು ಮತ್ತು ನ್ಯಾಯ ಸಚಿವಾಲಯ, ಇತ್ತೀಚೆಗೆ ದೆಹಲಿಯ ಸುಪ್ರೀಂ ಕೋರ್ಟ್‌ನ ಸೆಂಟ್ರಲ್‌ ಏಜೆನ್ಸಿ ವಿಭಾಗದಲ್ಲಿ ವಿಶೇಷ ಸ್ವಚ್ಛತಾ ಅಭಿಯಾನ- 2.0ಕ್ಕೆ ಚಾಲನೆ ನೀಡಿತು.

ಕಾನೂನು ಮತ್ತು ನ್ಯಾಯ ಸಚಿವಾಲಯದ ಜಾಲತಾಣದಲ್ಲಿ ಲಭ್ಯವಿರುವ ದಾಖಲೆಗಳ ಪ್ರಕಾರ, ಸುಮಾರು 27,927 ಫೈಲ್‌ಗಳನ್ನು ಸ್ಕ್ಯಾನ್ ಮಾಡಿ, ಸರ್ವೋಚ್ಚ ನ್ಯಾಯಾಲಯದ ಈ ವಿಭಾಗದಲ್ಲಿ ಸುಮಾರು 2,500 ಚದರ ಅಡಿ ಜಾಗವನ್ನು ಮುಕ್ತಗೊಳಿಸಲಾಗಿದೆ.

ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಕುಂದುಕೊರತೆ ಇಲಾಖೆ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ ಸಚಿವಾಲಯವು ಪ್ರಾರಂಭಿಸಿರುವ ಅಭಿಯಾನವು ಸರ್ಕಾರಿ ಅಧಿಕಾರಿಗಳು ಮತ್ತು ನೌಕರರಲ್ಲಿ ಸ್ವಚ್ಛತೆಯ ಆದರ್ಶಗಳನ್ನು ಉತ್ತೇಜಿಸುವ ಗುರಿ ಹೊಂದಿದೆ. ಇದು ಸರ್ಕಾರಿ ಕಛೇರಿಗಳಲ್ಲಿ ದಕ್ಷ ಸ್ಥಳ ನಿರ್ವಹಣೆ ಮತ್ತು ಕೆಲಸದ ಅನುಭವವನ್ನು ವೃದ್ಧಿಸುವ ಉದ್ದೇಶ ಹೊಂದಿದೆ. ಅಕ್ಟೋಬರ್ 2ರಿಂದ 31ರವರೆಗೆ ವಿಶೇಷ ಅಭಿಯಾನ ನಡೆಯಿತು.

Also Read
ಜೈಲುಗಳಲ್ಲಿ ಕೈದಿಗಳ ಸಾಂದ್ರತೆ, ಸ್ವಚ್ಛತೆ, ವೈದ್ಯಕೀಯ ಕೊರತೆಗಳ ಪರಿಹಾರಕ್ಕೆ ಸರ್ಕಾರದ ಪ್ರತಿಕ್ರಿಯೆ ಬಯಸಿದ ಹೈಕೋರ್ಟ್

ಬಾಕಿ ಇರುವ ಪ್ರಕರಣಗಳು, ಸಂಸದೀಯ ಭರವಸೆಗಳು, ಸಾರ್ವಜನಿಕ ಕುಂದುಕೊರತೆಗಳು, ದಾಖಲೆಗಳ ನಿರ್ವಹಣೆ, ರದ್ದಿ ವಿಲೇವಾರಿ ಮತ್ತು ಬಳಕೆಯಲ್ಲಿಲ್ಲದ ಕಡತಗಳನ್ನು ತೆಗೆದುಹಾಕುವ ಗುರಿ ಈ ಅಭಿಯಾನದ್ದಾಗಿದೆ.

ದಾಖಲೆ ನಿರ್ವಹಣೆಯ ಭಾಗವಾಗಿ ಸುಮಾರು 27,927 ಕಡತಗಳನ್ನು ಪರಿಶೀಲಿಸಲಾಗಿದ್ದು ಕಾನೂನು ಸಚಿವಾಲಯದ ಜಾಲತಾಣದಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ ವಿಶೇಷ ಅಭಿಯಾನದ ಅಡಿಯಲ್ಲಿ ಸುಮಾರು 2,719 ಸಾರ್ವಜನಿಕ ಕುಂದುಕೊರತೆ ಮತ್ತು ಮೇಲ್ಮನವಿಗಳನ್ನು ವಿಲೇವಾರಿ ಮಾಡಲಾಗಿದೆ.

Related Stories

No stories found.
Kannada Bar & Bench
kannada.barandbench.com