ಪಂಜಾಬ್‌: ಭಗವಂತ್‌ ಮಾನ್‌ ಸಂಪುಟ ಸೇರಿದ ಇಬ್ಬರು ವಕೀಲರು [ಚುಟುಕು]

Harpal Singh Cheema & Harjot Singh Bains

Harpal Singh Cheema & Harjot Singh Bains

A1

ಪಂಜಾಬ್‌ನಲ್ಲಿ ನೂತನವಾಗಿ ರಚನೆಯಾಗಿರುವ ಆಮ್‌ ಆದ್ಮಿ ಪಕ್ಷದ ಸರ್ಕಾರದಲ್ಲಿ ಇಬ್ಬರು ವಕೀಲರು ಸ್ಥಾನಗಳಿಸಿದ್ದಾರೆ. ಮುಖ್ಯಮಂತ್ರಿ ಭಗವಂತ್‌ ಮಾನ್‌ ಅವರ ಸಚಿವ ಸಂಪುಟಕ್ಕೆ ಹರ್‌ಪಲ್‌ ಸಿಂಗ್‌ ಚೀಮಾ ಮತ್ತು ಹರ್‌ಜೋತ್‌ ಸಿಂಗ್‌ ಬೇನ್ಸ್‌ ಸೇರ್ಪಡೆಯಾಗಿದ್ದಾರೆ. ಈ ಇಬ್ಬರೂ ಪಂಜಾಬ್‌ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದವರಾಗಿದ್ದಾರೆ 31 ವರ್ಷದ ಹರ್‌ಜೋತ್‌ ಅವರು ಮಾನ್‌ ಸಂಪುಟದ ಅತಿ ಕಿರಿಯ ವಯಸ್ಸಿನ ಸಚಿವರು ಮಾತ್ರವಲ್ಲ ಇಡೀ ದೇಶದಲ್ಲೇ ಅತಿ ಚಿಕ್ಕ ವಯಸ್ಸಿನ ಸಚಿವರಾಗಿದ್ದಾರೆ. ಹರ್‌ಪಲ್‌ ಅವರು ಎರಡನೇ ಬಾರಿಗೆ ವಿಧಾನಸಭೆ ಪ್ರವೇಶಿಸುತ್ತಿದ್ದಾರೆ.

ಹೆಚ್ಚಿನ ಮಾಹಿತಿಗೆ ʼಬಾರ್ ಅಂಡ್ ಬೆಂಚ್ʼ ಇಂಗ್ಲಿಷ್ ತಾಣದ ಲಿಂಕ್‌ ಗಮನಿಸಿ.

Kannada Bar & Bench
kannada.barandbench.com