
ಪ್ರಸಕ್ತ ಸಾಲಿನ ಸಾಮಾನ್ಯ ಕಾನೂನು ಪ್ರವೇಶಾತಿ ಪರೀಕ್ಷೆಯ (ಸಿಎಲ್‌ಎಟಿ- 2025) ಫಲಿತಾಂಶಗಳನ್ನು ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಒಕ್ಕೂಟದ ಜಾಲತಾಣದಲ್ಲಿ ಪ್ರಕಟಿಸಲಾಗಿದೆ.
ಅಭ್ಯರ್ಥಿಗಳು ಇಲ್ಲಿ ತಮ್ಮ ಪ್ರವೇಶ ಪತ್ರ ಸಂಖ್ಯೆ ಬಳಸಿ ಲಾಗ್- ಇನ್ ಆಗುವ ಮೂಲಕ ತಮ್ಮ ಅಂಕಗಳ ಮಾಹಿತಿ ಪಡೆಯಬಹುದಾಗಿದೆ.
ದೇಶದಲ್ಲಿರುವ 25 ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳು ಮತ್ತು ಭಾರತೀಯ ಅಂತಾರಾಷ್ಟ್ರೀಯ ಕಾನೂನು ಶಿಕ್ಷಣ ಮತ್ತು ಸಂಶೋಧನಾ ವಿಶ್ವವಿದ್ಯಾಲಯಕ್ಕೆ (ಐಐಯುಎಲ್‌ಇಆರ್) ಪ್ರವೇಶಾತಿ ಪ್ರಕ್ರಿಯೆ 10 ಜೂನ್ 2025ರಂದು ಪೂರ್ಣಗೊಳ್ಳಲಿದೆ.
ಸಿಎಲ್‌ಎಟಿ- 2025 ಪದವಿ ಪ್ರವೇಶಾತಿ ಪರೀಕ್ಷೆಯಲ್ಲಿ ಗಳಿಸಿದ ಅತ್ಯಧಿಕ ಅಂಕ 103.5 ಆಗಿದ್ದರೆ ಸಿಎಲ್‌ಎಟಿ ಸ್ನಾತಕೋತ್ತರ ಪದವಿ ಪ್ರವೇಶಾತಿ ಪರೀಕ್ಷೆಯಲ್ಲಿ ಗಳಿಸಲಾಗಿರುವ ಅತ್ಯಧಿಕ ಅಂಕ 80 ಆಗಿದೆ.
ಪರೀಕ್ಷೆಗೆ ಸಂಬಂಧಿಸಿದ ಅಹವಾಲುಗಳನ್ನು ಪರಿಶೀಲಿಸಲು ಒಕ್ಕೂಟ ಕುಂದುಕೊರತೆ ಪರಿಹಾರ ಸಮಿತಿ ರಚಿಸಿದ್ದು ಆಂಧ್ರಪ್ರದೇಶ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜಿ ರಘುರಾಮ್ ಸಮಿತಿಯ ಅಧ್ಯಕ್ಷರಾಗಿದ್ದಾರೆ.
ಅಧಿಸೂಚನೆಯ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ: