14 ಜಿಲ್ಲಾ ನ್ಯಾಯಾಧೀಶರ ನೇರ ನೇಮಕಾತಿಗೆ ಅರ್ಜಿ ಆಹ್ವಾನ; ನವೆಂಬರ್‌ 17 ಅರ್ಜಿ ಸಲ್ಲಿಕೆಗೆ ಕೊನೆಯ ದಿನ

ಸರ್ಕಾರಿ ಅಭಿಯೋಜಕರು/ಸಹಾಯಕ ಸರ್ಕಾರಿ ಅಭಿಯೋಜಕರು/ಸರ್ಕಾರಿ ವಕೀಲರು ಏಳು ವರ್ಷ ಸತತವಾಗಿ ಪ್ರಾಕ್ಟೀಸ್‌ನಲ್ಲಿರುವವರೂ ನೇಮಕಾತಿಗೆ ಅರ್ಹರಾಗಿದ್ದಾರೆ.
High Court of Karnataka
High Court of Karnataka
Published on

ಕರ್ನಾಟಕ ಹೈಕೋರ್ಟ್‌ 14 ಜಿಲ್ಲಾ ನ್ಯಾಯಾಧೀಶರ ನೇರ ನೇಮಕಾತಿಗೆ ಸಂಬಂಧಿಸಿದಂತೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಿದೆ. ಈ ಪೈಕಿ 13 ಬ್ಯಾಕ್‌ಲಾಗ್‌ ಹುದ್ದೆಗಳು ಹಾಗೂ ಒಂದು ಹೊಸ ಹುದ್ದೆಯಾಗಿದೆ.

ಅಕ್ಟೋಬರ್‌ 19ರಿಂದ ಅರ್ಜಿ ಸಲ್ಲಿಕೆಗೆ ಅವಕಾಶ ಮಾಡಿಕೊಡಲಾಗಿದ್ದು, ನವೆಂಬರ್‌ 17 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಕರ್ನಾಟಕ ಹೈಕೋರ್ಟ್‌ ವೆಬ್‌ಸೈಟ್‌ ಮೂಲಕ http://karnatakajudiciary.kar.nic.in/recruitment.php ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿದಾರರು ಭಾರತದಲ್ಲಿ ಸ್ಥಾಪಿತವಾಗಿರುವ ಯಾವುದೇ ಕಾನೂನು ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದಿರಬೇಕು. ಅರ್ಜಿ ಸಲ್ಲಿಸುವವರೆಗೂ ಹೈಕೋರ್ಟ್‌ ಅಥವಾ ಅಧೀನ ನ್ಯಾಯಾಲಯದಲ್ಲಿ ವಕೀಲರಾಗಿ ಕೆಲಸ ಮಾಡಿರಬೇಕು. ಕನಿಷ್ಠ ಏಳು ವರ್ಷಗಳ ಸೇವಾ ಅನುಭವವಿರಬೇಕು.

ಸರ್ಕಾರಿ ಅಭಿಯೋಜಕರು/ಸಹಾಯಕ ಸರ್ಕಾರಿ ಅಭಿಯೋಜಕರು/ಸರ್ಕಾರಿ ವಕೀಲರು ಏಳು ವರ್ಷ ಸತತವಾಗಿ ಪ್ರಾಕ್ಟೀಸ್‌ನಲ್ಲಿರುವವರೂ ನೇಮಕಾತಿಗೆ ಅರ್ಹರಾಗಿದ್ದಾರೆ.

ಅರ್ಜಿ ಸಲ್ಲಿಕೆಗೆ ಎಸ್‌ಸಿ/ಎಸ್‌ಟಿ ಸಮಯದಾಯದ ಅಭ್ಯರ್ಥಿಗಳಿಗೆ ಗರಿಷ್ಠ 48 ವರ್ಷ, ಇತರರಿಗೆ 45 ವರ್ಷ ಮಿತಿ ಇರಲಿದೆ. ನಿವೃತ್ತ ಸೇನಾಧಿಕಾರಿಗಳಾಗಿದ್ದರೆ ಮೂರು ವರ್ಷಗಳ ಗರಿಷ್ಠ ವಿನಾಯಿತಿ ಇರಲಿದೆ. ವೇತನ ಶ್ರೇಣಿಯು ₹144840-194660 ಇರಲಿದೆ. ಆಯ್ಕೆಯಾದ ಅಭ್ಯರ್ಥಿಗಳು ಎರಡು ವರ್ಷ ಪ್ರೊಬೇಷನ್‌ ಅವಧಿಯಲ್ಲಿರಲಿದ್ದು, ಹೈಕೋರ್ಟ್‌ ಬಯಸಿದಲ್ಲಿ ಆಯ್ಕೆಯಾದ ಮಹಿಳಾ/ಪುರುಷ ಅಭ್ಯರ್ಥಿ ತರಬೇತಿಗೆ ಒಳಗಾಗಬೇಕಾಗುತ್ತದೆ.

ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗಳು ಹಾಗೂ ವೈವಾ ಸೇರಿ ಮೂರು ಹಂತದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಅರ್ಜಿಯಲ್ಲಿ ಸುಳ್ಳು ಮಾಹಿತಿ ನೀಡಿದರೆ ಅರ್ಜಿ ವಜಾ ಮಾಡುವುದಲ್ಲದೇ ಕ್ರಿಮಿನಲ್‌ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಕೆ ಎಸ್‌ ಭರತ್‌ಕುಮಾರ್‌ ಅವರು ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.

Attachment
PDF
Notification
Preview
Kannada Bar & Bench
kannada.barandbench.com