ಆಕ್ರಮಣಕಾರಿಯಾಗಿ ವಾದ ಮಂಡಿಸಬಹುದಾದರೂ ನ್ಯಾಯಾಧೀಶರಿಗೆ ಅಗೌರವ ತೋರುವಂತಿಲ್ಲ: ಹಿರಿಯ ವಕೀಲೆ ಇಂದಿರಾ ಜೈಸಿಂಗ್

ವಕೀಲೆಯರ ದಿನದ ಅಂಗವಾಗಿ ಸೊಸೈಟಿ ಆಫ್ ಇಂಡಿಯನ್ ಲಾ ಫರ್ಮ್ಸ್ (ಎಸ್‌ಐಎಲ್‌ಎಫ್) ಮಹಿಳಾ ಸಮೂಹ ದೆಹಲಿ ಹೈಕೋರ್ಟ್ ಅಂಗಳದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಇಂದಿರಾ ಮಾತನಾಡಿದರು.
Indira Jaising at SILF Event
Indira Jaising at SILF Event
Published on

ವಕೀಲರು ನ್ಯಾಯಾಲಯದಲ್ಲಿ ಆಕ್ರಮಣಕಾರಿಯಾಗಿ ವಾದ ಮಂಡಿಸಬಹುದಾದರೂ ಅವರು ನ್ಯಾಯಾಧೀಶರಿಗೆ ಅಗೌರವ ತೋರಬಾರದು ಎಂದು ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಶನಿವಾರ ಹೇಳಿದರು.

ವಕೀಲೆಯರ ದಿನದ ಅಂಗವಾಗಿ ಸೊಸೈಟಿ ಆಫ್ ಇಂಡಿಯನ್ ಲಾ ಫರ್ಮ್ಸ್ (ಎಸ್‌ಐಎಲ್‌ಎಫ್‌) ಮಹಿಳಾ ಸಮೂಹ ದೆಹಲಿ ಹೈಕೋರ್ಟ್ ಅಂಗಳದಲ್ಲಿ ಶನಿವಾರ ಆಯೋಜಿಸಿದ್ದ 'ಮಹಿಳೆಯರ ಸಬಲೀಕರಣ ಬೇಕೇ?' ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ನಾನು ಆಕ್ರಮಣಕಾರಿಯಾಗಿ ವಾದ ಮಂಡಿಸುತ್ತಿದೆ ಎಂದು ಒಪ್ಪಿಕೊಳ್ಳುವುದರಲ್ಲಿ ನನಗೆ ಯಾವುದೇ ಹಿಂಜರಿಕೆ ಇಲ್ಲ. ಆದರೆ ಅಂತಹ ಆಕ್ರಮಣವನ್ನು ಗೌರವದ ಮೂಲಕ ಮೆದುಗೊಳಿಸಿರಬೇಕು ಎಂದು ಅವರು ಹೇಳಿದರು.

"ನನ್ನನ್ನು ಆಕ್ರಮಣಕಾರಿ ಎಂದು ಆರೋಪಿಸಲಾಗಿದೆ, ನ್ಯಾಯಾಲಯದಲ್ಲಿ ಆಕ್ರಮಣಕಾರಿ ಎಂಬ ಆರೋಪವನ್ನು ನಾನು ಹಿಂಜರಿಕೆಯಿಲ್ಲದೆ ಒಪ್ಪುತ್ತೇನೆ. ನ್ಯಾಯಾಲಯದಲ್ಲಿ ಆಕ್ರಮಣಕಾರಿಯಾಗಿರಲು ನನಗೆ ಯಾವುದೇ ನಿರ್ಬಂಧಗಳಿಲ್ಲ. ಆಕ್ರಮಣಶೀಲತೆ, ಗೌರವದಿಂದ ಕೂಡಿರಬೇಕು. ದಯವಿಟ್ಟು ಅದನ್ನು ನೆನಪಿಡಿ. ನೀವು ಕಕ್ಷಿದಾರರನ್ನು ಪ್ರತಿನಿಧಿಸುವಲ್ಲಿ ಆಕ್ರಮಣಕಾರಿಯಾಗಬಹುದು. ಆದರೆ ನ್ಯಾಯಾಲಯದಲ್ಲಿ ನ್ಯಾಯಾಧೀಶರಿಗೆ ಅಗೌರವ ತೋರುವಂತಿಲ್ಲ" ಎಂದು ಜೈಸಿಂಗ್ ಹೇಳಿದರು. ನ್ಯಾಯಾಲಯದ ಮನವೊಲಿಸುವ ಉದ್ದೇಶವನ್ನು ಮಾತ್ರ ಇಂತಹ ಆಕ್ರಮಣ ಹೊಂದಿರಬೇಕು ಎಂದು ಅವರು ವಿವರಿಸಿದರು.

ಹಿರಿಯ ನ್ಯಾಯವಾದಿ ಫಾಲಿ ನಾರಿಮನ್‌ ಅವರನ್ನು ಕಂಡ ಬಳಿಕ ಆಕ್ರಮಣಶೀಲತೆಯಲ್ಲಿ ಯಾವುದೇ ತಪ್ಪಿಲ್ಲ ಎಂದು ನನಗೆ ಅರಿವಾಯಿತು ಎಂಬುದಾಗಿ ಇಂದಿರಾ ತಿಳಿಸಿದರು.

Lalit Bhasin, Amita Katragadda, Vani Mehta, Shweta Bharti, Indira Jaising, Pallavi Saluja, Monica Behura, Manisha, Neena Gupta
Lalit Bhasin, Amita Katragadda, Vani Mehta, Shweta Bharti, Indira Jaising, Pallavi Saluja, Monica Behura, Manisha, Neena GuptaA1

"ನನ್ನ ವೃತ್ತಿಜೀವನದ ಆರಂಭಿಕ ವರ್ಷಗಳಲ್ಲಿ, (ನಾರಿಮನ್) ಅವರು ನ್ಯಾಯಾಲಯದಲ್ಲಿ ಮಾತನಾಡುವುದನ್ನು ಬಹಳ ಮೆಚ್ಚುಗೆಯಿಂದ ನೋಡಿದ್ದೇನೆ. ಅವರಿಂದ ಕಲಿತಿದ್ದೇನೆ, ಆಕ್ರಮಣಶೀಲತೆಯಲ್ಲಿ ಯಾವುದೇ ತಪ್ಪಿಲ್ಲ. ಅವರು ಯಶಸ್ವಿ ವಕೀಲರು. ಅವರು ಮಂಡಿಸಲು ಬಯಸುವ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ನಾವು ಕೆಲವೊಮ್ಮೆ ದೃಷ್ಟಿಕೋನವನ್ನು ಪ್ರಸ್ತುತಪಡಿಸಲು ಆಕ್ರಮಣಕಾರಿಯಾಗಬೇಕು" ಎಂದು ಜೈಸಿಂಗ್ ಹೇಳಿದರು.

ಫಾಲಿ ನಾರಿಮನ್‌ ಅವರು ವರ್ಚುವಲ್‌ ವಿಧಾನದಲ್ಲಿ ವಿಶೇಷ ಭಾಷಣ ಮಾಡಿದರು. ಕಾರ್ಯಕ್ರಮವನ್ನು ನ್ಯಾ. ಪ್ರತಿಭಾ ಎಂ ಸಿಂಗ್‌ ಉದ್ಘಾಟಿಸಿ ಮಾತನಾಡಿದರು. ವಕೀಲೆಯರಾದ ಶ್ವೇತಾ ಭಾರ್ತಿ, ಶಿಲ್ಪಾ ಭಾಸಿನ್‌ ಮೆಹ್ರಾ, ವಾಣಿ ಮೆಹ್ತಾ, ಅಮಿತಾ ಕತ್ರಗದ್ದ ʼಬಾರ್‌ ಅಂಡ್‌ ಬೆಂಚ್‌ʼ ಜಾಲತಾಣದ ಆಂಗ್ಲ ಆವೃತ್ತಿಯ ಸಂಪಾದಕಿ ಪಲ್ಲವಿ ಸಳುಜಾ, ಎಕನಾಮಿಕ್‌ ಟೈಮ್ಸ್‌ ಲೀಗಲ್‌ನ ಮೋನಿಕಾ ಬೆಹುರಾ ಮತ್ತಿತರರು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Kannada Bar & Bench
kannada.barandbench.com