
ಅಂತಾರಾಷ್ಟ್ರೀಯ ವಾಣಿಜ್ಯ ಮಧ್ಯಸ್ಥಿಕೆ ನಿರ್ಣಯಗಳನ್ನು ಪ್ರಶ್ನಿಸುವ ಮನವಿಗಳ ವಿಚಾರಣೆ ನಡೆಸಲು ಕರ್ನಾಟಕ ಹೈಕೋರ್ಟ್ ಈಚೆಗೆ ವಾಣಿಜ್ಯ ಪೀಠವನ್ನು ರಚಿಸಿದೆ. ಈ ಸಂಬಂಧ ಹೈಕೋರ್ಟ್ ಆದೇಶ ಮಾಡಿತ್ತು.
ಮಧ್ಯಸ್ಥಿಕೆ ಮತ್ತು ಸಂಧಾನ ಕಾಯಿದೆ ಸೆಕ್ಷನ್ 2(ಇ)(ii) ಅಡಿ ಕರ್ನಾಟಕ ಹೈಕೋರ್ಟ್‌ನಲ್ಲಿ ಅಂತಾರಾಷ್ಟ್ರೀಯ ವಾಣಿಜ್ಯ ಮಧ್ಯಸ್ಥಿಕೆ ನಿರ್ಧಾರ ಪ್ರಶ್ನಿಸಿ ಮನವಿ ಸಲ್ಲಿಸಬಹುದಾಗಿದೆ. ಇವುಗಳ ಇತ್ಯರ್ಥಕ್ಕಾಗಿ ವಾಣಿಜ್ಯ ನ್ಯಾಯಾಲಯಗಳ ಕಾಯಿದೆ 2015ರ ಸೆಕ್ಷನ್ 4(1)ರ ಅಡಿ ವಾಣಿಜ್ಯ ವಿಭಾಗವನ್ನು ರಚಿಸಲಾಗಿದೆ. ಪ್ರಧಾನ ಪೀಠವಾದ ಬೆಂಗಳೂರು, ಕಲಬುರ್ಗಿ ಮತ್ತು ಧಾರವಾಡ ಪೀಠಗಳಲ್ಲಿ ಏಕ ಸದಸ್ಯ ಪೀಠವು ಕಾರ್ಯನಿರ್ವಹಿಸಲಿದೆ” ಎಂದು ಹೈಕೋರ್ಟ್ ಸುತ್ತೋಲೆಯಲ್ಲಿ ತಿಳಿಸಲಾಗಿದೆ.