ಡಿಸೆಂಬರ್ 8ಕ್ಕೆ ಎಐಎಲ್ಇಟಿ ಪರೀಕ್ಷೆ ನಿಗದಿ

ಪ್ರವೇಶ ಪರೀಕ್ಷೆಯ ಆನ್ಲೈನ್ ಅರ್ಜಿ ನಮೂನೆಗಳು ಆಗಸ್ಟ್ 1, 2024 ರಿಂದ ವಿಶ್ವವಿದ್ಯಾಲಯದ ಜಾಲತಾಣದಲ್ಲಿ ದೊರೆಯಲಿವೆ.
AILET 2025
AILET 2025

ಅಖಿಲ ಭಾರತ ಕಾನೂನು ಪ್ರವೇಶ ಪರೀಕ್ಷೆಯನ್ನು (AILET-  2025) ಡಿಸೆಂಬರ್ 8, 2024 ರಂದು ಮಧ್ಯಾಹ್ನ 2ರಿಂದ 4ಗಂಟೆಗೆಯವರೆಗೆ ನಡೆಸುವುದಾಗಿ ದೆಹಲಿಯ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ ಪ್ರಕಟಿಸಿದೆ.

ಐದು ವರ್ಷಗಳ ಬಿ ಎ ಎಲ್‌ಎಲ್‌ಬಿ (ಆನರ್ಸ್‌) ಕೋರ್ಸ್‌ ಜೊತೆಗೆ 2025-26 ಶೈಕ್ಷಣಿಕ ವರ್ಷಕ್ಕೆ ಎಲ್‌ಎಲ್‌ಎಂ ಮತ್ತು ಪಿಎಚ್‌ಡಿ ಕೋರ್ಸ್‌ಗಳಿಗೆ ಪ್ರವೇಶಾತಿ ಪರೀಕ್ಷೆ ನಡೆಸಲಾಗುತ್ತದೆ.

ಪ್ರವೇಶ ಪರೀಕ್ಷೆಯ ಆನ್‌ಲೈನ್ ಅರ್ಜಿ ನಮೂನೆಗಳು ಆಗಸ್ಟ್ 1, 2024 ರಿಂದ ವಿಶ್ವವಿದ್ಯಾಲಯದ ಜಾಲತಾಣದಲ್ಲಿ ದೊರೆಯಲಿವೆ.

Kannada Bar & Bench
kannada.barandbench.com