ಕರ್ನಾಟಕ ಹೈಕೋರ್ಟ್‌ ಹಿಜಾಬ್ ತೀರ್ಪು ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ 66 ವರ್ಷದ ಮುಸ್ಲಿಂ ಮಹಿಳೆ

ಪ್ರಸ್ತುತ ಪ್ರಕರಣದಲ್ಲಿ ಅತ್ಯಗತ್ಯ ಧಾರ್ಮಿಕ ಆಚರಣೆಯ ವಿಚಾರ ಉದ್ಭವಿಸದು ಎಂಬುದನ್ನು ಹೈಕೋರ್ಟ್ ಗಣನೆಗೆ ತೆಗೆದುಕೊಂಡಿಲ್ಲ ಎಂಬುದು ಅರ್ಜಿದಾರರ ವಾದ.
Supreme Court, Hijab Ban case

Supreme Court, Hijab Ban case

A1

ಹಿಜಾಬ್ ಇಸ್ಲಾಂ ಧರ್ಮದ ಅಗತ್ಯ ಧಾರ್ಮಿಕ ಆಚರಣೆ ಅಲ್ಲ ಎನ್ನುವ ಮೂಲಕ ಅದನ್ನು ಕಾಲೇಜು ಅಂಗಳದಲ್ಲಿ ಧರಿಸಲು ನಿಷೇಧಿಸುವ ಅಧಿಕಾರವನ್ನು ಕಾಲೇಜುಗಳಿಗೆ ನೀಡಿರುವ ಕರ್ನಾಟಕ ಹೈಕೋರ್ಟ್‌ನ ತೀರ್ಪನ್ನು ಪ್ರಶ್ನಿಸಿ 66 ವರ್ಷದ ಮುಸ್ಲಿಂ ಮಹಿಳೆಯೊಬ್ಬರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ [ಸಜೀದಾ ಬೇಗಂ ಮತ್ತು ಕರ್ನಾಟಕ ಸರ್ಕಾರ ನಡುವಣ ಪ್ರಕರಣ].

ಸಜೀದಾ ಬೇಗಂ ಎಂಬುವರು ಈ ಮನವಿ ಸಲ್ಲಿಸಿದ್ದು, ಅವರು ಪ್ರಕರಣದಲ್ಲಿ ಪಕ್ಷಕಕಾರರನ್ನಾಗಿ ಸೇರಿಸಿಕೊಳ್ಳುವಂತೆ ಕೋರಿ ಈ ಹಿಂದೆ ಹೈಕೋರ್ಟ್‌ಗೆ ಕೂಡ ಅರ್ಜಿ ಸಲ್ಲಿಸಿದ್ದರು.

ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯ ಪ್ರಮುಖಾಂಶಗಳು

  • ತಮ್ಮ ವಾದ ಆಲಿಸುವಂತೆ ಹೈಕೋರ್ಟ್‌ಗೆ ಮನವಿ ಮಾಡಿದ್ದರೂ ಅದು ಸ್ಪಂದಿಸಲಿಲ್ಲ. ವಾದ ಮಂಡಿಸಲು ಅವಕಾಶ ನೀಡಲಿಲ್ಲ. ಇದರಿಂದಾಗಿ ʼಮೌಖಿಕತೆಯ ತತ್ವʼಕ್ಕೆ ಧಕ್ಕೆ ಒದಗಿದೆ.

  • ಹದಿ ಹರೆಯದ ಹುಡುಗಿಯರು ಶಿಕ್ಷಣ ಪಡೆಯಲು ತೆರಳಿದಾಗ ತಮ್ಮನ್ನು ತಾವು ವಸ್ತ್ರದಿಂದ ಮುಚ್ಚಿಕೊಂಡರೆ ಇದರಿಂದ ಸಾರ್ವಜನಿಕ ಸುವ್ಯವಸ್ಥೆಗೆ ಅಪಾಯ ಉಂಟಾಗದು.

  • ಸಂವಿಧಾನದ 14, 15, 17, 19 ಮತ್ತು 21 ನೇ ವಿಧಿಗಳು ಹಿಜಾಬ್‌ ಧರಿಸುವುದು ಹಕ್ಕು ಎನ್ನುತ್ತವೆಯಾದ್ದರಿಂದ 25ನೇ ವಿಧಿಯಡಿ ಹಿಜಾಬ್‌ ಧರಿಸುವುದು ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ ಎನ್ನುವುದು ಕೊನೆಯ ಆಯ್ಕೆಯಾಗುತ್ತದೆ.

  • ಪ್ರಸ್ತುತ ಪ್ರಕರಣದಲ್ಲಿ ಅತ್ಯಗತ್ಯ ಧಾರ್ಮಿಕ ಆಚರಣೆಯ ಸಮಸ್ಯೆ ಉದ್ಭವಿಸದು ಎಂಬುದನ್ನು ಹೈಕೋರ್ಟ್‌ ನಿರ್ಧರಿಸಿಲ್ಲ.

  • "ಸರ್ಕಾರಿ ಆದೇಶ ಹಿಜಾಬ್ ನಿಷೇಧಿಸುವುದಿಲ್ಲವಾದ್ದರಿಂದ ಹೈಕೋರ್ಟ್ ಆಡಳಿತತಾತ್ಮಕ ಕಾನೂನಿನ ಸರಳ ಅಂಶದ ಮೇಲೆ ಮಾತ್ರ ಸಮಸ್ಯೆಯನ್ನು ನಿರ್ಧರಿಸಬೇಕಿತ್ತು” ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

  • ಶಿರಸ್ತ್ರಾಣ/ಹಿಜಾಬ್ ಅನ್ನು ನಿರಾಕರಿಸುವುದು ಮತ್ತು ಹುಡುಗಿಯರ ಘನತೆ ಮತ್ತು ಧಾರ್ಮಿಕ ಮೌಲ್ಯಗಳಿಗೆ ಸಂಬಂಧಿಸಿರುವ ವಸ್ತ್ರ ತೆಗೆಯುವಂತೆ ಒತ್ತಾಯಿಸುವುದು ಸರ್ಕಾರಿ ಅನುಮೋದಿತ ಅಪಮಾನ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ.

ವಕೀಲರಾದ ತಲ್ಹಾ ಅಬ್ದುಲ್ ರಹಮಾನ್, ಮಹಮ್ಮದ್ ಅಫೀಫ್, ಬಸವ ಪ್ರಸಾದ್ ಕುನಾಳೆ, ಎಂ ಶಾಜ್ ಖಾನ್ ಮತ್ತು ಹರ್ಷವರ್ಧನ್ ಕೇಡಿಯಾ ಅವರ ಮೂಲಕ ಮನವಿ ಸಲ್ಲಿಸಲಾಗಿದೆ.

Related Stories

No stories found.
Kannada Bar & Bench
kannada.barandbench.com