ಹೈಕೋರ್ಟ್‌ಗೆ ಇಬ್ಬರು ಸರ್ಕಾರಿ ವಕೀಲರು, ತಲಾ ಐವರು ಹೆಚ್ಚುವರಿ ಸರ್ಕಾರಿ ವಕೀಲರು, ಸರ್ಕಾರಿ ಪ್ಲೀಡರ್‌ಗಳ ನೇಮಕ
ರಾಜ್ಯ ಸರ್ಕಾರವು ಕರ್ನಾಟಕ ಹೈಕೋರ್ಟ್‌ನ ಬೆಂಗಳೂರು ಪೀಠಕ್ಕೆ ಇಬ್ಬರು ಸರ್ಕಾರಿ ವಕೀಲರು, ಐವರು ಹೆಚ್ಚುವರಿ ಸರ್ಕಾರಿ ವಕೀಲರು, ಮೂವರು ಸರ್ಕಾರಿ ಪ್ಲೀಡರ್‌ಗಳನ್ನು ಎರಡು ವರ್ಷಗಳಿಗೆ ನೇಮಕ ಮಾಡಿ ಅಧಿಸೂಚನೆ ಪ್ರಕಟಿಸಿದೆ. ಇಬ್ಬರು ಸರ್ಕಾರಿ ಪ್ಲೀಡರ್‌ಗಳನ್ನು ಹೈಕೋರ್ಟ್‌ನ ಕಲಬುರ್ಗಿ ಪೀಠಕ್ಕೆ ನೇಮಕ ಮಾಡಲಾಗಿದೆ.
ವಕೀಲ ಎಚ್ ವಿ ಮಂಜುನಾಥ ಅವರ ಸರ್ಕಾರಿ ವಕೀಲ ಹುದ್ದೆಯಿಂದ ತೆರವಾದ ಸ್ಥಾನಕ್ಕೆ ವಕೀಲ ಎಸ್ ಎಸ್ ಮಹೇಂದ್ರ, ಹೊಸದಾಗಿ ಸೃಜಿಸಿರುವ ಸರ್ಕಾರಿ ವಕೀಲರ ಹುದ್ದೆಗೆ ಕೆ ಎಸ್ ಹರೀಶ್ ಅವರನ್ನು ನೇಮಕ ಮಾಡಲಾಗಿದೆ. ಹೊಸದಾಗಿ ಸೃಜಿಸಿರುವ ಹೆಚ್ಚುವರಿ ಸರ್ಕಾರಿ ವಕೀಲರುಗಳು ಹುದ್ದೆಗೆ ಯೋಗೇಶ್ ನಾಯ್ಕ್, ಮಮತ ಶೆಟ್ಟಿ, ಸಿ ಎನ್ ಮಹದೇಶ್ವರನ್, ಕೆ ಆರ್ ರಾಜೇಂದ್ರ, ಆದಿತ್ಯ ಭಟ್ ಅವರನ್ನು ನೇಮಿಸಲಾಗಿದೆ.
ಬೆಂಗಳೂರು ಪೀಠಕ್ಕೆ ಸರ್ಕಾರಿ ಪ್ಲೀಡರ್ ಹುದ್ದೆಗೆ ಶಮಂತ್ ನಾಯ್ಕ್, ರಶ್ಮಿ ಪಾಟೀಲ್, ವಿ ಶೇಷು ಅವರನ್ನು ಕಲಬುರ್ಗಿ ಪೀಠಕ್ಕೆ ವೀರನಗೌಡ ಮಾಲಿಪಾಟೀಲ್ ಮತ್ತು ಮಾಯ ಟಿ. ರಾಜಣ್ಣ ಅವರನ್ನು ಸರ್ಕಾರಿ ಪ್ಲೀಡರ್‌ಗಳನ್ನಾಗಿ ನೇಮಿಸಿ ಸೋಮವಾರ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಯ ಅಧೀನ ಕಾರ್ಯದರ್ಶಿ ಆದಿನಾರಾಯಣ ಆದೇಶಿಸಿದ್ದಾರೆ.