ಹಳೆಯ, ಅಪ್ರಸ್ತುತ ಕಾಯಿದೆ ರದ್ದುಪಡಿಸಿ; ಪ್ರಾದೇಶಿಕ ಭಾಷೆಗಳಲ್ಲಿ ಸರಳ ಕಾನೂನು ರೂಪಿಸಿ: ಪ್ರಧಾನಿ ಮೋದಿ

ಅಖಿಲ ಭಾರತ ಕಾನೂನು ಸಚಿವರು ಮತ್ತು ಕಾರ್ಯದರ್ಶಿಗಳ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ, ಬಲಿಷ್ಠ ಕಾನೂನು ವ್ಯವಸ್ಥೆಗಾಗಿ ಕೈಗೊಳ್ಳಬೇಕಾದ ಸುಧಾರಣೆಗಳ ಬಗ್ಗೆ ಸಲಹೆ ನೀಡಿದರು.
Prime Minister Narendra Modi
Prime Minister Narendra Modi

ನಾಗರಿಕರ ಅನುಕೂಲಕ್ಕಾಗಿ ಅಪ್ರಸ್ತುತ ಕಾನೂನುಗಳನ್ನು ರದ್ದುಪಡಿಸುವಂತೆ, ಹಾಗೆಯೇ ಪ್ರಾದೇಶಿಕ ಭಾಷೆಗಳಲ್ಲಿ ಕಾನೂನು ರೂಪಿಸುವಂತೆ ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಸಲಹೆ ನೀಡಿದ್ದಾರೆ.

ಅಖಿಲ ಭಾರತ ಕಾನೂನು ಸಚಿವರು ಮತ್ತು ಕಾರ್ಯದರ್ಶಿಗಳ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮಾತನಾಡಿದರು.

ವರ್ಚುವಲ್‌ ವಿಧಾನದಲ್ಲಿ ಸಭೆ ಉದ್ದೇಶಿಸಿ ಮಾತನಾಡಿದ ಪ್ರಧಾನಿಯವರು, ನ್ಯಾಯಾಂಗ ವ್ಯವಸ್ಥೆ ಮತ್ತು ಕಾನೂನನ್ನು ಉನ್ನತೀಕರಿಸುವ ಹಾದಿಯತ್ತ ಮತ್ತು "ಸುಗಮ ನ್ಯಾಯವ್ಯವಸ್ಥೆ" ರೂಪಿಸುವತ್ತ ಗಮನಹರಿಸುವಂತೆ ಸೂಚಿಸಿದರು.

Also Read
ಸುಪ್ರೀಂ ಕೋರ್ಟ್‌ ಆದೇಶದ ಎರಡು ವರ್ಷಗಳ ನಂತರ ಪ್ರಧಾನಿ ಮೋದಿ ಜನ್ಮದಿನದಂದು ಗ್ವಾಲಿಯರ್‌ಗೆ ಬಂದ 8 ಚೀತಾಗಳು

ಭಾಷಣದ ಪ್ರಮುಖಾಂಶಗಳು

  • ಹಳೆಯ ಕಾನೂನುಗಳನ್ನು ರದ್ದುಗೊಳಿಸಿ ಹೊಸ ಕಾನೂನುಗಳನ್ನು ಜಾರಿಗೆ ತರಬೇಕು.

  • ಶಾಸಕಾಂಗ ಕಾನೂನು ತೊಡಕು ನಿವಾರಿಸಿ ಸುಲಭವಾಗಿ ನ್ಯಾಯ ಒದಗಿಸಲು ಅಪ್ರಸ್ತುತ ಮತ್ತು ಹಳೆಯದಾದ 1,500 ಕ್ಕೂ ಹೆಚ್ಚು ಕಾನೂನುಗಳನ್ನು ಮತ್ತು 35,000 ಕ್ಕೂ ಹೆಚ್ಚು ಅನುಪಾಲನಾ ಕಾರ್ಯವಿಧಾನಗಳನ್ನು ರದ್ದುಗೊಳಿಸಿದೆ.

  • ಕೆಲವು ದೇಶಗಳು ಕಾಯಿದೆ ರೂಪಿಸುವಾಗ ಅದು ಅಂತ್ಯವಾಗಬೇಕಾದ ದಿನವನ್ನೂ ನಮೂದಿಸಿರುತ್ತವೆ. ಅಂದರೆ ಆ ನಿರ್ದಿಷ್ಟ ದಿನದ ನಂತರ, ಕಾನೂನು ಜಾರಿಯಲ್ಲಿರುವುದಿಲ್ಲ. ಮುಕ್ತಾಯ ದಿನಾಂಕ ಬಂದಾಗ, ಕಾನೂನು ರಚನಾಕಾರರು ಆಗಿನ ಸಂದರ್ಭಕ್ಕೆ ತಕ್ಕಂತೆ ಕಾನೂನನ್ನು ಪರಿಶೀಲಿಸುತ್ತಾರೆ. ಭಾರತದಲ್ಲಿಯೂ ನಾವಿದನ್ನು ಜಾರಿಗೆ ತರಬೇಕು.   

  • ಕಾನೂನನ್ನು ಸರಳ ಭಾಷೆಯಲ್ಲಿ ರಚಿಸಿ ಮತ್ತು ಪ್ರಾದೇಶಿಕ ಭಾಷೆಗಳಲ್ಲಿಯೂ ಲಭ್ಯವಾಗುವಂತೆ ನೋಡಿಕೊಳ್ಳಲು ನ್ಯಾಯಾಂಗದ ಜೊತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯತ್ನಿಸಬೇಕು.

  • ಕೆಲ ದೇಶಗಳು ಈ ಸಮಸ್ಯೆಯನ್ನು ಎರಡು ರೀತಿಯಲ್ಲಿ ನಿಭಾಯಿಸುತ್ತವೆ. ತಾಂತ್ರಿಕ ಪದಗಳನ್ನು ಬಳಸಬೇಕಾದ ಸಂದರ್ಭದಲ್ಲಿ ಅವುಗಳನ್ನು ವ್ಯಾಖ್ಯಾನಿಸುತ್ತವೆ. ಮತ್ತೊಂದು ವಿಧಾನವೆಂದರೆ ಜನ ಅರ್ಥ ಮಾಡಿಕೊಳ್ಳುವ ವಿಧಾನದಲ್ಲಿ ಆ ದೇಶಗಳಲ್ಲಿ ಕಾಯಿದೆ ರೂಪಿಸುತ್ತಾರೆ.

  • ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳ ಡಿಜಿಟಲ್ ಲೈಬ್ರರಿಗಳು ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಿರಬೇಕು, ನಾವು ಈ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗುತ್ತದೆ.

  • ಪರ್ಯಾಯ ವಿಧಾನಗಳೊಂದಿಗೆ ನ್ಯಾಯ ವಿತರಣಾ ವ್ಯವಸ್ಥೆ ತ್ವರಿತಗೊಳಿಸಲು ನ್ಯಾಯಾಂಗಕ್ಕೆ ಸಾಮೂಹಿಕವಾಗಿ ಸಹಾಯ ಮಾಡಲಾಗುವುದು. ಪರ್ಯಾಯ ವ್ಯಾಜ್ಯ ಪರಿಹಾರ ವ್ಯವಸ್ಥೆಯನ್ನು (ಎಡಿಆರ್‌ಎಸ್‌) ರಾಜ್ಯಮಟ್ಟದಲ್ಲಿ ಪ್ರೋತ್ಸಾಹಿಸಬೇಕು.

  • ತ್ವರಿತ ನ್ಯಾಯದಾನಕ್ಕಾಗಿ ದೊಡ್ಡಮಟ್ಟದಲ್ಲಿ ತಂತ್ರಜ್ಞಾನ ಬಳಕೆ ಮಾಡಲು ಸಚಿವರು ಮತ್ತು ಕಾಯದರ್ಶಿಗಳಿಗೆ ಈ ಮೂಲಕ ತಿಳಿಸಲಾಗುತ್ತಿದೆ.

  • ವಿಚಾರಣಾಧೀನ ಕೈದಿಗಳ ಸಮಸ್ಯೆ ಕುರಿತು ವ್ಯವಹರಿಸುವಾಗ ರಾಜ್ಯ ಸರ್ಕಾರಗಳು ಮತ್ತು ನ್ಯಾಯಾಂಗ ಮಾನವೀಯ ಧೋರಣೆ ತಳೆಯಬೇಕು.

Related Stories

No stories found.
Kannada Bar & Bench
kannada.barandbench.com