ದೇಶದ ಜೈಲುಗಳಲ್ಲಿರುವ ಶೇ 70ರಷ್ಟು ಮಂದಿ ಈಗಲೂ ತಪ್ಪಿತಸ್ಥರೆಂಬುದು ಸಾಬೀತಾಗಿಲ್ಲ: ನ್ಯಾಯಮೂರ್ತಿ ವಿಕ್ರಮ್ ನಾಥ್

ನ್ಯಾಯ ವ್ಯವಸ್ಥೆಯ ನೈಜತೆ ಎಂಬುದು ಅದು ದುರ್ಬಲರನ್ನು ಹೇಗೆ ನಡೆಸಿಕೊಳ್ಳುತ್ತದೆ ಎಂಬುದರಲ್ಲಿದೆ, ಬದಲಿಗೆ ಪ್ರಬಲರಿಗೆ ಹೇಗೆ ಸೇವೆ ಸಲ್ಲಿಸುತ್ತದೆ ಎಂಬುದರಲ್ಲಿ ಅಲ್ಲ ಎಂದು ಅವರು ಹೇಳಿದರು.
Justice Vikram Nath
Justice Vikram Nath
Published on

ದೇಶದ ಜೈಲುಗಳಲ್ಲಿರುವ ಶೇ 70ರಷ್ಟು ಮಂದಿ ಈಗಲೂ ತಪ್ಪಿತಸ್ಥರೆಂಬುದು ಸಾಬೀತಾಗಿಲ್ಲ ಎಂದು ತಿಳಿಸಿರುವ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ವಿಕ್ರಮ್ ನಾಥ್ ಕಾನೂನು ನೆರವು ಮತ್ತು ವಿಚಾರಣಾಧೀನ ಬಂಧನ ನಿರ್ವಹಿಸುವ ರೀತಿಯಲ್ಲಿ ಸುಧಾರಣೆಯಾಗಬೇಕಿದೆ ಎಂದರು.

ಹೈದರಾಬಾದ್‌ ನಲ್ಸಾರ್ ಕಾನೂನು ವಿಶ್ವವಿದ್ಯಾಲಯದಲ್ಲಿ ಸ್ಕ್ವೇರ್ ಸರ್ಕಲ್ ಕೇಂದ್ರ ಶುಕ್ರವಾರ ಆಯೋಜಿಸಿದ್ದ ʼಪುಣೆ ಮತ್ತು ನಾಗಪುರದಲ್ಲಿ ನಡೆದ ನ್ಯಾಯಯುತ ವಿಚಾರಣೆ ಕಾರ್ಯಕ್ರಮದ ವರದಿʼ ಬಿಡುಗಡೆ ಸಮಾರಂಭದಲ್ಲಿ  ಅವರು ಮಾತನಾಡಿದರು.

Also Read
ಕಾಶ್ಮೀರದಾಚೆಯ ಜೈಲುಗಳಲ್ಲಿರುವ ವಿಚಾರಣಾಧೀನ ಕೈದಿಗಳ ವಾಪಸಾತಿಗೆ ಮನವಿ: ಮುಫ್ತಿ ಅರ್ಜಿ ಕುರಿತು ಹೈಕೋರ್ಟ್ ಪ್ರಶ್ನೆ

ಬಹುತೇಕ ವಿಚಾರಣಾಧೀನ ಕೈದಿಗಳು ಜೈಲಿನಲ್ಲುಳಿಯಲು ಕಾನೂನಿನ ಅಗತ್ಯತತೆಗಾಗಿ ಅಲ್ಲ ಬದಲಿಗೆ ಅವರನ್ನು ವ್ಯವಸ್ಥೆ ವಿಫಲಗೊಳಿಸಿರುವುದರಿಂದ ಎಂದು ಅವರು ಬೇಸರ ವ್ಯಕ್ತಪಡಿಸಿದರು. 

ಅನೇಕರು ಗರಿಷ್ಠ ಶಿಕ್ಷೆಯ ಅವಧಿ ಮೀರಿದ್ದರೂ ಜೈಲಿನಲ್ಲಿಯೇ ಉಳಿದಿದ್ದಾರೆ. ಜಾಮೀನು ಸಿಗಬಹುದಾದಂತಹ ಪ್ರಕರಣಗಳಲ್ಲಿಯೂ ಜಾಮೀನಿಗೆ ಅಗತ್ಯವಾದ ಮೊತ್ತ ಹೊಂದಿಸಲಾಗದೆ ಜೈಲಿನಲ್ಲಿಯೇ ಇರುವವರೂ ಇದ್ದಾರೆ. ವಿಚಾರಣೆ ಸೂಕ್ತ ಸಮಯಕ್ಕೆ ಮುಕ್ತಾಯವಾಗಿದ್ದರೆ ಕೆಲವು ವಿಚಾರಣಾಧೀನ ಕೈದಿಗಳು ಖಚಿತವಾಗಿ ಬಿಡುಗಡೆಯಾಗುತ್ತಿದ್ದರು ಇಲ್ಲವೇ ಅವರ ಶಿಕ್ಷೆಗೆ ತಡೆ ದೊರೆಯುತ್ತಿತ್ತು. ಆದರೆ ವಿಚಾರಣೆ ವಿಳಂಬದ ಕಾರಣಕ್ಕೆ ಅವರಿನ್ನೂ ಜೈಲಿನಲ್ಲಿ ಕೊಳೆಯುತ್ತಿದ್ದಾರೆ ಎಂದು ನ್ಯಾಯಾಲಯ ವಿವರಿಸಿತು.

 ಅನೇಕ ಕೈದಿಗಳಿಗೆ ಕಾನೂನು ನೆರವು ಪಡೆಯುವ ಹಕ್ಕಿನ ಬಗ್ಗೆ ತಿಳಿದಿಲ್ಲ. ಅದರ ಬಗ್ಗೆ ಅರಿತಿದ್ದವರು ಕೂಡ ಹಿಂದಿನ ಅನುಭವಗಳಿಂದಾಗಿ ವ್ಯವಸ್ಥೆ ಬಗ್ಗೆ ನಂಬಿಕೆ ಕಳೆದುಕೊಂಡಿದ್ದಾರೆ.

ಉಚಿತ ವಕೀಲಿಕೆಗೆ ಪ್ರಯೋಜನಕರವಲ್ಲ ಎಂದು ಭಾವಿಸುವ ಕೆಲವರು ಹಣ ಕೊಡಲು ಸಾಧ್ಯವಿದ್ದರೆ ಖಾಸಗಿ ವಕೀಲರನ್ನು ಕೊಂಡರೆ ಉಯತ್ತಮವಾಗಿ ಕೆಲಸ ಮಾಡುತ್ತಾರೆ ಎಂದು ಅವರನ್ನು ನೇಮಿಸಿಕೊಳ್ಳಲು ಮುಂದಾಗುತ್ತಾರೆ. ನಂ ಕೊರತೆಯು ಸ್ವಾತಂತ್ರ್ಯ ಮತ್ತು ಘನತೆಯ ಸಾಂವಿಧಾನಿಕ ಆಶ್ವಾಸನೆಯನ್ನು ನಂಬಿಕೆ ಮತ್ತು ನ್ಯಾಯ ಲಭ್ಯತೆಯ ಕೊರತೆ ಮಣಿಸುತ್ತದೆ ಎಂದು ಅವರು ಹೇಳಿದರು.

ಕಾನೂನು ಪ್ರಾತಿನಿಧ್ಯ ಎಂಬುದು ಲಭ್ಯವಾಗುವಂತೆಯೂ ಇರಬೇಕು ಅದೇ ವೇಳೆ ಪರಿಣಾಮಕಾರಿಯಾಗಿಯೂ ಇರಬೇಕು. ಗುಣಮಟ್ಟದ ಕಾನೂನು ಪ್ರಾತನಿಧ್ಯಕ್ಕಾಗಿ ಕಾನೂನು ಸೇವಾ ಪ್ರಾಧಿಕಾರಗಳಲ್ಲಿ ತರಬೇತಿ, ಮೇಲ್ವಿಚಾರಣೆ ಹಾಗೂ ಮಾರ್ಗದರ್ಶನದ ಅಗತ್ಯವಿದೆ ಎಂದ ಅವರು ಕಾನೂನು ಶಾಲೆಗಳು ಕಾನೂನು ನೆರವು ಕಾರ್ಯವನ್ನು ಗಂಭೀರವಾಗಿ ಪರಿಗಣಿಸಬೇಕು. ವಿದ್ಯಾರ್ಥಿಗಳು ಸೇವೆಯ ಮೂಲಕ ಕಾನೂನು ದೊರೆಯುವಂತೆ ಮಾಡಬೇಕು ಎಂದರು. 

Also Read
ವಿಚಾರಣಾಧೀನ ಕೈದಿಗಳಿಗೆ ಮತದಾನದ ಹಕ್ಕು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ

ಮಹಿಳೆಯರು, ಮಾನಸಿಕ ಆರೋಗ್ಯ ಸಮಸ್ಯೆಗಳಿರುವ ಕೈದಿಗಳು, ಸಮಾಜದಂಚಿನಲ್ಲಿರುವ ಸಮುದಾಯಗಳು ಅಪರಾಧ ನ್ಯಾಯ ವ್ಯವಸ್ಥೆಯಲ್ಲಿ ಹೆಚ್ಚಿನ ಕಷ್ಟ ಅನುಭವಿಸಲಿದ್ದು ಅವರೊಂದಿಗೆ ಸಹಾನುಭೂತಿಯಿಂದ ವರ್ತಿಸುವ ಅಗತ್ಯವಿದೆ. ಕಾನೂನು ನೆರವನ್ನು ಸುಧಾರಿಸುವುದು ದಾನವಲ್ಲ, ಬದಲಾಗಿ ಸಂವಿಧಾನದ ಮೇಲಿನ ನಂಬಿಕೆಯ ಕ್ರಿಯೆ ಎಂದು ನ್ಯಾಯಮೂರ್ತಿ ನಾಥ್ ಒತ್ತಿ ಹೇಳಿದರು.

ನ್ಯಾಯ ವ್ಯವಸ್ಥೆಯ ನೈಜತೆ ಎಂಬುದು ಅದು ದುರ್ಬಲರನ್ನು ಹೇಗೆ ನಡೆಸಿಕೊಳ್ಳುತ್ತದೆ ಎಂಬುದರಲ್ಲಿದೆ, ಅದು ಪ್ರಬಲರಿಗೆ ಹೇಗೆ ಸೇವೆ ಸಲ್ಲಿಸುತ್ತದೆ ಎಂಬುದರಲ್ಲಿ ಅಲ್ಲ ಎಂದು ಅವರು ಹೇಳಿದರು.

Kannada Bar & Bench
kannada.barandbench.com