ಲೋಕಪಾಲ್‌ಗಾಗಿ ಧ್ವನಿ ಎತ್ತಿದ್ದ ಎಎಪಿ ಆಡಳಿತ ಇರುವ ದೆಹಲಿಯಲ್ಲೇ ಲೋಕಾಯುಕ್ತ ಇಲ್ಲ: ಹೈಕೋರ್ಟ್‌ಗೆ ಅರ್ಜಿ [ಚುಟುಕು]

Advocate Ashwini Kumar Upadhyay

Advocate Ashwini Kumar Upadhyay

Published on

ಡಿಸೆಂಬರ್ 2020ರಿಂದ ಖಾಲಿ ಉಳಿದಿರುವ ದೆಹಲಿ ಲೋಕಾಯುಕ್ತ ಹುದ್ದೆಯನ್ನು ಭರ್ತಿ ಮಾಡುವಂತೆ ಎಎಪಿ ಸರ್ಕಾರಕ್ಕೆ ನಿರ್ದೇಶಿಸಬೇಕೆಂದು ಕೋರಿ ದೆಹಲಿ ಹೈಕೋರ್ಟ್‌ಗೆ ಪಿಐಎಲ್‌ ಸಲ್ಲಿಸಲಾಗಿದೆ. ಒಂದು ತಿಂಗಳೊಳಗೆ ಹುದ್ದೆ ಭರ್ತಿ ಮಾಡುವಂತೆ ಸೂಚಿಸಬೇಕು ಎಂದು ಅರ್ಜಿದಾರರಾದ ವಕೀಲ ಮತ್ತು ಬಿಜೆಪಿ ನಾಯಕ ಅಶ್ವಿನಿ ಕುಮಾರ್‌ ಉಪಾಧ್ಯಾಯ ಅವರು ಮನವಿ ಮಾಡಿದ್ದಾರೆ. "ಲೋಕಪಾಲ್‌ಗಾಗಿ ಧ್ವನಿ ಎತ್ತಿ ಅಧಿಕಾರಕ್ಕೆ ಬಂದ ಎಎಪಿ ಆಡಳಿತಾರೂಢ ದೆಹಲಿಯಲ್ಲೇ ಲೋಕಾಯುಕ್ತ ಇಲ್ಲ. ನ್ಯಾ. ರೇವಾ ಖೇತ್ರಪಾಲ್‌ ಅವರ ನಿವೃತ್ತಿಯಿಂದ ತೆರವಾದ ಸ್ಥಾನವನ್ನು ಇದುವರೆಗೆ ಭರ್ತಿ ಮಾಡಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಹೆಚ್ಚಿನ ಮಾಹಿತಿಗೆ ʼಬಾರ್‌ ಅಂಡ್‌ ಬೆಂಚ್‌ʼ ಇಂಗ್ಲಿಷ್‌ ತಾಣದ ಲಿಂಕ್‌ ಗಮನಿಸಿ.

Kannada Bar & Bench
kannada.barandbench.com