
Amazon, Future Group, and Reliance
ಫ್ಯೂಚರ್ ರೀಟೇಲ್ ಜೊತೆಗಿನ ತನ್ನ ಒಪ್ಪಂದಕ್ಕೆ ಸಂಬಂಧಿಸಿದಂತೆ ಸಿಂಗಪುರ ಅಂತರರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಮಂಡಳಿ ನಡೆಸುತ್ತಿದ್ದ ವಿಚಾರಣೆಗೆ ದೆಹಲಿ ಹೈಕೋರ್ಟ್ ತಡೆಯಾಜ್ಞೆ ನೀಡಿರುವುದನ್ನು ಪ್ರಶ್ನಿಸಿ ಇ ಕಾಮರ್ಸ್ ದೈತ್ಯ ಅಮೆಜಾನ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಫ್ಯೂಚರ್ ರಿಟೇಲ್ ಲಿಮಿಟೆಡ್‌ಗೆ ಬುಧವಾರ ನೋಟಿಸ್ ನೀಡಿದೆ. “ಫ್ಯೂಚರ್ ಕೂಡ ಪ್ರಕರಣವನ್ನು ಎಳೆಯಲು ಬಯಸುತ್ತದೆ. ಏನೇ ಆಗಲಿ ನೋಟಿಸ್ ನೀಡಿ, ವಿಚಾರಣೆಗಾಗಿ ಮುಂದಿನ ವಾರಕ್ಕೆ ಪ್ರಕರಣವನ್ನು ಪಟ್ಟಿ ಮಾಡಿ” ಎಂದು ಸಿಜೆಐ ಎನ್ ವಿ ರಮಣ ತಿಳಿಸಿದರು.
ಹೆಚ್ಚಿನ ಮಾಹಿತಿಗೆ ʼಬಾರ್ ಅಂಡ್ ಬೆಂಚ್ʼ ಇಂಗ್ಲಿಷ್ ತಾಣದ ಲಿಂಕ್ ಗಮನಿಸಿ.