ಮಗನ ಜನನ ಪ್ರಮಾಣಪತ್ರ ತಿರುಚಿದ ಪ್ರಕರಣ: ರಾಜಕಾರಣಿ ಆಜಂ ಖಾನ್ ಕುಟುಂಬಕ್ಕೆ ಜಾಮೀನು ನೀಡಿದ ಅಲಾಹಾಬಾದ್ ಹೈಕೋರ್ಟ್

ಸಮಾಜವಾದಿ ಪಕ್ಷದ ಮುಖಂಡ ಆಜಂ ಪುತ್ರ ಅಬ್ದುಲ್ಲಾ ಅವರು ಚುನಾವಣೆಗೆ ಸ್ಪರ್ಧಿಸಲು ಅನುಕೂಲವಾಗುವಂತೆ ಎರಡನೇ ಪ್ರಮಾಣಪತ್ರವನ್ನು ದುರ್ಬಳಕೆ ಮಾಡಿಕೊಳ್ಳಲಾಗಿತ್ತು ಎಂದು ದೂರಿನಲ್ಲಿ ದಾಖಲಿಸಲಾಗಿತ್ತು.
Allahabad High Court
Allahabad High Court

ಮಗನ ಜನನ ಪ್ರಮಾಣಪತ್ರ ತಿರುಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ನಾಯಕ ಮೊಹಮ್ಮದ್ ಆಜಂ ಖಾನ್, ಅವರ ಪತ್ನಿ ಡಾ ತನ್ಜೀನ್ ಫಾತಿಮಾ ಹಾಗೂ ಪುತ್ರ ಮೊಹಮ್ಮದ್ ಅಬ್ದುಲ್ಲಾ ಆಜಂ ಖಾನ್ ಅವರಿಗೆ ಅಲಾಹಾಬಾದ್ ಹೈಕೋರ್ಟ್ ಮಂಗಳವಾರ ಜಾಮೀನು ನೀಡಿದೆ.

Also Read
ಹಾಥ್‌ರಸ್ ಪ್ರಕರಣದ ತನಿಖೆಯಲ್ಲಿ ನೇರವಾಗಿ ಪಾಲ್ಗೊಳ್ಳದವರು ಸಾರ್ವಜನಿಕವಾಗಿ ಮಾತನಾಡುವಂತಿಲ್ಲ - ಅಲಾಹಾಬಾದ್ ಹೈಕೋರ್ಟ್

ತಮ್ಮ ಮಗನ ಜನನಕ್ಕೆ ಸಂಬಂಧಿಸಿದಂತೆ ಎರಡು ಪ್ರಮಾಣಪತ್ರಗಳನ್ನು ಆಜಂ ಕುಟುಂಬ ಪಡೆದಿತ್ತು ಎಂದು ಬಿಜೆಪಿ ಸದಸ್ಯ ಆಕಾಶ್ ಸಕ್ಸೇನಾ ಎಫ್ಐಆರ್ ದಾಖಲಿಸಿದ್ದರು. ಆಜಂ ಪುತ್ರ ಅಬ್ದುಲ್ಲಾ ಅವರು ಚುನಾವಣೆಗೆ ಸ್ಪರ್ಧಿಸಲು ಅನುಕೂಲವಾಗುವಂತೆ ಎರಡನೇ ಪ್ರಮಾಣಪತ್ರವನ್ನು ದುರ್ಬಳಕೆ ಮಾಡಿಕೊಳ್ಳಲಾಗಿತ್ತು ಎಂದು ಅವರು ಆರೋಪಿಸಿದ್ದರು. ಮೊದಲನೆಯ ಜನನ ಪ್ರಮಾಣ ಪತ್ರವನ್ನು ಪಾಸ್‌ಪೋರ್ಟ್‌ ಪಡೆಯಲು ಬಳಸಲಾಗಿತ್ತು. ಈ ಹಿನ್ನೆಲೆಯಲ್ಲಿ ಆಜಂ ಕುಟುಂಬದ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420, 467, 468 ಮತ್ತು 471 ರ ಅಡಿಯಲ್ಲಿ ಮೊಕದ್ದಮೆ ದಾಖಲಿಸಲಾಗಿತ್ತು.

ಡಾ ಫಾತಿಮಾ ಮತ್ತು ಅಬ್ದುಲ್ಲಾ ಅಜಂ ಖಾನ್ ಅವರನ್ನು ತಕ್ಷಣ ಜಾಮೀನಿನ ಮೇಲೆ ಬಿಡುಗಡೆ ಮಾಡಲು ನಿರ್ದೇಶಿಸಲಾಗಿದೆ. ಆದರೆ ಮಾಹಿತಿದಾರರ ಹೇಳಿಕೆಯನ್ನು ವಿಚಾರಣಾ ನ್ಯಾಯಾಲಯ ದಾಖಲಿಸಿಕೊಂಡ ನಂತರವೇ ಆಜಂ ಖಾನ್ ಅವರನ್ನು ಬಿಡುಗಡೆ ಮಾಡಬಹುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿಡವಿಟ್ ಆಧಾರದಲ್ಲಿ ಮಗ ಅಬ್ದುಲ್ಲಾ ಅವರನ್ನು ಹಾಗೂ ಸಿಆರ್‌ಪಿಸಿ ಸೆಕ್ಷನ್ 437 (1) ರ ಅಡಿ ನೀಡಲಾದ ವಿನಾಯ್ತಿಯಂತೆ ಫಾತಿಮಾ ಅವರನ್ನು ಬಿಡುಗಡೆ ಮಾಡಲು ಆದೇಶಿಸಲಾಗಿದೆ.

Related Stories

No stories found.
Kannada Bar & Bench
kannada.barandbench.com