ವಿದ್ಯುತ್ ಖರೀದಿ ಒಪ್ಪಂದ ರದ್ದುಗೊಳಿಸಿದ್ದರಿಂದ ಉದ್ಭವಿಸಿದ್ದ ₹ 10,000 ಕೋಟಿ ಪರಿಹಾರಕ್ಕೆ ಸಂಬಂಧಿಸಿದಂತೆ ಎದ್ದಿದ್ದ ವಿವಾದವನ್ನು ಅದಾನಿ ಪವರ್ (ಮುಂದ್ರಾ) ಲಿಮಿಟೆಡ್ ಮತ್ತು ಗುಜರಾತ್ ಉರ್ಜಾ ವಿಕಾಸ್ ನಿಗಮ್ ಲಿಮಿಟೆಡ್ ಇತ್ಯರ್ಥಪಡಿಸಿಕೊಂಡಿರುವುದಕ್ಕೆ ಸಮ್ಮತಿಸಿದ ಸುಪ್ರೀಂ ಕೋರ್ಟ್ ಮಂಗಳವಾರ ಈ ಕುರಿತ ಕ್ಯುರೇಟಿವ್ ಅರ್ಜಿಯನ್ನು ವಿಲೇವಾರಿ ಮಾಡಿತು.
ಕಕ್ಷಿದಾರರು ತಮ್ಮ ನಡುವಿನ ವಿವಾದ ಇತ್ಯರ್ಥಪಡಿಸಿಕೊಂಡಿದ್ದು ರೂ. 10000 ಕೋಟಿ ಪರಿಹಾರದ ಹಕ್ಕುಸಾಧನೆಯನ್ನು ಅರ್ಜಿದಾರರು ಹಿಂಪಡೆದಿದ್ದಾರೆ ಎಂದು ಎಜಿ ಕೆ ಕೆ ವೇಣುಗೋಪಾಲ್ ನ್ಯಾಯಾಲಯಕ್ಕೆ ತಿಳಿಸಿದ ಬಳಿಕ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ, ನ್ಯಾಯಮೂರ್ತಿಗಳಾದ ಯು ಯು ಲಲಿತ್, ಎ ಎಂ ಖಾನ್ವಿಲ್ಕರ್, ಬಿ ಆರ್ ಗವಾಯಿ ಹಾಗೂ ಸೂರ್ಯಕಾಂತ್ ಅವರಿದ್ದ ಪೀಠ ಅರ್ಜಿಯನ್ನು ವಿಲೇವಾರಿ ಮಾಡಿತು.
ಹೆಚ್ಚಿನ ಮಾಹಿತಿಗೆ ʼಬಾರ್ ಅಂಡ್ ಬೆಂಚ್ʼ ಇಂಗ್ಲಿಷ್ ತಾಣದ ಲಿಂಕ್ ಗಮನಿಸಿ.