Stray dog
Stray dog

ನಾಗಾಗಳಲ್ಲಿ ನಾಯಿ ಮಾಂಸ ತಿನ್ನುವುದು ಒಪ್ಪಿತ ಆಹಾರ ಸಂಪ್ರದಾಯ: ಸರ್ಕಾರದ ನಿಷೇಧ ರದ್ದುಗೊಳಿಸಿದ ಗುವಾಹಟಿ ಹೈಕೋರ್ಟ್

ಎಫ್ಎಸ್ಎಸ್ ಕಾಯಿದೆಯಡಿ ರಾಜ್ಯದಲ್ಲಿ ಯಾವ ಮಾಂಸ ನಿಷೇಧಿಸಬೇಕು ಎಂಬ ಆದೇಶವನ್ನು ಆಹಾರ ಸುರಕ್ಷತಾ ಆಯುಕ್ತರು ತೀರ್ಮಾನಿಸಬೇಕೆ ವಿನಾ ರಾಜ್ಯದ ಮುಖ್ಯ ಕಾರ್ಯದರ್ಶಿಯಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ನಾಗಾಲ್ಯಾಂಡ್‌ನಲ್ಲಿ ನಾಯಿ ಮಾಂಸ ಮಾರಾಟ ಮತ್ತು ಸೇವನೆ ನಿಷೇಧಿಸಿ ರಾಜ್ಯ ಸರ್ಕಾರ 2020ರಲ್ಲಿ ಹೊರಡಿಸಿದ್ದ ಆದೇಶವನ್ನು ಗುವಾಹಟಿ ಹೈಕೋರ್ಟ್‌ನ ಕೊಹಿಮಾ ಪೀಠ ಇತ್ತೀಚೆಗೆ ನಿಷೇಧಿಸಿದೆ [ನೈಜೆವೋಲಿ ಕೌತ್ಸು ಅಲಿಯಾಸ್‌ ಟೋನಿ ಕೌತ್ಸು ಮತ್ತಿತರರು ಹಾಗೂ ನಾಗಾಲ್ಯಾಂಡ್‌ ಸರ್ಕಾರ ನಡುವಣ ಪ್ರಕರಣ].

ಶಾಸನಾತ್ಮಕವಾಗಿ ಯಾವುದೇ ಕಾನೂನು ಜಾರಿಗೆ ತರದೆ ನಾಯಿ ಮಾಂಸ ನಿಷೇಧಿಸುವಂತಿಲ್ಲ ಎಂದು ನ್ಯಾಯಮೂರ್ತಿ ಮಾರ್ಲಿ ವ್ಯಾನ್ಕುಂಗ್ ಅವರು ಜೂನ್‌ 2ರಂದು ನೀಡಿದ ತೀರ್ಪಿನಲ್ಲಿ ತಿಳಿಸಲಾಗಿದೆ.  

ಆಹಾರ ಸುರಕ್ಷತೆ ಮತ್ತು ಗುಣಮಟ್ಟ (ಎಫ್‌ಎಸ್‌ಎಸ್) ಕಾಯಿದೆಯ ಆಧಾರದ ಮೇಲೆ ಸರ್ಕಾರ ಆದೇಶ ಹೊರಡಿಸಿದ್ದು, ನಿಷೇಧಕ್ಕೆ ಆದೇಶ ನೀಡುವ ಸಂಬಂಧ ಸರ್ಕಾರಕ್ಕೆ ಇರುವ ಅಧಿಕಾರವನ್ನು ಎಲ್ಲಿಯೂ ಅದು ಪ್ರಸ್ತಾಪಿಸಿಲ್ಲ ಎಂದು ನ್ಯಾಯಾಲಯ ಅವಲೋಕಿಸಿತು.

ಆಹಾರ ಸುರಕ್ಷತೆ ಮತ್ತು ಮಾನದಂಡಗಳು (ಆಹಾರ ಉತ್ಪನ್ನಗಳ ಗುಣಮಟ್ಟ ಮತ್ತು ಆಹಾರ ಸೇರ್ಪಡೆಗಳು) ನಿಯಮಗಳು ನಾಯಿ ಮಾಂಸಕ್ಕೆ ಸಂಬಂಧಿಸಿಲ್ಲ. ಇದು 'ಆಶ್ಚರ್ಯಕರವಲ್ಲ' ಎಂದು ಪೀಠ ಹೇಳಿತು.

“ಈಶಾನ್ಯ ರಾಜ್ಯಗಳ ಕೆಲ ಭಾಗಗಳಲ್ಲಿ ಮಾತ್ರ ನಾಯಿ ಮಾಂಸವನ್ನು ಸೇವಿಸಲಾಗುತ್ತದೆ. ದೇಶದ ಉಳಿದ ಭಾಗದಲ್ಲಿ ಇಂತಹ ಸೇವನೆ ಅನ್ಯವಾದುದಾಗಿದೆ ಮಾನವನ ಆಹಾರದ ಬಳಕೆಯ ಪ್ರಾಣಿಗಳ ಪಟ್ಟಿಯಲ್ಲಿ ಶ್ವಾನ/ ನಾಯಿಗಳನ್ನು ಪ್ರಾಣಿಯಾಗಿ ಸೇರಿಸುವ ಚಿಂತನೆ ಅನೂಹ್ಯವಾದುದಾಗಿರುವುದರಿಂದ ನಿಯಮಾವಳಿ 2.5 ರ1(ಎ)  ಅಡಿಯಲ್ಲಿ ನಾಯಿ ಮಾಂಸದ ಸೇವನೆಯನ್ನು ಊಹಿಸಲೂ ಆಗದು ಎಂದು ಪರಿಗಣಿಸಲಾಗಿದೆ…ನಾಯಿ ಮಾಂಸದ ಸೇವನೆಯು ಆಧುನಿಕ ಕಾಲದಲ್ಲೂ ನಾಗಾಗಳಲ್ಲಿ ಅಂಗೀಕೃತ ಸಂಪ್ರದಾಯ ಮತ್ತು ಆಹಾರವಾಗಿರುವಂತೆ ತೋರುತ್ತಿದೆ. ನಾಯಿ ಮಾಂಸ ಮಾರಾಟದಿಂದ ಅರ್ಜಿದಾರರು ಜೀವನೋಪಾಯ ನಡೆಯತ್ತಿದೆ” ಎಂದು ಅದು ತಿಳಿಸಿತು.

he consumption of dog meat appears to be an accepted norm and food amongst the Nagas

 ಇತ್ಯರ್ಥಗೊಂಡಿರುವ ಕಾನೂನಿನಂತೆ ಎಫ್‌ಎಸ್‌ಎಸ್‌ ಕಾಯಿದೆಯಡಿ ರಾಜ್ಯದಲ್ಲಿ ಯಾವ ಮಾಂಸ ನಿಷೇಧಿಸಬೇಕು ಎಂಬ ಆದೇಶವನ್ನು ಆಹಾರ ಸುರಕ್ಷತಾ ಆಯುಕ್ತರು ತೀರ್ಮಾನಿಸಬೇಕೇ ವಿನಾ ರಾಜ್ಯದ ಮುಖ್ಯ ಕಾರ್ಯದರ್ಶಿಯಲ್ಲ ಎಂದು ಸ್ಪಷ್ಟಪಡಿಸಿದ ನ್ಯಾಯಾಲಯ ಅರ್ಜಿದಾರರ ಮನವಿಯನ್ನು ಪುರಸ್ಕರಿಸಿತು.  

Related Stories

No stories found.
Kannada Bar & Bench
kannada.barandbench.com