ಕೇಂದ್ರದಿಂದ ಸದಸ್ಯರ ನೇಮಕ ಆಗುವವರೆಗೆ ಎಲ್ಲ ನ್ಯಾಯಮಂಡಳಿಗಳ ವ್ಯಾಜ್ಯಗಳಿಗೆ ತಡೆ ನೀಡಬೇಕಾಗುತ್ತದೆ: ಸುಪ್ರೀಂ [ಚುಟುಕು]

Vacancies in Tribunals and Supreme court

Vacancies in Tribunals and Supreme court

A1
Published on

ದೇಶದ ನ್ಯಾಯಮಂಡಳಿಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಕೇಂದ್ರ ಸರ್ಕಾರ ವಿಫಲವಾಗಿರುವುದಕ್ಕೆ ಸುಪ್ರೀಂ ಕೋರ್ಟ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಸರ್ಕಾರ ಸದಸ್ಯರ ನೇಮಕ ಮಾಡುವವರೆಗೆ ನ್ಯಾಯಮಂಡಳಿಗಳಲ್ಲಿರುವ ವ್ಯಾಜ್ಯಗಳ ವಿಚಾರಣೆಗೆ ತಡೆ ನೀಡಬೇಕಾಗುತ್ತದೆ ಎಂದು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಎಂ ಎಂ ಸುಂದರೇಶ್‌ ಅವರಿದ್ದ ಪೀಠ ಹೇಳಿತು. ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯಡಿ (ಪಿಎಂಎಲ್‌ಎ) ರೂಪುಗೊಂಡಿರುವ ನ್ಯಾಯಮಂಡಳಿಗಳಲ್ಲಿ ಹುದ್ದೆಗಳು ಖಾಲಿ ಇರುವುದನ್ನು ಗಮನಿಸಿದ ನ್ಯಾಯಾಲಯ ಬೇಸರ ವ್ಯಕ್ತಪಡಿಸಿತು. ಹುದ್ದೆಗಳನ್ನು ಭರ್ತಿ ಮಾಡುವಂತೆ ಅನೇಕ ಬಾರಿ ನ್ಯಾಯಾಲಯ ಎಚ್ಚರಿಸುತ್ತಲೇ ಬಂದಿದೆ.

ಹೆಚ್ಚಿನ ಮಾಹಿತಿಗೆ ʼಬಾರ್‌ ಅಂಡ್‌ ಬೆಂಚ್‌ʼ ಇಂಗ್ಲಿಷ್‌ ತಾಣದ ಲಿಂಕ್‌ ಗಮನಿಸಿ.

Kannada Bar & Bench
kannada.barandbench.com