ಹರೆಯದ ಹುಡುಗಿಯರು ಲೈಂಗಿಕ ಅಭೀಪ್ಸೆ ಹತ್ತಿಕ್ಕಿಕೊಳ್ಳಬೇಕು, ಹುಡುಗರು ಯುವತಿಯರನ್ನು ಗೌರವಿಸಬೇಕು: ಕಲ್ಕತ್ತಾ ಹೈಕೋರ್ಟ್

ಯುವತಿಯರು ಇಲ್ಲವೇ ಮಹಿಳೆಯರನ್ನು ಗೌರವಿಸುವುದು ಯುವಕರ ಕರ್ತವ್ಯವಾಗಿದ್ದು ಮಹಿಳೆಯರ ಘನತೆ, ಖಾಸಗಿತನ ಹಾಗೂ ದೈಹಿಕ ಸ್ವಾಯತ್ತತೆಯನ್ನು ಗೌರವಿಸಲು ಮನಸ್ಸಿಗೆ ತರಬೇತಿ ನೀಡಬೇಕು ಎಂದು ನ್ಯಾಯಾಲಯ ಹೇಳಿದೆ.
Justice Chitta Ranjan Dash, Justice Partha Sarathi Sen and Calcutta High Court
Justice Chitta Ranjan Dash, Justice Partha Sarathi Sen and Calcutta High Court

ಕ್ಷಣಿಕ ಸುಖಕ್ಕೆ ಹದಿಹರೆಯದ ಹುಡುಗಿಯರು ಮಣಿಯುವ ಬದಲು ತಮ್ಮ ಲೈಂಗಿಕ ಅಭೀಪ್ಸೆಗಳನ್ನು ಹತ್ತಿಕ್ಕಿಕೊಳ್ಳಬೇಕು. ಯುವತಿಯರು, ಮಹಿಳೆಯರ ಘನತೆ ಹಾಗೂ ದೈಹಿಕ ಸ್ವಾಯತ್ತತೆಯನ್ನು ಯುವಕರು ಗೌರವಿಸಬೇಕು ಎಂದು ಕಲ್ಕತ್ತಾ ಹೈಕೋರ್ಟ್‌ ಬುಧವಾರ ಹೇಳಿದೆ [ಪ್ರೊಭಾತ್‌ ಪುರ್ಕೈತ್‌ ಅಲಿಯಾಸ್‌ ಪ್ರೊವತ್‌ ಮತ್ತು ಪ. ಬಂಗಾಳ ಸರ್ಕಾರ ನಡುವಣ ಪ್ರಕರಣ].

ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಕ್ಕಾಗಿ ಶಿಕ್ಷೆಗೊಳಗಾದ ಪ್ರಣಯ ಸಂಬಂಧ ಹೊಂದಿದ ಯುವಕನನ್ನು ಖುಲಾಸೆಗೊಳಿಸುವಾಗ ನ್ಯಾಯಮೂರ್ತಿಗಳಾದ ಚಿತ್ತ ರಂಜನ್ ದಾಸ್‌ ಮತ್ತು ಪಾರ್ಥ ಸಾರಥಿ ಸೇನ್ ಅವರಿದ್ದ ವಿಭಾಗೀಯ ಪೀಠ ಈ ವಿಚಾರ ತಿಳಿಸಿತು.

ಹದಿಹರೆಯದವರ ಸಮ್ಮತಿಯ ಲೈಂಗಿಕ ಕ್ರಿಯೆಗಳನ್ನು ಲೈಂಗಿಕ ಕಿರುಕುಳದೊಂದಿಗೆ ಹೋಲಿಸುವ ಬಗ್ಗೆ ಕಳವಳ ವ್ಯಕ್ತಪಡಿಸಿದ ನ್ಯಾಯಾಲಯ 16 ವರ್ಷಕ್ಕಿಂತ ಮೇಲ್ಪಟ್ಟ ಹದಿಹರೆಯದವರನ್ನು ಒಳಗೊಂಡ ಸಮ್ಮತಿಯ ಲೈಂಗಿಕ ಕ್ರಿಯೆಯನ್ನು ಅಪರಾಧವಲ್ಲವೆಂದು ಘೋಷಿಸುವ ಅಗತ್ಯವಿದೆ ಎಂದಿತು.

ಚಿಕ್ಕ ವಯಸ್ಸಿನಲ್ಲಿ ಲೈಂಗಿಕ ಸಂಬಂಧಗಳಿಂದ ಉಂಟಾಗುವ ಕಾನೂನು ತೊಡಕುಗಳನ್ನು ತಪ್ಪಿಸಲು ಹದಿಹರೆಯದವರಿಗೆ ಸಮಗ್ರ ಹಕ್ಕು ಆಧಾರಿತ ಲೈಂಗಿಕ ಶಿಕ್ಷಣ ನೀಡಬೇಕು ಎಂದು ನ್ಯಾಯಾಲಯ ಅವಲೋಕಿಸಿತು.

ತನ್ನ ವಿಸ್ತೃತ ತೀರ್ಪಿನಲ್ಲಿ, ನ್ಯಾಯಾಲಯ ಲೈಂಗಿಕ ಪ್ರಚೋದನೆಗೆ ಕಾರಣವನ್ನು ಮತ್ತು ಅದರ ಹತೋಟಿಯ ಪ್ರಾಮುಖ್ಯತೆಯನ್ನು ವಿವರಿಸಿದೆ. ಜೊತೆಗೆ ಹದಿಹರೆಯದವರು ನಿರ್ವಹಿಸಬೇಕಾದ ಕರ್ತವ್ಯಗಳು, ಲೈಂಗಿಕ ಶಿಕ್ಷಣ, ಪೋಷಕರ ಮಾರ್ಗದರ್ಶನಗಳನ್ನು ಅದು ಉಲ್ಲೇಖಿಸಿದೆ.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Related Stories

No stories found.
Kannada Bar & Bench
kannada.barandbench.com