ಅಖಿಲ ಭಾರತ ವಕೀಲರ ಪರೀಕ್ಷೆ ನೋಂದಣಿ ಕೊನೆಯ ದಿನಾಂಕ ನಾಳೆಯವರೆಗೆ ವಿಸ್ತರಣೆ

ಪರೀಕ್ಷೆಗೆ ಆನ್‌ಲೈನ್‌ ಮೂಲಕ ನೋಂದಣಿ ಮಾಡಿಕೊಳ್ಳಲು ಜಾಲತಾಣ ಲಭ್ಯವಾಗದ ಕಾರಣ ದೇಶಾದ್ಯಂತ ಹಲವು ಅಭ್ಯರ್ಥಿಗಳು ದೂರು ನೀಡಿದ್ದರು.
All India Bar exam
All India Bar exam

ಅಖಿಲ ಭಾರತ ವಕೀಲರ ಪರೀಕ್ಷೆ (ಎಐಬಿಇ-  XVII) ತೆಗೆದುಕೊಳ್ಳಲು ಆಸಕ್ತರಾದ ಅಭ್ಯರ್ಥಿಗಳು ನೋಂದಾಯಿಸಿಕೊಳ್ಳಲು ಅನುವಾಗುವಂತೆ ಕೊನೆಯ ದಿನಾಂಕವನ್ನು ಬುಧವಾರ, ಜನವರಿ 18, 2023ರವರೆಗೆ ವಿಸ್ತರಿಸಲಾಗಿದೆ.  

ನೋಂದಣಿಗೆ ಕಡೆಯ ದಿನವಾಗಿದ್ದ ಜನವರಿ 16ರಂದು (ನಿನ್ನೆ) ಆನ್‌ಲೈನ್ ನೋಂದಣಿ ಮಾಡಿಸುವ ಜಾಲತಾಣ ಬಳಕೆ ಸಾಧ್ಯವಾಗದೇ ಇದ್ದುದರಿಂದ ದೇಶದೆಲ್ಲೆಡೆ ಹಲವು ಅಭ್ಯರ್ಥಿಗಳು ಮಾಡಿದ್ದ ಮನವಿ ಮೇರೆಗೆ  ಜನವರಿ 18, 2023 ರವರೆಗೆ ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ ಎಂದು ಭಾರತೀಯ ವಕೀಲರ ಪರಿಷತ್ತು ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ.

Also Read
ಫೆ. 5ಕ್ಕೆ ಅಖಿಲ ಭಾರತ ನ್ಯಾಯವಾದಿ ವರ್ಗದ ಪರೀಕ್ಷೆ; ಏಪ್ರಿಲ್‌ನಲ್ಲಿ ಫಲಿತಾಂಶ: ದೆಹಲಿ ಹೈಕೋರ್ಟ್‌ಗೆ ಬಿಸಿಐ ವಿವರಣೆ

ಪರೀಕ್ಷೆ ನಡೆಸದಿದ್ದ ಅಕ್ಟೋಬರ್ 2021 ಮತ್ತು ಏಪ್ರಿಲ್ 2023ರ ನಡುವಿನ ಅವಧಿಯನ್ನು, ʼಪರೀಕ್ಷೆಯನ್ನು ಉತ್ತೀರ್ಣವಾಗಬೇಕೆಂಬ ಎರಡು ವರ್ಷಗಳ ಕಡ್ಡಾಯ ಅವಧಿಯ ಭಾಗವಾಗಿ ಪರಿಗಣಿಸುವುದಿಲ್ಲ ಎಂಬುದಾಗಿ 2022ರ ಡಿಸೆಂಬರ್ 30ರಂದು ಪರಿಷತ್ತು ನಿರ್ಣಯ ಕೈಗೊಂಡಿತ್ತು. ಪರೀಕ್ಷೆಯನ್ನು ಫೆಬ್ರವರಿ 5ರಂದು ನಡೆಸಲು ನಿರ್ಧರಿಸಲಾಗಿದೆ.

Kannada Bar & Bench
kannada.barandbench.com