ವಾಹನದಲ್ಲಿ ಒಬ್ಬರೇ ಪ್ರಯಾಣಿಸುತ್ತಿರುವವರು ಸಹ ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕಾದ್ದು ಅಸಂಬದ್ಧ: ದೆಹಲಿ ಹೈಕೋರ್ಟ್‌

ಕೋವಿಡ್‌ ಸಾಂಕ್ರಾಮಿಕದ ವೇಳೆ ಒಬ್ಬರೇ ವಾಹನದಲ್ಲಿ ಪ್ರಯಾಣಿಸುತ್ತಿದ್ದು, ಮತ್ತಾರೂ ಜೊತೆಯಲ್ಲಿ ಇಲ್ಲದೆ ಹೋದರೂ ಸಹ ಮಾಸ್ಕ್‌ ಧರಿಸುವುದು ಕಡ್ಡಾಯ ಎಂದು ಇದೇ ನ್ಯಾಯಾಲಯ ಏಪ್ರಿಲ್‌ 2021ರಂದು ಆದೇಶ ನೀಡಿತ್ತು.
ವಾಹನದಲ್ಲಿ ಒಬ್ಬರೇ ಪ್ರಯಾಣಿಸುತ್ತಿರುವವರು ಸಹ ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕಾದ್ದು ಅಸಂಬದ್ಧ: ದೆಹಲಿ ಹೈಕೋರ್ಟ್‌

facemask, car

ಕಾರುಗಳಲ್ಲಿ ಒಬ್ಬರೇ ಪ್ರಯಾಣಿಸುವವರೂ ಸಹ ಕಡ್ಡಾಯವಾಗಿ ಮಾಸ್ಕ್‌ಗಳನ್ನು ಧರಿಸಬೇಕು ಎನ್ನುವ ದೆಹಲಿ ಸರ್ಕಾರದ ಆದೇಶವನ್ನು 'ಅಸಂಬದ್ಧ' ಎಂದು ದೆಹಲಿ ಹೈಕೋರ್ಟ್ ಮಂಗಳವಾರ ಹೇಳಿದೆ. ಈ ನಿಯಮವನ್ನು ಈಗಲೂ ಏಕೆ ಮುಂದುವರಿಸಲಾಗುತ್ತಿದೆ ಎಂದು ಇದೇ ವೇಳೆ ಅದು ದೆಹಲಿ ಸರ್ಕಾರವನ್ನು ಪ್ರಶ್ನಿಸಿತು [ರಾಕೇಶ್‌ ಮಲ್ಹೋತ್ರಾ ಮತ್ತು ಇತರರು ವರ್ಸಸ್‌ ಜಿಎನ್‌ಸಿಟಿಡಿ].

ನ್ಯಾಯಮೂರ್ತಿಗಳಾದ ವಿಪಿನ್‌ ಸಾಂಘಿ ಮತ್ತು ಜಸ್ಮೀತ್‌ ಸಿಂಗ್‌ ಅವರಿದ್ದ ವಿಭಾಗೀಯ ಪೀಠವು ಕೋವಿಡ್‌ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಹಲವು ವಿಷಯಗಳನ್ನು ಪ್ರಸ್ತಾಪ ಮಾಡಿದ್ದ ಪ್ರಕರಣದ ವಿಚಾರಣೆಯನ್ನು ನಡೆಸಿತ್ತು.

ವಿಚಾರಣೆಯ ಒಂದು ಹಂತದಲ್ಲಿ, ದೆಹಲಿ ಸರ್ಕಾರವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ರಾಹುಲ್‌ ಮೆಹ್ರಾ ಅವರು "ಕಾರುಗಳಲ್ಲಿ ಮಾಸ್ಕ್‌ಗಳನ್ನು ಧರಿಸುವುದರ ವಿರುದ್ಧ ನಾವು ನ್ಯಾಯಾಲಯದಿಂದ ಆದೇಶವನ್ನು ಪಡೆಯಬಹುದೇ?" ಎಂದು ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯವು, ಕಾರುಗಳಲ್ಲಿ ಮಾಸ್ಕ್‌ ಧರಿಸುವ ಆದೇಶವನ್ನು ಹೊರಡಿಸಿರುವುದು ದೆಹಲಿ ಸರ್ಕಾರ. ಹಾಗಾಗಿ, ತಾನು ಅದನ್ನು ಹಿಂಪಡೆಯಲು ಅಗದು ಎಂದು ನೆನಪಿಸಿತು. ಇದೇ ವೇಳೆ, ಈ ಬಗ್ಗೆ ಸೂಕ್ತ ನಿರ್ದೇಶನವನ್ನು ದೆಹಲಿ ಸರ್ಕಾರದಿಂದ ಪಡೆಯುವಂತೆ ಅದು ಸೂಚಿಸಿತು.

ಕಳೆದ ವರ್ಷ ಏಪ್ರಿಲ್‌ 2021ರಂದು ಕೋವಿಡ್‌ ಸಾಂಕ್ರಾಮಿಕದ ಸಂದರ್ಭದಲ್ಲಿ ಒಬ್ಬರೇ ವಾಹನದಲ್ಲಿ ಪ್ರಯಾಣಿಸುತ್ತಿದ್ದು, ಮತ್ತಾರೂ ಜೊತೆಯಲ್ಲಿ ಇಲ್ಲದೆ ಹೋದರೂ ಸಹ ಮಾಸ್ಕ್‌ ಧರಿಸುವುದು ಕಡ್ಡಾಯ ಎಂದು ಇದೇ ನ್ಯಾಯಾಲಯ ಆದೇಶ ನೀಡಿದ್ದನ್ನು ಇಲ್ಲಿ ನೆನೆಯಬಹುದು.

Related Stories

No stories found.