ಎಐಬಿಇ XVI ಪರೀಕ್ಷೆ ಏಪ್ರಿಲ್ 25ಕ್ಕೆ ಮುಂದೂಡಿಕೆ

ಪರೀಕ್ಷಾ ಶುಲ್ಕ ಪಾವತಿಸಲು ಮಾರ್ಚ್ 26 ಕೊನೆಯ ದಿನವಾಗಿದ್ದು ಆನ್ಲೈನ್ ಅರ್ಜಿಗಳನ್ನು ಪೂರ್ಣಗೊಳಿಸುವ ಕೊನೆಯ ದಿನಾಂಕ ಮಾರ್ಚ್ 31.
ಎಐಬಿಇ XVI ಪರೀಕ್ಷೆ ಏಪ್ರಿಲ್ 25ಕ್ಕೆ ಮುಂದೂಡಿಕೆ

ಅಖಿಲ ಭಾರತ ಮಟ್ಟದಲ್ಲಿ ನಡೆಯುವ ನ್ಯಾಯವಾದಿ ವರ್ಗದ ಪರೀಕ್ಷೆ ಎಐಬಿಇ XVIಯನ್ನು ಒಂದು ತಿಂಗಳ ಕಾಲ ಮುಂದೂಡಲಾಗಿದೆ. ಮಾರ್ಚ್ 21ರ ಬದಲಾಗಿ ಏಪ್ರಿಲ್ 25 ರಂದು ಪರೀಕ್ಷೆ ನಡೆಯಲಿದೆ.

ಭಾರತೀಯ ವಕೀಲರ ಪರಿಷತ್ತು ಪರಿಷ್ಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಹೊಸ ವೇಳಾಪಟ್ಟಿಯ ಪ್ರಕಾರ, ಆನ್‌ಲೈನ್ ನೋಂದಣಿಯ ಕೊನೆಯ ದಿನಾಂಕವನ್ನು ಮಾರ್ಚ್ 22, 2021 ಕ್ಕೆ ವಿಸ್ತರಿಸಲಾಗಿದೆ.

ಪರೀಕ್ಷಾ ಶುಲ್ಕ ಪಾವತಿಸಲು ಮಾರ್ಚ್ 26 ಕೊನೆಯ ದಿನವಾಗಿದ್ದು ಆನ್‌ಲೈನ್ ಅರ್ಜಿಗಳನ್ನು ಪೂರ್ಣಗೊಳಿಸುವ ಕೊನೆಯ ದಿನಾಂಕ ಮಾರ್ಚ್ 31. ಏಪ್ರಿಲ್ 10 ರಂದು ಪ್ರವೇಶ ಪತ್ರಗಳನ್ನು ಆನ್‌ಲೈನ್ ಮೂಲಕ ಬಿಡುಗಡೆ ಮಾಡಲಾಗುತ್ತದೆ. ಈ ಮೊದಲು ಬಿಸಿಐ ಪರೀಕ್ಷೆಯನ್ನು ಜನವರಿ 24ರಂದು ನಡೆಸಲು ಉದ್ದೇಶಿಸಿತ್ತು.

[ವೇಳಾಪಟ್ಟಿಯ ವಿವರ ಇಲ್ಲಿದೆ]

Attachment
PDF
Revised_Schedule_AIBEXVI.pdf
Preview

Related Stories

No stories found.